Advertisement

ಲೈಂಗಿಕ ದೌರ್ಜನ್ಯಕ್ಕೆ ಯುವತಿಯರೇ ಕಾರಣ! ಮಾತೆ ಮಹಾದೇವಿ

01:14 PM Jan 07, 2017 | Sharanya Alva |

ಧಾರವಾಡ: ಅಂದು ರಾತ್ರಿ ಲೈಂಗಿಕ ನಡೆದ ಲೈಂಗಿಕ ದೌರ್ಜನ್ಯಕ್ಕೆ ಆ ಯುವತಿಯರೇ ಕಾರಣ. ಯುವತಿಯರ ಉಡುಗೆ ತೊಡುಗೆಯೇ ಕಾರಣ ಎಂದು ಮಾತೆ ಮಹಾದೇವಿ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಡಿಸೆಂಬರ್ 31ರಂದು ರಾತ್ರಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತಂತೆ ಧಾರವಾಡದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ವಸ್ತ್ರ ಸಂಹಿತೆ ಜಾರಿಯಾದರೆ, ಅತ್ಯಾಚಾರ,ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಬೀಳುತ್ತೆ. ಹಾಗಾಗಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ರಾತ್ರಿ 12ಗಂಟೆ ನಂತರ ಯುವತಿಯರಾಗಲಿ, ಮಹಿಳೆಯರಾಗಲಿ ಮನೆ ಬಿಟ್ಟು ಹೊರಗೆ ಹೋಗಬಾರದು. ಅಷ್ಟೇ ಅಲ್ಲ ನಮ್ಮ ಉಡುಗೆ, ತೊಡುಗೆ ಕೂಡಾ ಉದ್ರೀಕಿಸುವಂತಿರಬಾರದು. ಸಾಂಸ್ಕೃತಿಕ ಅಧಃಪತನವೂ ದೌರ್ಜನ್ಯಕ್ಕೆ ಕಾರಣ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next