Advertisement

ಕೊರೊನಾ ಲಸಿಕೆ ಪಡೆದ ಪರಿಷತ್‌ ಉಪಸಭಾಪತಿ ಪ್ರಾಣೇಶ ದಂಪತಿ

07:15 PM Mar 03, 2021 | Team Udayavani |

ಚಿಕ್ಕಮಗಳೂರು: ವಿಧಾನ ಪರಿಷತ್‌ ಉಪ ಸಭಾಪತಿ ಎಂ.ಕೆ.ಪ್ರಾಣೇಶ್‌ ದಂಪತಿ ಮೂಡಿಗೆರೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌-19 ಮೊದಲ ಲಸಿಕೆ ಪಡೆದುಕೊಳ್ಳುವ ಮೂಲಕ ಜನರಲ್ಲಿ ಲಸಿಕೆ ಬಗ್ಗೆ ಇರುವ ಭಯ ಹೋಗಲಾಡಿಸಿದರು. ಮಂಗಳವಾರ ಮೂಡಿಗೆರೆ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಎಂ.ಕೆ.ಪ್ರಾಣೇಶ್‌ ಹಾಗೂ ಪತ್ನಿ ಆಗಮಿಸಿ ಕೋವಿಡ್‌ ಲಸಿಕೆ ಪಡೆದುಕೊಂಡರು.

Advertisement

ಈ ಹಿಂದೆ ಎಂ.ಕೆ.ಪ್ರಾಣೇಶ್‌ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುವ ಮೂಲಕ ಮಾದರಿಯಾಗಿದ್ದರು. ವಿಪ ಉಪಸಭಾಪತಿ ಜನಸಾಮಾನ್ಯರಂತೆ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಕೋವಿಡ್‌ ವ್ಯಾಕ್ಸಿನ್‌  ಪಡೆದುಕೊಂಡಿರುವ ಕ್ರಮಕ್ಕೆ ಜಿಲ್ಲಾದ್ಯಂತ ಜನಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next