Advertisement

ಬಿಜೆಪಿ ದ್ವಂದ್ವ ನಿಲುವು: ಎಂ.ಬಿ. ಪಾಟೀಲ್‌

08:02 PM Feb 18, 2022 | Team Udayavani |

ಬೆಂಗಳೂರು: ವಿಧಾನಮಂಡಲ ಉಭಯ ಸದನಗಳಲ್ಲಿ ಬಿಜೆಪಿಯವರೂ ಅಹೋರಾತ್ರಿ ಧರಣಿ ಮಾಡಿದ್ದಾರೆ. ಆದರೆ ಈಗ ಅವರು ದ್ವಂದ್ವ ನಿಲುವು ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದೆ ಕೆ. ಜೆ. ಜಾರ್ಜ್‌ ಗೃಹಸಚಿವರಾಗಿದ್ದಾಗ ಬಿಜೆಪಿಯವರು ರಾತ್ರಿ ಧರಣಿ ಮಾಡಿದ್ದರು. ಆಗ ಸದನ ವ್ಯರ್ಥ ಆಗಿರಲಿಲ್ವಾ ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಸ್ವಾತಂತ್ರ್ಯ ಸಂದರ್ಭದಲ್ಲಿ ಮನುಸ್ಮತಿ ನಮ್ಮ ಸಂವಿಧಾನ ಆಗಬೇಕು ಎಂದು ಆರೆಸ್ಸೆಸ್‌ ಬಯಸಿತ್ತು. ಬಿಜೆಪಿಯ ಬೇಡಿಕೆಯೂ ಅದೇ ಆಗಿದೆ ಎಂದು ಆರೋಪಿಸಿದರು.

ಈಶ್ವರಪ್ಪ ರಾಜಿನಾಮೆ ಕೊಡಲೇಬೇಕು. ನಮ್ಮ ಹೋರಾಟ ಮುಂದುವರಿಯಲಿದೆ. ಸದನದ ಒಳಗೆ ಹಾಗೂ ಹೊರಗೂ ನಾವು ಈ ವಿಚಾರದಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next