Advertisement
ಕವಿ, ನಾಟಕಕಾರ, ಸಂಭಾಷಣೆ ಬರೆಯುವ ಕಲೆ ಅವರಿಗೆ ಸಿದ್ಧಿಸಿತ್ತು. ಸ್ವತಂತ್ರ ಭಾರತದ ಗಮನಾರ್ಹ ರಾಜಕಾರಣಿ ಆಗಿದ್ದ ಅವರು, ಇದೆಲ್ಲಕ್ಕಿಂತಲೂ ಹೆಚ್ಚಾಗಿ ಕ್ರಿಕೆಟ್‌ನ ಕಟ್ಟಾ ಅಭಿಮಾನಿಯಾಗಿದ್ದರು. ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವುದಕ್ಕಾಗಿಯೇ ಕರುಣಾನಿಧಿ ಹಲವು ಸಭೆಗಳು, ಕಾರ್ಯಕ್ರಮಗಳು ಹಾಗೂ ಗಣ್ಯರು, ಅಧಿಕಾರಿಗಳ ಭೇಟಿಯನ್ನೂ ತಪ್ಪಿಸಿದ್ದರು.
ಕರುಣಾನಿಧಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಕಪ್ತಾನ ಕಪಿಲ್‌ದೇವ್ ಅವರ ಅಭಿಮಾನಿಯೂ ಆಗಿದ್ದರು. ಆದರೆ, ಅವರ ನೆಚ್ಚಿನ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ. ಅವರನ್ನು ಚೆನ್ನೈಯ ದತ್ತುಪುತ್ರ ಎಂದೇ ಕರುಣಾ ಕರೆಯುತ್ತಿದ್ದರು. ಧೋನಿ ಕ್ರೀಡಾಂಗಣದಲ್ಲಿ ಹರಿಸುತ್ತಿದ್ದ ಮಿಂಚನ್ನು ಕಣ್ತುಂಬಿಕೊಳ್ಳಲೆಂದೇ ಕರುಣಾನಿಧಿ ಸಿಎಸ್‌ಕೆ ತಂಡದ ಪಂದ್ಯಗಳನ್ನು ಬಿಡದೆ ವೀಕ್ಷಿಸುತ್ತಿದ್ದರು. ಆದರೆ, ಶಸ್ತ್ರಚಿಕಿತ್ಸೆ ಬಳಿಕ ಕ್ರೀಡಾಂಗಣಕ್ಕೆ ಹೋಗುವ ಬದಲು ಮನೆಯಲ್ಲೇ ಟೀವಿಯಲ್ಲಿ ಪಂದ್ಯ ಗಳನ್ನು ನೋಡುವುದು ಅವರಿಗೆ ಅನಿವಾರ್ಯವಾಯಿತು.
Related Articles
Advertisement
ಭಾರತದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರನ್ನೂ ಕರುಣಾನಿಧಿ ಬಹುವಾಗಿ ಮೆಚ್ಚಿಕೊಂಡಿದ್ದರು. ತಮಿಳುನಾಡಿನ ಅಳಿಯ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಕರುಣಾನಿಧಿ ನಿವಾಸಕ್ಕೆ ಆಗಾಗ ಭೇಟಿ ನೀಡುತ್ತಿದ್ದರು.
“ನಿಮ್ಮ ಉಪಸ್ಥಿತಿಯೇ ಭೂಷಣ’ಕೇಂದ್ರ ಸರಕಾರ ಸಚಿನ್ ತೆಂಡುಲ್ಕರ್ ಅವರಿಗೆ ಭಾರತರತ್ನ ಪ್ರದಾನ ಮಾಡಲು ನಿರ್ಧರಿಸಿದಾಗ, “ನೀವು (ತೆಂಡುಲ್ಕರ್) ಇತಿಹಾಸದ ಕಡೆಗೆ ಸಾಗಿದ್ದೀರಿ. ಅಲ್ಲಿ ನಿಮ್ಮ ಉಪಸ್ಥಿತಿಯೇ ಭೂಷಣ. ನಿಮ್ಮ ಅಮೋಘ ಸಾಧನೆಗಳು, ದಾಖಲೆಗಳನ್ನು ಪರಿಗಣಿಸಿದರೆ ಸರಕಾರ ಸಹಜವಾಗಿಯೇ ನಿಮಗೆ ಭಾರತರತ್ನ ಘೋಷಿಸಿದೆ. ಕ್ರೀಡೆಗೆ ನಿಮ್ಮಿಂದಲೇ ಔನ್ನತ್ಯ ಒದಗಿದೆ’ ಎಂದು ಕರುಣಾನಿಧಿ ಶ್ಲಾ ಸಿದ್ದರು. ಸಮಾರಂಭವೊಂದರಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಕರುಣಾನಿಧಿ ಸಮ್ಮಾನ.