Advertisement

ಧ್ಯೇಯವಾಕ್ಯಕ್ಕೆ ತಕ್ಕ ಧ್ಯೇಯಜೀವಿ ಎಂ.ಸೋಮಶೇಖರ ಭಟ್‌

11:54 PM Feb 14, 2024 | Team Udayavani |

ಬೆಂಗಳೂರು ವಿಧಾನಸೌಧದ ಬೃಹತ್‌ ಕಟ್ಟಡದಲ್ಲಿ “ಸರಕಾರಿ ಕೆಲಸ ದೇವರ ಕೆಲಸ’ ಎಂಬ ಧ್ಯೇಯವಾಕ್ಯವನ್ನು ಕೆತ್ತಲಾಗಿದೆ. ಉಡುಪಿಯ ನಗರಸಭೆಯ ಲಾಂಛನದಲ್ಲಿ “ತ್ವದೀಯಾಯ ಕಾರ್ಯಾಯ ಬದ್ಧಾಕಟೀಯಂ’ ಎಂಬ ಸೂಕ್ತಿ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯ ಶಾಖೆಯಲ್ಲಿ ಪಠಿಸುವ ಪ್ರಾರ್ಥನಾ ಶ್ಲೋಕದಲ್ಲಿರುವ ಒಂದು ಸಾಲಿದು. “(ಹೇ ಪ್ರಭು) ನಿನ್ನದೇ ಕಾರ್ಯಕ್ಕಾಗಿ ನಾವು ಟೊಂಕ ಕಟ್ಟಿದ್ದೇವೆ’ ಎಂದು ಈ ಸಾಲಿನ ಅರ್ಥ. ಸಂಘದ ಕೆಲಸವೆಂದರೆ ದೇವರ ಕೆಲಸವೆಂದೇ ನಂಬಿಕೆ ಇಲ್ಲಿ. ನಾವು ಮಾಡುವ ಕೆಲಸಗಳೆಲ್ಲವೂ ದೇವರಿಗೆ ಸಮರ್ಪಿತ ಎಂಬ ಧ್ಯೇಯವಾಕ್ಯ ಇಲ್ಲಿ ಪ್ರತಿಫ‌ಲಿಸುತ್ತಿದೆ.

Advertisement

1968ರಲ್ಲಿ ನಡೆದ ನಗರಸಭೆಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನಸಂಘ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿತು. ಇದೇ ವೇಳೆ ದಿಲ್ಲಿ ಮಹಾನಗರಪಾಲಿಕೆಯಲ್ಲಿಯೂ ಜನಸಂಘ ಗೆಲುವು ಸಾಧಿಸಿತ್ತು. ಉತ್ತರ ಭಾರತದಲ್ಲಿ ದಿಲ್ಲಿಯಾದರೆ, ದಕ್ಷಿಣ ಭಾರತದಲ್ಲಿ ಉಡುಪಿಯ ಪ್ರಥಮ ದಾಖಲೆಯ ಜಯ. ಈ ಚುನಾವಣೆಯಲ್ಲಿ ಆಯ್ಕೆಯಾದವರಲ್ಲಿ ಪ್ರಮುಖರೆಂದರೆ ಡಾ| ವಿ.ಎಸ್‌.ಆಚಾರ್ಯ, ಸೋಮಶೇಖರ ಭಟ್‌, ರಾಮದಾಸ ಶೆಣೈ, ಲಕ್ಷ್ಮೀಕಾಂತ ನಾಯಕ್‌ ಮೊದಲಾದವರು. ಡಾ| ವಿ.ಎಸ್‌.ಆಚಾರ್ಯ ವಯಸ್ಸಿನಲ್ಲಿ ಸೋಮಶೇಖರ ಭಟ್ಟರಿಗಿಂತ ಕಿರಿಯರು. ಆದರೆ ಜನಸಂಘದ ತಂಡ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಡಾ|ಆಚಾರ್ಯರನ್ನು. ಜನರಿಗೆ ಸ್ವತ್ಛ, ಆದರ್ಶಪ್ರಾಯದ ಆಡಳಿತ ನೀಡಬೇಕೆಂಬ ಇರಾದೆಯಿಂದ ಕಟಿಬದ್ಧರಾದ ತಂಡಕ್ಕೆ ಲಾಂಛನದಲ್ಲಿ ಮೂಡಿಸಲು ಹೊಳೆದದ್ದು ಈ ಧ್ಯೇಯವಾಕ್ಯ. ಇದರ ಹಿಂದಿರುವ ಕೃತುಶಕ್ತಿ ಸೋಮಶೇಖರ ಭಟ್‌. ಅಂದಿನಿಂದ ತೊಡಗಿ ಇದೇ ಫೆ. 4ರಂದು ಇಹಲೋಕ ತ್ಯಜಿಸುವವರೆಗೂ ಅವರು ಧ್ಯೇಯವಾಕ್ಯದಿಂದ ವಿಚಲಿತರಾಗಲಿಲ್ಲ, ಜತೆಗೆ ಮುಂದಿನ ಪೀಳಿಗೆಯೂ ಈ ಧ್ಯೇಯವಾಕ್ಯದಂತೆ (ವೈಯಕ್ತಿಕ ಜೀವನದ ಚಾರಿತ್ರ್ಯ- ಸಾರ್ವಜನಿಕ ಜೀವನದ ಚಾರಿತ್ರ್ಯ) ನಡೆಯಬೇಕೆಂದು ಭದ್ರಬುನಾದಿಯನ್ನು ಹಾಕಿದ್ದರು.

1969ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ನ ಪ್ರಥಮ ಪ್ರಾಂತ ಸಮ್ಮೇಳನದ ಪ್ರತಿನಿಧಿಗಳ ಆಗಮನ ಹೆಚ್ಚಳವಾದಾಗ ನಾಗರಿಕರಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಕೋರಿಕೊಂಡದ್ದು ಬಹುತೇಕರಿಗೆ ಗೊತ್ತು. ಆದರೆ ಇದಕ್ಕೂ ಸಾಕಷ್ಟು ಮುನ್ನ 1953ರಲ್ಲಿ ಸಂಘದ ಸರಸಂಘಚಾಲಕರಾಗಿದ್ದ ಗುರೂಜಿ ಗೋಳವಲ್ಕರ್‌ ಅವರು ಭೇಟಿ ಕೊಟ್ಟಾಗ ಇದೇ ತೆರನಾದ ಪ್ರಯೋಗವನ್ನು ಸೋಮಶೇಖರ ಭಟ್‌ ಯಶಸ್ವಿಗೊಳಿಸಿದ್ದು ಬಹುತೇಕರಿಗೆ ಗೊತ್ತಿಲ್ಲ. ಆಗ ಸಂಘಟನೆ ಬಹಳ ದುರ್ಬಲ. ಅಂದರೆ ಇರುವ ಕೆಲವೇ ಸ್ವಯಂಸೇವಕರ ಆರ್ಥಿಕ ಶಕ್ತಿಯೂ ದುರ್ಬಲ. ಆಗ ಆಯೋಜನೆಗೊಂಡದ್ದು ಪಥಸಂಚಲನ ಮತ್ತು ಸಾರ್ವಜನಿಕ ಸಮಾರಂಭ. 1,000 ಸ್ವಯಂಸೇವಕರ ನಿರೀಕ್ಷೆ ಇತ್ತು. ಇವರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸುವುದು ಸವಾಲಾಗಿತ್ತು. ಇಷ್ಟು ಜನರಿಗಾಗುವ ಕಟ್ಟಡವೇ ಇದ್ದಿರಲಿಲ್ಲ. ಕಾರ್ಯಕ್ರಮ ಮುಗಿದ ಬಳಿಕ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಇರಲಿಲ್ಲ. ಮನೆಗಳಲ್ಲಿ ಸ್ವಯಂಸೇವಕರನ್ನು ಉಳಿಸಿಕೊಳ್ಳಲು ವಿನಂತಿಸಿದಾಗ ಒಬ್ಬೊಬ್ಬರನ್ನು ಹೆಚ್ಚಿಗೆ ಕಳುಹಿಸಿ ಎಂದು ಮನೆಯವರಿಂದಲೇ ಬೇಡಿಕೆ ಬಂತು. ದೇಶ ಮಟ್ಟದಲ್ಲಿ ಉಡುಪಿಯ ಹಲವು ಯಶಸ್ವೀ ಪ್ರಯೋಗಗಳಲ್ಲಿ ಇದೂ ಒಂದು. ಇಂತಹ ಹಲವು ಪ್ರಯೋಗಗಳ ಹಿಂದೆ ನಿಂತು ಕೆಲಸ ಮಾಡಿದವರು ಸೋಮಶೇಖರ ಭಟ್‌. “ತ್ವದೀಯಾಯ ಕಾರ್ಯಾಯ ಬದ್ಧಾಕಟೀಯಂ’ ಎಂಬಂತೆ ಕಟಿಬದ್ಧತೆಯೇ ಯಶಸ್ವೀ ಪ್ರಯೋಗಗಳ ಹಿಂದಿರುವ ಪವಾಡದ ಶಕ್ತಿ. ಇಂತಹ ಹಲವು ಪ್ರಯೋಗಗಳಿಂದಾಗಿಯೇ ಲಾಲ್‌ಕೃಷ್ಣ ಆಡ್ವಾಣಿಯಂತಹ ಹಿರಿಯ ನಾಯಕರು “ಉಡುಪಿ ಈಸ್‌ ದಿ ಕ್ರೆಡ್ಲ್ ಆಫ್ ಅವರ್‌ ಪಾರ್ಟಿ’ ಎನ್ನುತ್ತಿದ್ದರು.

ಡಾ| ಆಚಾರ್ಯ ಮತ್ತು ಸೋಮಶೇಖರ ಭಟ್‌ ಅವರ ಬಾಂಧವ್ಯವನ್ನು ಶಬ್ದಗಳಿಂದ ವರ್ಣಿಸಲಾಗದು. ಡಾ| ಆಚಾರ್ಯರ ನೇತೃತ್ವದ ಎಲ್ಲ ಯಶಸ್ವೀ ಪಾತ್ರಗಳಲ್ಲಿ ಸೋಮಶೇಖರ ಭಟ್ಟರ ಛಾಪು ಇರುತ್ತಿತ್ತು. 2011ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಾಗ ಡಾ|ಆಚಾರ್ಯರಿಗೆ ಬೆಂಗಳೂರಿನಿಂದ ಕರೆ ಬಂದಿತ್ತು. ಸಚಿವ ಸಂಪುಟದಲ್ಲಿ ನಂಬರ್‌ 2 ಆಗಿದ್ದವರು ಡಾ|ಆಚಾರ್ಯರಾದ ಕಾರಣ ಕರೆಯ ಹಿಂದಿನ ಉದ್ದೇಶದಲ್ಲಿ ಗೊಂದಲವಿರಲಿಲ್ಲ. ಈ ಬಾರಿ ಮಾತ್ರ ಡಾ| ಆಚಾರ್ಯರು ಸೋಮಶೇಖರ ಭಟ್ಟರನ್ನು ಬೆಂಗಳೂರಿಗೆ ಕರೆದೊಯ್ಯಲಿಲ್ಲ. ಬೆಂಗಳೂರಿನ ಸಭೆಗೆ ಹೋದ ಡಾ|ಆಚಾರ್ಯ ತಾನು ಮುಖ್ಯಮಂತ್ರಿ ಪದಕ್ಕೆ ಒಲ್ಲೆ ಎಂದು ವಾಪಸಾದರು. ಇದನ್ನು ಕೇಳಿದ ಸೋಮಶೇಖರ ಭಟ್ಟರಿಗೆ ಆದ ನೋವು ಅಪಾರ. ಡಾ|ಆಚಾರ್ಯರಿಗೆ ಮುಖ್ಯಮಂತ್ರಿ ಪದವಿ ಸಿಗಬೇಕು, ಉಡುಪಿ, ಕರ್ನಾಟಕ ರಾಜ್ಯದ ಅಭಿವೃದ್ಧಿ ಈ ಮೂಲಕ ಆಗಬೇಕೆಂಬ ಉತ್ಕಟೇಚ್ಛೆ ಭಟ್‌ರಿಗೆ ಇತ್ತು. “ಆಚಾರ್ಯ ಉಡುಪಿಯ ಅಮೂಲ್ಯ ಆಸ್ತಿ. ಪಕ್ಷದ ಅನಘÂì ರತ್ನ. ಉಡುಪಿ ಕರ್ನಾಟಕಕ್ಕೆ ಮಾತ್ರವಲ್ಲ ದೇಶಕ್ಕೆ ನೀಡಿದ ಅಮೂಲ್ಯ ಕೊಡುಗೆ. ಆಚಾರ್ಯ ಬಿಜೆಪಿಯ ಮಾಸ್ಟರ್‌ ಬ್ರೈನ್‌. ಅವರಿಗೆ ಏನೂ ತೊಂದರೆಯಾಗಬಾರದು’ ಎನ್ನುತ್ತಿದ್ದವರು ಭಟ್‌. ಭಟ್ಟರ ಜೀವನದಲ್ಲಿ ಇನ್ನೊಬ್ಬ ಆಚಾರ್ಯರ ಪ್ರಮುಖ ಪಾತ್ರವಿದೆ. ಭಟ್ಟರನ್ನು ಆರೆಸ್ಸೆಸ್‌ ಶಾಖೆಗೆ ಕರೆತಂದ ವ್ಯಕ್ತಿ ಇತ್ತೀಚಿಗಷ್ಟೇ ನಿಧನ ಹೊಂದಿದ ನಾಗಾಲ್ಯಾಂಡ್‌ ರಾಜ್ಯದ ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯರೇ ಈ ಆಚಾರ್ಯ. ಯಾರಾದರೂ ಸಬಲ ಹುದ್ದೆ ಬೇರೊಬ್ಬರಿಗೆ ಸಿಗಲಿ ಎಂದು ಹಾರೈಸುವ ಎಷ್ಟು ಜನರು ಸಿಗಬಹುದು? ಇದಕ್ಕಾಗಿಯೋ ಏನೋ ಸುಭಾಷಿತಕಾರರೊಬ್ಬರು ಇಂತಹವರನ್ನು ಕುರಿತಾಗಿಯೇ ಹೀಗೆ ಬಣ್ಣಿಸಿದ್ದಾರೆ:
ಅಸಂಖೈರಪಿ ನಾತ್ಮೀಯೈರಲೈರಪಿ ಪರಸ್ಥಿತೈಃ| ಗುಣೈಃ ಸಂತಃ ಪ್ರಹೃಷ್ಯಂತಿ ಚಿತ್ರಮೇಷಾಂ ವಿಚೇಷ್ಟಿತಮ್‌|| (ನ್ಯಾಯಮಂಜರೀ)ತಮ್ಮಲ್ಲಿ ಬೇಕಾದಷ್ಟು ಒಳ್ಳೆ ಗುಣಗಳಿದ್ದರೂ ಬೇರೆಯವರಲ್ಲಿರುವ ಗುಣಗಳನ್ನು ತಿಳಿದು ಸತು³ರುಷರು ಆನಂದಿಸುತ್ತಾರೆ.

ಕೌಮಾರ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next