Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೆನ್ನೈ ಹಸುರು ಪೀಠದ ತೀರ್ಪಿನಂತೆ ಮತ್ತೆ ತಜ್ಞರಿಂದ ವರದಿ ತರಿಸಿಕೊಂಡು ಪ್ರಕ್ರಿಯೆ ನಡೆಸಬೇಕಾ ಗಿದೆ. ಇದಕ್ಕೆ ಕನಿಷ್ಠ ಒಂದು ತಿಂಗಳು ಬೇಕು. ಮೀನುಗಾರಿಕಾ ದೋಣಿಗಳು ಚಲಿಸಲು ಕಷ್ಟವಾಗುತ್ತದೆ ಎಂಬ ಸ್ಥಿತಿ ಯಲ್ಲಿ ಮಾತ್ರ ಮರಳು ದಿಬ್ಬಗಳನ್ನು ತೆಗೆಯಬೇಕೆಂದು ಹಸಿರುಪೀಠ ತಿಳಿಸಿದೆ. ಇದುವರೆಗೆ ಮೀನುಗಾರರಿಂದ ದೋಣಿ ಚಲಿಸಲು ಕಷ್ಟವಾಗು ತ್ತದೆ ಎಂಬ ಮನವಿ ಬಂದಿಲ್ಲ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 80 ಲ. ರೂ. ಕುಡಿಯುವ ನೀರಿಗಾಗಿ ಬಂದಿದೆ. ಜಿ.ಪಂ. ಅಧ್ಯಕ್ಷರ ವಿವೇಚನ ನಿಧಿಗೆ 50 ಲ. ರೂ. ಬಂದಿದೆ. ಈಗಿನ್ನೂ ಕುಡಿಯುವ ಸಮಸ್ಯೆ ಉಂಟಾಗಿಲ್ಲ. ಆರೂರು, ಬೈಂದೂರು, ಕಟಪಾಡಿ ಮೊದಲಾದೆಡೆ ಮಾತ್ರ ಸ್ವಲ್ಪ ಸಮಸ್ಯೆಯಾಗಿದೆ. ಎಪ್ರಿಲ್, ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಬಹುದು. ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.