Advertisement

Congress MLAs: ಕಾಂಗ್ರೆಸ್‌ ಶಾಸಕರಿಗೆ ಆಮಿಷ; ನಗರ ಪೊಲೀಸ್‌ ಆಯುಕ್ತರಿಗೆ ದೂರು

11:10 AM Oct 28, 2023 | Team Udayavani |

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಶಾಸಕರಿಗೆ ಹಣದ ಆಮಿಷವೊಡ್ಡಿ ಆಪರೇಷನ್‌ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, 1988 ರ ಸೆಕ್ಷನ್‌ 8 ಮತ್ತು ಐಪಿಸಿಯ 171-ಬಿ ಮತ್ತು 120-ಬಿ ಅಡಿಯಲ್ಲಿ ಕಾನೂನು ಅನ್ವಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

Advertisement

ಕರ್ನಾಟಕ ರಾಜ್ಯ ವಿಧಾನಸಭೆಯ ಕಾಂಗ್ರೆಸ್‌ ಪಕ್ಷದ ಶಾಸಕರಿಗೆ ರಾಜೀನಾಮೆ ನೀಡಿ ಬಂದರೆ ಹಣ ಮತ್ತು ಸಚಿವ ಸ್ಥಾನ ನೀಡಲಾಗುವುದು ಎಂದು ಆಮಿಷ ವೊಡ್ಡುವ ಮೂಲಕ ಭ್ರಷ್ಟಾಚಾರಕ್ಕೆ ಮುಂದಾಗಿದ್ದಾರೆ. ಕೆಲ ಶಾಸಕರಿಗೆ ತಲಾ ವಿರುದ್ಧ 50 ಕೋಟಿ ರೂ.ಗಳು ಹಾಗೂ ಸಚಿವ ಸ್ಥಾನ ನೀಡುವ ಬಗ್ಗೆ ಆಮಿಷದ ಆಡಿಯೋವನ್ನು ಬಿಡುಗಡೆ ಮಾಡುವುದಾಗಿ ಮಂಡ್ಯ ಶಾಸಕ ರವಿಕುಮಾರ್‌ ಅವರ ಹೇಳಿಕೆಯು ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತಿದೆ. ಇದರಿಂದ ಸಾರ್ವಜನಿಕರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡು ಅಗೌರವ ಉಂಟಾಗಲು ಕಾರಣವಾಗುತ್ತದೆ. ಗೋಲ್ಡ್‌ ಫ್ರಿಂಚ್‌ ಹೋಟೆಲ್‌ನಲ್ಲಿ ನಮ್ಮ ಶಾಸಕರನ್ನು ಕೆಲವರು ಭೇಟಿ ಆಗಿದ್ದಾರೆ. ಯಾರೆಲ್ಲ ಓಡಾಡುತ್ತಿದ್ದಾರೋ ಅವರ ವಿಡಿಯೊ ಕೂಡ ಇದೆ. ಕೆಲವೇ ದಿನಗಳಲ್ಲಿ ಕಾಲ್‌ ರೆಕಾರ್ಡ್‌, ವಿಡಿಯೋ ಬಿಡುಗಡೆ ಮಾಡುತ್ತೀವಿ’ ಎಂದು ಶಾಸಕರಾದ ರವಿಕುಮಾರ್‌ ಗಣಿಗ ಹೇಳಿದ್ದಾರೆ.

ಕಾಂಗ್ರೆಸ್‌ನ ಹಲವಾರು ಶಾಸಕರಿಗೆ ಈ ರೀತಿ ಆಮಿಷವೊಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪವಿತ್ರಗೊಳಿಸುತ್ತಿದ್ದು, ಸಾರ್ವಜನಿಕರ ತೆರಿಗೆ ಹಣವು ಸಹ ಪೋಲು ಮಾಡುತ್ತಿದ್ದಾರೆ. ತಾವು ಕೂಡಲೇ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಂಡರೆ, ಮುಂದೆ ಇಂತಹ ಘಟನೆಗಳು ಮರುಕಳಿಸದ ಹಾಗೆ ತಡೆಯಬಹುದು.

ಈ ಬಗ್ಗೆ ಶಾಸಕ ರವಿಕುಮಾರ್‌ ಗೌಡ ಗಣಿಗ ತಮ್ಮ ಬಳಿ ಬೇಕಾದ ಸಾಕ್ಷ್ಯಗಳು ಇವೆ ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಆದ್ದರಿಂದ ತಾವು ಅವರ ಹತ್ತಿರ ಇರುವ ಸಾಕ್ಷ್ಯವನ್ನು ಪಡೆದುಕೊಂಡು ಭ್ರಷ್ಟಾಚಾರಕ್ಕೆ ಪ್ರಚೋದನೆ ಹಾಗೂ ಹಣದ ಮೂಲದ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಅನ್ವಯ ಕ್ರಮಕೈಗೊಂಡು ಹಾಗೂ ಇವರಿಗೆ ಸಹಕರಿಸಿರುವ ವ್ಯಕ್ತಿಗಳ ಮೇಲೆ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next