Advertisement

ಕುಂಭದಲ್ಲಿ ಐಶಾರಾಮಿ “ಇಂದ್ರಪ್ರಸ್ಥ’

12:30 AM Jan 03, 2019 | Team Udayavani |

ಪ್ರಯಾಗ್‌ರಾಜ್‌: ಈ ಬಾರಿಯ ಕುಂಭಮೇಳವನ್ನು ಅತ್ಯಂತ ಐಶಾರಾಮಿಯಾಗಿ ಹಾಗೂ ಚೊಕ್ಕವಾಗಿ ನಡೆಸಲು ತೀರ್ಮಾನಿಸಿರುವ ಉತ್ತರ ಪ್ರದೇಶ ಸರ್ಕಾರ, ಇಲ್ಲಿ ಸೇರಲಿರುವ 13 ಕೋಟಿ ಯಾತ್ರಾರ್ಥಿಗಳಿಗೆ ಉತ್ತಮ ಸೌಕರ್ಯಗಳನ್ನು ನೀಡಲು ಮುಂದಾಗಿದೆ. ಇವುಗಳಲ್ಲೊಂದು ಐಶಾರಾಮಿ ಟೆಂಟ್‌ ಹೌಸ್‌ಗಳ ಸಮುಚ್ಛಯ “ಇಂದ್ರಪ್ರಸ್ಥ’. 

Advertisement

900 ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ “ಇಂದ್ರಪ್ರಸ್ಥ’ದಲ್ಲಿ ಡಿಲಕ್ಸ್‌, ಲಕ್ಷುರಿ ರೂಮುಗಳಿಂದ ಹಿಡಿದು ಐಶಾರಾಮಿ ವಿಲ್ಲಾ ಅಥವಾ ಸೂಟ್‌ಗಳನ್ನು ನಿರ್ಮಿಸಲಾಗಿದೆ. ಬಹುಜನರು ಒಟ್ಟಿಗೆ ಉಳಿದುಕೊಳ್ಳಬಹುದಾದ ಡಾರ್ಮಿಟೋರಿಸ್‌ ಮಾದರಿಯ ಟೆಂಟ್‌ಗಳಿದ್ದು, ಇವುಗಳಲ್ಲಿ ಒಂದು ರಾತ್ರಿಯ ಬಾಡಿಗೆ 1,000 ರೂ. ಇರಲಿದೆ. ಡಿಲಕ್ಸ್‌ ಕೊಠಡಿಯ ಬಾಡಿಗೆ ಒಂದು ರಾತ್ರಿಗೆ 13,000 ರೂ. ಆಗಿದ್ದು, ಲಕ್ಷುರಿ ರೂಮಿನ ಬಾಡಿಗೆ 18,000 ರೂ. ಇದೆ. ಇನ್ನು, ವಿಲ್ಲಾಗಳಲ್ಲಿ ರಾತ್ರಿ ತಂಗಲು 35,000 ರೂ. ತೆರಬೇಕಿದೆ. ಈಗಾಗಲೇ ಶೇ. 0ರಷ್ಟು ಟೆಂಟ್‌ಗಳು ಬುಕ್‌ ಆಗಿವೆ. ಇವರಲ್ಲಿ ಶೇ.30 ರಷ್ಟು ಎನ್‌ಆರ್‌ಐಗಳು.   

ಪ್ರತಿಯೊಂದು ಟೆಂಟ್‌ನಲ್ಲಿಯೂ ಎರಡು ಬೆಡ್‌ ರೂಂಗಳು, ಸ್ನಾನ ಹಾಗೂ ಶೌಚದ ಕೋಣೆಗಳಿರುತ್ತವೆ. ಒಂದು ಹಾಲ್‌, ಡೈನಿಂಗ್‌ ಹಾಲ್‌ ಸಹ ಇರುತ್ತವೆ. ಹಾಲ್‌ನಲ್ಲಿ ಒಂದು ಟಿವಿ, ಐದು ಸೀಟರ್‌ಗಳ ಸೋಫಾ ಸೆಟ್‌ ಇರಲಿದೆ. ಈ ಟೆಂಟ್‌ಗಳ ಸನಿಹದಲ್ಲೇ 40 ಅಂಗಡಿಗಳು, ಎರಡು ರೆಸ್ಟೋರೆಂಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ದಿನದ ಮೂರೂ ಹೊತ್ತು ಇಲ್ಲಿ ವಿಧ ವಿಧದ ಸಾತ್ವಿಕ ಖಾದ್ಯಗಳು ವಿತರಣೆ ಯಾಗುತ್ತವೆ. ಜತೆಗೆ, ಸಂಗೀತ ರಾತ್ರಿಗಳಿಗಾಗಿಯೂ ಕಲಾವಿದರನ್ನು ಕರೆಯಿಸಲಾಗಿದೆ.

35,000 ರೂ. – ಐಶಾರಾಮಿ ಟೆಂಟ್‌ಗಳಲ್ಲಿ ರಾತ್ರಿಯೊಂದಕ್ಕೆ ಉಳಿಯಲು ತೆರಬೇಕಿರುವ ಹಣ
1,000 ರೂ. – ಹಾಲ್‌ ಮಾದರಿಯ ತಂಗುವ ವ್ಯವಸ್ಥೆಯಲ್ಲಿ ರಾತ್ರಿಯೊಂದಕ್ಕೆ ವಿಧಿಸಲಾಗುವ‌ ದರ
13,000 ರೂ. – ಡಬಲ್‌ ಬೆಡ್‌ ರೂಂ ಕೊಠಡಿಗಳಿಗೆ ಶುಲ್ಕ
13 ಕೋಟಿ   - ನಿರೀಕ್ಷಿತ ಯಾತ್ರಿಗಳ ಸಂಖ್ಯೆ

Advertisement

Udayavani is now on Telegram. Click here to join our channel and stay updated with the latest news.

Next