ಪಿರಿಯಾಪಟ್ಟಣ: ತಾಲೂಕಿನ ಎಂ.ಶೆಟ್ಟಹಳ್ಳಿ ಆರೋಗ್ಯ ಉಪ ಕೇಂದ್ರವು ಹಲವು ವರ್ಷಗಳಬಳಿಕ ಮಂಗಳವಾರದಿಂದಪುನಾರಂಭಗೊಂಡಿದ್ದು, ಸಾರ್ವಜನಿಕರಿಗೆ ಚಿಕಿತ್ಸೆಜೊತೆಗೆ ಅರ್ಹರಿಗೆ ಕೋವಿಡ್ ಲಸಿಕೆಯನ್ನೂ ಹಾಕಲಾಯಿತು.
“ಆಸ್ಪತ್ರೆ ಬಾಗಿಲೇಮುಚ್ಚಿರುವಾಗ ಚಿಕಿತ್ಸೆಇನ್ನೆಲ್ಲಿ?” ಎಂಬ ಶೀರ್ಷಿಕೆಯಡಿ ಏ.5ರಂದು ಚೆಲ್ಲಲಾಗಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬುಸೋಮವಾರ ಗ್ರಾಮಕ್ಕೆ ಭೇಟಿ ನೀಡಿ, ಆಸ್ಪತ್ರೆ ಆವರಣವನ್ನು ಸ್ವತ್ಛಗೊಳಿಸಿ, ಚಿಕಿತ್ಸೆ ನೀಡಲುಕ್ರಮ ಕೈಗೊಳ್ಳಲು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಶೆಟ್ಟಹಳ್ಳಿ ಆರೋಗ್ಯ ಉಪಕೇಂದ್ರವುಮಂಗಳವಾರ ಕಳೆಗಟ್ಟಿದ್ದು, ಪುನಾರಂಭಗೊಂಡಿದ್ದರಿಂದ ಗ್ರಾಮಸ್ಥರು ಸಂತಸ ಪಟ್ಟರು.
ವೈದ್ಯಾಧಿಕಾರಿ ಡಾ.ಫರಾನಾ ಮತ್ತು ಆಶಾ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿಹಾಗೂ ಮಹಿಳಾ ಆರೋಗ್ಯ ಸಹಾಯಕರಸಹಕಾರದಿಂದ ಎಂ.ಶೆಟ್ಟಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ನೀಡಲಾಯಿತು. ಮೊದಲ ದಿನವೇ ಸುಮಾರು20 ಮಂದಿಗೆ ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಡಾ.ಶರತ್ ಬಾಬು ಮಾತನಾಡಿ, ಗ್ರಾಮಸ್ಥರಸಹಕಾರವಿದ್ದರೆ ಎಂತಹ ಜಟಿಲ ಸಮಸ್ಯೆಗಳನ್ನುಬಗೆಯರಿಸಲು ಸಾಧ್ಯ ಎಂಬುದನ್ನು ಊರಿನ ಯುವಕರು ಹಾಗೂ ಪತ್ರಕರ್ತರು ಮಾಡಿ ತೋರಿಸಿದ್ದಾರೆ. ಇಲಾಖೆ ಇರುವುದೇ ಜನರ ಸೇವೆಗಾಗಿ. ಕೋವಿಡ್ ವೈರಸ್ ಸಮಸ್ಯೆ ಮುಗಿದರೂ ನಮ್ಮಇಲಾಖೆ ಇರುತ್ತದೆ. ಜನತೆಗೆ ಬೇಕಾದ ಆರೋಗ್ಯ ಸೇವೆ ನೀಡುತ್ತದೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಲಸಿಕೆ ಪಡೆಯಿರಿ: ವೈದ್ಯಾಧಿಕಾರಿ : ಈ ಆಸ್ಪತ್ರೆ ಮುಚ್ಚಲು ಏನೇ ಕಾರಣಗಳಿದ್ದರೂ ಮುಂದಿನದಿನಗಳಲ್ಲಿ ನಿರಂತರ ಸೇವೆ ನೀಡಲು ನಮ್ಮ ಸಿಬ್ಬಂದಿಸಿದ್ಧರಿದ್ದಾರೆ. ಅವರಿಗೆ ಗ್ರಾಮದ ಸಹಕಾರ ಮತ್ತು ಬೆಂಬಲಬೇಕಿದೆ. ಜನತೆ ನಮ್ಮ ಸಿಬ್ಬಂದಿಗಳಿಗೆ ಸಹಕಾರ ಮತ್ತುಆತ್ಮಸ್ಥೆರ್ಯ ನೀಡಿದರೆ ಅವರ ಸ್ಥಳೀಯವಾಗಿ ವಾಸವಿದ್ದುಚಿಕಿತ್ಸೆ ನೀಡುತ್ತಾರೆ ಮತ್ತು ಸರ್ಕಾರ ನೀಡುವ ಆದೇಶವನ್ನುನಿಷ್ಠೆಯಿಂದ ಪಾಲಿಸುತ್ತಾರೆ. 45 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯುವ ಮೂಲಕ ಸರ್ಕಾರದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಶರತ್ ಬಾಬು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಾಹಿತಿ ಎಂ.ಎಸ್.ಮಹದೇವ್, ಗ್ರಾಪಂ ಸದಸ್ಯರಾದ ರಾಜೇಗೌಡ, ಮಾಲಾಶ್ರೀ, ಯುವಮುಖಂಡ ಶಿವರಾಜ್ ವೈದ್ಯರಾದ ಡಾ.ಫರಾನ ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.