Advertisement

ಭಿಕ್ಷೆ ಬೇಡಿ ಮಂತ್ರಿಯಾದವರು ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾರೆ: ರೇಣುಕಾಚಾರ್ಯ ಕಿಡಿ

01:30 PM Jun 07, 2021 | Team Udayavani |

ಬೆಂಗಳೂರು:, ಕೆಲವರಿಗೆ ತಮ್ಮ ಪಕ್ಕದ ಕ್ಷೇತ್ರವನ್ನು ಗೆಲ್ಲಿಸುವ ತಾಕತ್ತಿಲ್ಲ. ಆದರೂ ಕೆಲವರು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಾರೆ. ಯತ್ನಾಳ್ ನಂತವರು ಹುಚ್ಚುಚ್ಚುರಾಗಿ ಮಾತಾಡುತ್ತಾರೆ. ಚುನಾವಣೆಯಲ್ಲಿ ಸೋತವರು ಭಿಕ್ಷೆ ಬೇಡಿ ಮಂತ್ರಿಯಾಗಿದ್ದಾರೆ. ಅವರು ಯಡಿಯೂರಪ್ಪ ನವರ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರು ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಡಿಯೂರಪ್ಪ ಹೇಳಿಕೆ ಸರಿಯಾಗಿ ಗಮನಿಸಿಲ್ಲ. ಯಾಕೆಂದರೆ ನಾನು ಕ್ಷೇತ್ರದಲ್ಲಿ ಕೋವಿಡ್ ಗಡೆ ಗಮನ ಕೊಟ್ಟಿದ್ದೇನೆ. ಆದರೆ ಕೋವಿಡ್ ಸಂದರ್ಭದಲ್ಲಿ ಕೆಲವರು ದೆಹಲಿಗೆ ಹೋಗಿ ಏನೇನೋ ಮಾಡೋದು ಸರಿಯಲ್ಲ.  ಯಡಿಯೂರಪ್ಪನವರು ಇಳಿ ವಯಸ್ಸಿನಲ್ಲೂ ಸಮರ್ಥವಾಗಿ ಕೋವಿಡ್ ತಡೆಗೆ ಶ್ರಮಿಸುತ್ತಿದ್ದಾರೆ. ಯಡಿಯೂರಪ್ಪನವರಿಗೆ ಯಾರೋ ಒಂದಿಬ್ಬರು ಅಪಪ್ರಚಾರ ಮಾಡುವ ಕೆಲಸ ಮಾಡ್ತಿದ್ದಾರೆ ನಾನು ಇದರ ಬಗ್ಗೆ ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದರು.

ರಾಜೀನಾಮೆ ಪ್ರಶ್ನೆಯಿಲ್ಲ: ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ.ನಾನು ನನ್ನ ಆತ್ಮಸಾಕ್ಷಿಯಾಗಿ ಎದೆ ಮುಟ್ಟಿಕೊಂಡು ಹೇಳುತ್ತೇನೆ. ನನ್ನ ಬಳಿ ಸಹಿ ಸಂಗ್ರಹ ಮಾಡಿರುವ 65ಕ್ಕೂ ಹೆಚ್ಚು ಶಾಸಕರ ಪತ್ರ ಇದೆ. ಯಡಿಯೂರಪ್ಪರೇ ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಬರೆದಿರುವ ಪತ್ರ. ಅದನ್ನು ಕೋವಿಡ್ ಮುಗಿದ ಕೂಡಲೇ ದೆಹಲಿಗೆ ಹೋಗಿ ಹೈಕಮಾಂಡ್ ಗೆ ತಲುಪಿಸುತ್ತೇವೆ. ಪತ್ರದಲ್ಲಿ ಯಡಿಯೂರಪ್ಪ ವಿರುದ್ಧ ಮಾತಾನಾಡಿರುವವರ ವಿರುದ್ದವೂ ಕ್ರಮ ಆಗಬೇಕು ಎಂಬುದಿದೆ ಎಂದ ರೇಣುಕಾಚಾರ್ಯ ಹೇಳಿದರು.

ನನಗೆ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಪ್ರಹ್ಲಾದ್ ಜೋಷಿ ಕರೆ ಮಾಡಿದ್ದರು. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಅರುಣ್ ಸಿಂಗ್ ಹಾಗೂ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಜೊತೆಗೆ ಇಂತಹ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಎಲ್ಲಾ ಆಗಬಾರದು ಎಂದೂ ಹೇಳಿದ್ದಾರೆ. ಸಹಿ ಸಂಗ್ರಹವನ್ನು ನಾವೇನು ಕದ್ದು ಮುಚ್ಚಿಮಾಡಿಲ್ಲ. ಅಮಿತ್ ಷಾ ಸೇರಿದಂತೆ ಎಲ್ಲಾ ರಾಷ್ಟ್ರೀಯ ನಾಯಕರಿಗೆ ಪತ್ರ ಕಳುಹಿಸ್ತೇವೆ ಎಂದರು.

ಇದನ್ನೂ ಓದಿ:ಮುಖ್ಯಮಂತ್ರಿ ಬದಲಾವಣೆ ಅಷ್ಟು ಸುಲಭದ ಕೆಲಸವಲ್ಲ: ಸಚಿವ ಬಿ.ಸಿ. ಪಾಟೀಲ್

Advertisement

ಸಹಿ ಸಂಗ್ರಹದ ಹಿಂದೆ ವಿಜಯೇಂದ್ರ ಇದ್ದಾರೆ ಎಂದು ಕೆಲವರು ಹೇಳುತ್ತಾರೆ. ಅವರು ಮಾತು ಕೇಳಿ ಮಾಡುವಂತದ್ದು ನಮಗೇನಿದೆ. ನಾವು ಸ್ವಹಿಚ್ಚೆಯಿಂದ ಸಹಿ ಸಂಗ್ರಹ ಮಾಡಿದ್ದೇವೆ. ಸಿಎಂ ವಿರುದ್ಧ ಮಾತನಾಡುವವರಿಂದ ಪಕ್ಷಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಇವರು ವಿರುದ್ದ ಕ್ರಮ ಆಗಬೇಕು. ಜೊತೆಗೆ ಯಡಿಯೂರಪ್ಪರೇ ಸಿಎಂ ಸ್ಥಾನದಲ್ಲಿ ಮುಂದುವರೆಯಬೇಕು . ಹೀಗಂತ ಸಹಿ ಸಂಗ್ರಹ ಪತ್ರ ಬರೆಯಲಾಗಿದೆ. ಅದನ್ನು ಶೀಘ್ರವೇ ಹೈಕಮಾಂಡ್ ಗೆ ಕಳುಹಿಸುತ್ತೇವೆ ಎಂದು ಎಂಪಿ ರೇಣುಕಾಚಾರ್ಯ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next