Advertisement

ಹುಟ್ಟೂರಿನ ಡಿಜಿಟಲ್ ಗ್ರಂಥಾಲಯಕ್ಕೆ 5 ಸಾವಿರ ಪುಸ್ತಕಗಳನ್ನು ನೀಡಿದ ಎಮ್ ಕಷ್ಣಮೂರ್ತಿ

08:33 PM Jun 10, 2022 | Team Udayavani |

ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿಯ ಹುಲೀಕುಂಟೆ ಗ್ರಾಪಂ ಗೆ ಸೇರಿದ ಗ್ರಂಥಾಲಯಕ್ಕೆ, ತಾನು ಹುಟ್ಟಿ ಬೆಳೆದ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು  ಡಿಜಿಟಲ್  ಗ್ರಂಥಾಲಯಕ್ಕೆ  5ಸಾವಿರ  ಪುಸ್ತಕಗಳನ್ನು ನಿವೃತ್ತ ಸರ್ಕಾರಿ ನೌಕರರಾದ ಎಮ್. ಕೃಷ್ಣಮೂರ್ತಿ ಉಚಿತವಾಗಿ ನೀಡಿದರು.

Advertisement

ಎಮ್ .ಕೃಷ್ಣಮೂರ್ತಿ ಮಾತನಾಡಿ, ನಾನು ಹುಟ್ಟಿ ಬೆಳೆದ ಊರಿಗೆ ಏನಾದರೂ ಸಹಾಯ ಮಾಡಬೇಕು ಎಂಬುದೇ ನನ್ನ ಆಶಯ. ಅದರಂತೆ ಗ್ರಂಥಾಲಯದಲ್ಲಿ ಓದುವ ಮಕ್ಕಳಿಗೆ  ಅನುಕೂಲವಾಗಲಿ ಎಂದು ಸುಮಾರು 5ಸಾವಿರ ಪುಸ್ತಕಗಳನ್ನು ಉಚಿತವಾಗಿ ನೀಡಿದ್ದೇನೆ. ಮುಂದೆಯೂ ನನ್ನ ಕೈಲಾದ ಮಟ್ಟಿಗೆ ನನ್ನ ಗ್ರಾಮಕ್ಕೆ ಸಹಾಯ ಮಾಡಲು ನಾನು ಸದಾ ಸಿದ್ಧನಿರುತ್ತೇನೆ ಎಂದರು.

ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಮಾತನಾಡಿ, ಗ್ರಾಮದಲ್ಲಿ ಗ್ರಂಥಾಲಯ ಮಾಡುವುದಷ್ಟೇ ಅಲ್ಲ ಅದರಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಊರಿನ ಗ್ರಾಮಸ್ಥರಿಗೆ ಓದಲು ಅನುಕೂಲವಾಗುವ  ಪುಸ್ತಕಗಳನ್ನು  ಸಂಗ್ರಹ  ಮಾಡಿಕೊಡಬೇಕು. ಆಗಲೇ ನಾವು ಗ್ರಂಥಾಲಯ ಮಾಡಿದ್ದಕ್ಕೂ ಸಾರ್ಥಕ. ಇದೇ ರೀತಿ ಹೆಚ್ಚಿನ ಸಹಾಯವನ್ನು ಮಾಡುವ ಶಕ್ತಿ ಕೃಷ್ಣಮೂರ್ತಿ ಅವರಿಗೆ ಭಗವಂತ ನೀಡಲಿ ಎಂದರು.

ಗ್ರಾಮಸ್ಥರಾದ ಕೃಷ್ಣಮೂರ್ತಿ ಮತನಾಡಿ, ನಮ್ಮೂರಿನಲ್ಲಿ ಹುಟ್ಟಿ ಬೆಳೆದು ವಿಧಾನಸೌಧದಲ್ಲಿ ಸರ್ಕಾರಿ ಕೆಲಸವನ್ನು ನಿರ್ವಹಿಸಿ, ನಿವೃತ್ತಿ ಹೊಂದಿರುವ ಎಂ ಕೃಷ್ಣಮೂರ್ತಿ ರವರ ಸಾಧನೆ ಬಹು ದೊಡ್ಡದು ಅವರು ಚಿಕ್ಕಂದಿನಿಂದಲೂ ಪುಸ್ತಕಗಳನ್ನು ಓದುವ ಆಸಕ್ತಿ ಅವರಿಗೆ ಅವರು ಅಂದಿನಿಂದ ಓದಿದ್ದ ಪುಸ್ತಕಗಳನ್ನು ಈಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಪುಸ್ತಕಗಳು ಓದುವುದು ಬಹುಮುಖ್ಯವಾಗಿರುತ್ತದೆ ಎಂದು ಸುಮಾರು 5ಸಾವಿರ ಪುಸ್ತಕಗಳನ್ನು ನಮ್ಮ ಗ್ರಂಥಾಲಯಕ್ಕೆ ಉಚಿತವಾಗಿ ನೀಡಿದ್ದಾರೆ. ಅವರಿಗೆ ನಮ್ಮ ಗ್ರಾಮ ಪಂಚಾಯಿತಿಯ ಎಲ್ಲ ಜನರ  ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು .

ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಉಪಾಧ್ಯಕ್ಷೆ ಅನ್ನಪೂರ್ಣ ಪ್ರಕಾಶನ ಗ್ರಂಥಾಲಯದ ಮೇಲ್ವಿಚಾರಕ ಲೋಕೇಶ್ ಮತ್ತು ಗ್ರಾಮಸ್ಥರು ಹಾಜರಿದ್ದರು .

Advertisement
Advertisement

Udayavani is now on Telegram. Click here to join our channel and stay updated with the latest news.

Next