Advertisement
ಸೊಂಟನೋವಿಗೂ, ಮಹಿಳೆಯರಿಗೂ ಆತ್ಮೀಯವಾದ ನಂಟಿದೆ. “ಸೊಂಟ ನೋವನ್ನು ಅನುಭವಿಸಿದವರಿಗಷ್ಟೇ ಗೊತ್ತು’ ಎಂದು ನಮ್ಮ ಅತ್ತೆ ಸದಾ ಹೇಳುತ್ತಿರುತ್ತಾರೆ. “ನಾವೆಷ್ಟೇ ಹೇಳಿದ್ರೂ ಬೇರೆಯವರಿಗೆ ಅದು ಅರ್ಥವೇ ಆಗೋಲ್ಲ. ಈ ಕಷ್ಟ ಹೇಳಿ ಏನು ಪ್ರಯೋಜನ?’ ಎಂದು ಅತ್ತೆ, ವಾತರೋಗದಿಂದ ಮೈಕೈ ನೋವು ಅನುಭವಿಸುತ್ತಾ, ಹೀಗೆ ಹೇಳುತ್ತಿರುತ್ತಾರೆ. “ಹಾಗಾದರೆ, ಅರ್ಥವಾಗಲು ಆ ನೋವು ಭರಿಸಿಕೊಳ್ಳಬೇಕಾ?’ ಎಂದು ನಾನು ಅವರನ್ನು ತಮಾಷೆಯಿಂದ ಕೆಣಕುತ್ತಿರುತ್ತೇನೆ.
Related Articles
Advertisement
ಮನೆಯಲ್ಲಿ ನಮ್ಮ ಅತ್ತೆಗೆ ನನ್ನ ಸೊಂಟ ನೋವಿನ ವಿಷಯ ಹೇಳಿರಲಿಲ್ಲ. ನೋವನ್ನಾದರೂ ಹೇಗೋ ಸಹಿಸಬಹುದು. ಆದರೆ, ನಮ್ಮ ಅತ್ತೆಯ ತೀವ್ರ ಕಾಳಜಿಯನ್ನು ಸಹಿಸಲು ಮಾತ್ರ ಸಾಧ್ಯವಿಲ್ಲ! ಹಾಗಾಗಿ, ಗುಟ್ಟಾಗಿ ಇಟ್ಟಿದ್ದೆ. ಅವನು ಮನೆಗೆ ಬಂದಾಗ ಗೇಟಿನ ಬಳಿಯೇ ಔಷಧಿ ಪಡೆದು, “ಅಜ್ಜಿಗೆ ಹೇಳಬೇಡ’ ಎಂದು ಹೇಳಿದ್ದೆ. ಒಳಗೆ ಕಾಲಿಟ್ಟ ಅವನನ್ನು, “ಇದೇನು ಇಷ್ಟು ತಡರಾತ್ರಿ ಬಂದದ್ದು?’ ಎಂದು ಅತ್ತೆ ಕೇಳಿದಾಗ, “ಅಜ್ಜಿ, ನಿಮ್ಮನ್ನು ನೋಡಿ ಹೋಗೋಣವೆಂದು ಬಂದೆ. ತುಂಬಾ ದಿವಸವಾಯಿತಲ್ಲ, ಬರಲೇ ಆಗಿರಲಿಲ್ಲ’ ಅಂತ ಅವನು ಹೇಳಿದಾಗ, ನಮ್ಮತ್ತೆಗೆ ಬಹಳ ಖುಷಿ.
ಸೊಂಟ ನೋವಿದ್ದಾಗ ನನಗೆ ಒಂದೇ ಒಂದು ಚಿಂತೆ ಬಲವಾಗಿ ಕಾಡಿತ್ತು. ಆಯಿತು, ಇನ್ನು ನನಗೆ ಯಾವುದೇ ಚಾರಣಗಳಿಗೆ ಹೋಗಲು ಸಾಧ್ಯವಿಲ್ಲ. ಸೊಂಟನೋವು ಇಟ್ಟುಕೊಂಡು ಬೆಟ್ಟಗುಡ್ಡ ಹತ್ತುವುದು ಅಸಾಧ್ಯ ಎಂದು ಬಹಳ ಚಿಂತೆಯಾಗಿತ್ತು. “ಬೆಟ್ಟ ಗುಡ್ಡ ಹತ್ತಿದ್ದು ಜಾಸ್ತಿ ಆಯಿತು. ಅದಕ್ಕೇ ಸೊಂಟ ನೋವು ಬಂದದ್ದು’ ಎಂದು ಹೇಳಿ ಪತಿಯೂ, ನನ್ನ ಹೆದರಿಕೆಗೆ ತುಪ್ಪ ಸುರಿದಿದ್ದರು. ಸೊಂಟನೋವು ವಾಸಿಯಾದ ಮರುದಿನವೇ ಚಾರಣ ಕೈಗೊಂಡು, ನನ್ನ ಸೊಂಟ ಸರಿಯಾಗಿದೆ ಎಂಬುದನ್ನು ಖಾತ್ರಿಗೊಳಿಸಿಕೊಂಡಿದ್ದೆ!
ಸೊಂಟನೋವಿನಿಂದ ಕೆಲವು ನೀತಿಪಾಠಗಳನ್ನು ಕಲಿತೆ. ನಾನು ಬಹಳ ಗಟ್ಟಿ, ಎಷ್ಟು ಭಾರವನ್ನಾದರೂ ಎತ್ತಬಲ್ಲೆ ಎಂಬ ಜಂಭವನ್ನು ಬಿಟ್ಟು ಮೊದಲಿನಷ್ಟು ಭಾರ ಎತ್ತಲು ಹೋಗುತ್ತಿಲ್ಲ. ಮೊದಲೆಲ್ಲ 25 ಕಿಲೋ ಅಕ್ಕಿ ಮೂಟೆಯನ್ನು ಲೀಲಾಜಾಲವಾಗಿ ಹೊರುತ್ತಿದ್ದೆ. ಸಿಲಿಂಡರನ್ನೂ ಎತ್ತಿ ತರಲು ಆಗುತ್ತಿತ್ತು. ಈಗ ಆ ಸಾಹಸಗಳಿಗೆ ಗುಡ್ ಬೈ ಹೇಳಿರುವೆ.
– ರುಕ್ಮಿಣೀಮಾಲಾ