Advertisement

NDAಗೆ 400 ಸ್ಥಾನ ಸಿಗಲಿದೆ ಎಂಬ ಖರ್ಗೆಜೀ ಭವಿಷ್ಯ ನಿಜವಾಗಲಿದೆ: ಪ್ರಧಾನಿ ಮೋದಿ ತಿರುಗೇಟು

03:55 PM Feb 07, 2024 | Team Udayavani |

ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಉದ್ದೇಶಿಸಿ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಪ್ರಮುಖ ಗುರಿಯಾಗಿರಿಸಿ ಚಾಟಿ ಬೀಸಿದರು.

Advertisement

ಇದನ್ನೂ ಓದಿ:ಲೋಕಸಭಾ ಚುನಾವಣೆಗಾಗಿ ಜನರ ಮನಸ್ಸನ್ನು ಬೇರೆಡೆ ತೆಗೆದುಕೊಂಡು ಹೋಗಲು ಕಾಂಗ್ರೆಸ್ ಯತ್ನ: ಆರಗ

“ಕಳೆದ ವಾರ ರಾಜ್ಯಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ಹಿರಿಯ ಮುಖಂಡ ಖರ್ಗೆಯವರು ಬಿಜೆಪಿಗೆ 400 ಸ್ಥಾನ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆಯವರ ಭವಿಷ್ಯ ನಿಜವಾಗಲಿದೆ ಎಂಬ ಭರವಸೆ ನನ್ನದಾಗಿದೆ. ಎನ್‌ ಡಿಎಗೆ 400 ಸ್ಥಾನ ದೊರಕಬೇಕೆಂಬ ಖರ್ಗೆಯವರ ಆಶೀರ್ವಾದವನ್ನು ಸ್ವಾಗತಿಸುತ್ತೇನೆ” ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದರು.

ಕಳೆದ ಶುಕ್ರವಾರ ರಾಜ್ಯಸಭೆಯಲ್ಲಿ ಖರ್ಗೆಯವರು ಮಹಿಳಾ ಪ್ರಾತಿನಿಧ್ಯದ ಕುರಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ, ಎನ್‌ ಡಿಎಗೆ ಲೋಕಸಭೆಯಲ್ಲಿ ಪೂರ್ಣ ಬಹುಮತ ಇದೆ. ನಿಮಗೆ ಇಷ್ಟೊಂದು ಬಹುಮತ ಇದೆ, ಮೊದಲು 330, 334 ಇತ್ತು, ಈಗ 400 ಸ್ಥಾನದ ಗಡಿ ದಾಟುತ್ತೀರಿ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು 400 ಸ್ಥಾನಗಳಲ್ಲಿ ಜಯಗಳಿಸುತ್ತೇವೆ ಎಂಬ ಗುರಿಯ ಬಗ್ಗೆ ಖರ್ಗೆಜೀಯವರು ಕೊನೆಗೂ ಸತ್ಯ ನುಡಿದಿದ್ದಾರೆ.

Advertisement

ಖರ್ಗೆಯವರು ರಾಜ್ಯಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿರುವುದು ಸಂತಸ ತಂದಿದೆ. ಆದರೆ ಅವರಿಗೆ ಇಷ್ಟೊಂದು ಮಾತನಾಡುವ ಸ್ವಾತಂತ್ರ್ಯ ಹೇಗೆ ಬಂತು ಎಂದು ಅಚ್ಚರಿಯಾಯಿತು. ಕೊನೆಗೆ ನನಗೆ ಹೊಳೆಯಿತು ಅಂದು ಅವರ ಪಕ್ಷದ ಇಬ್ಬರು ಕಮಾಂಡರ್‌ ಗಳು ಗೈರುಹಾಜರಾಗಿದ್ದರು. ಆ ಅವಕಾಶವನ್ನು ಖರ್ಗೆಜೀ ಬಳಸಿಕೊಂಡಿದ್ದಾರೆ. ಅವರು ಮಾತನಾಡುತ್ತ ರನ್‌ ಬಾರಿಸುತ್ತಲೇ ಹೋಗಿದ್ದರು. ಐಸಾ ಮೌಕಾ ಫಿರ್‌ ಕಹಾ ಮಿಲೇಗಾ ಎಂಬ ಹಾಡನ್ನು ಅವರು ಕೇಳಿರಬಹುದು” ಎಂದು ಪ್ರಧಾನಿ ಮೋದಿ ಹೇಳಿದರು.

ಶುಕ್ರವಾರ ರಾಜ್ಯಸಭೆಯ ಕಲಾಪದಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌ ಮತ್ತು ಕೆಸಿ ವೇಣುಗೋಪಾಲ್‌ ಗೈರುಹಾಜರಾಗಿದ್ದರು. ಈ ಇಬ್ಬರ ಹೆಸರನ್ನು ಉಲ್ಲೇಖಿಸಿದೇ ಪ್ರಧಾನಿ ಮೋದಿ ಇಬ್ಬರು ಕಮಾಂಡರ್‌ ಗಳು ಎಂದು ಹೇಳಿ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next