ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಿಲ್ಲಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಎಂ.ಪಿ.ಪಾಟೀಲ್ ಇದೀಗ ಉಲ್ಟಾ ಹೊಡೆದಿದ್ದಾರೆ. ಎಲ್ಲ ಉಪ ಪಂಗಡ ಸೇರಿ ಮಾನ್ಯತೆ ಕೇಳಿದ್ದೆವು ಸಿಗಲಿಲ್ಲ. ಈಗ ಪ್ರತ್ಯೇಕ ಧರ್ಮದ ಹೋರಾಟವಿಲ್ಲ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಪ್ರತ್ಯೇಕ ಧರ್ಮದ ಹೋರಾಟ ಇಲ್ಲ. ನಾನು ನಾಯಕತ್ವ ವಹಿಸಿಕೊಳ್ಳುವ ಪ್ರೆಶ್ನೆಯೇ ಇಲ್ಲ. 99 ಉಪ ಪಂಗಡಗಳಿಗೆ ಒಳ್ಳೆಯದಾಗಬೇಕು. ಎಲ್ಲರೂ ಜತೆಗೂಡಿ ಹೋಗಬೇಕು ಎಂಬುದಷ್ಟೇ ನನ್ನ ಅನಿಸಿಕೆ ಎಂದರು.
ಇದನ್ನೂ ಓದಿ:ದೆಹಲಿ ವಿಧಾನಸಭೆಯೊಳಗೆ ಕೆಂಪುಕೋಟೆಗೆ ಸಂಪರ್ಕ ಕಲ್ಪಿಸುವ ರಹಸ್ಯ ಸುರಂಗ ಮಾರ್ಗ ಪತ್ತೆ!
ನಾನು ಪ್ರತ್ಯೇಕ ಧರ್ಮ ಹೋರಾಟ ಕೂಗು ಇಲ್ಲ ಎಂದು ಸ್ಪಷ್ಟಪಡಿಸಿದ ಎಂ.ಬಿ.ಪಾಟೀಲ್, ಎಲ್ಲರೂ ಕೂಡಿ ಒಟ್ಟು ಸಮುದಾಯಕ್ಕೆ ಉದ್ಯೋಗ ಶಿಕ್ಷಣಕ್ಕೆ ಒಳ್ಳೆಯದಾಗಬೇಕು ಎಂದು ಹೇಳಿದ್ದೆ. ವೀರಶೈವ ಲಿಂಗಾಯಿತ ಒಂದೇ. ಎಲ್ಲರೂ ಸೇರಿ ಒಂದಾಗಿ ಹೋರಾಟ ಮಾಡೋಣ ಎಂಬುದು ನನ್ನ ಅಭಿಪ್ರಾಯ. ಯಾಕೆ ಇದರಲ್ಲಿ ತಪ್ಪು ತಿಳುವಳಿಕೆ ಬಂದಿದೆಯೋ ಗೊತ್ತಿಲ್ಲ. ಪ್ರತ್ಯೇಕ ಧರ್ಮ ಹೋರಾಟ ಎಂದಿಲ್ಲ ಎಂದರು.
ಯಡಿಯೂರಪ್ಪ ದೊಡ್ಡ ನಾಯಕರು. ಅವರೊಂದಿಗೆ ನನ್ನ ಹೋಲಿಕೆ ಬೇಡ. ನಾವು ಎರಡನೇ ಹಂತದ ನಾಯಕರು ಎಂದು ಎಂ.ಬಿ.ಪಾಟೀಲ್ ಹೇಳಿದರು.