Advertisement

ಯೇನೆಕಲ್ಲು: ಸೇತುವೆಯಡಿ ಮರದ ದಿಮ್ಮಿ; ಕೃತಕ ನೆರೆ ಭೀತಿ!

11:23 PM May 21, 2020 | Sriram |

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಮಾರ್ಗದ ಯೇನೆಕಲ್ಲು ಎಂಬಲ್ಲಿರುವ ಸೇತುವೆ ಕೆಳಭಾಗದಲ್ಲಿ ಬೃಹತ್‌ ಗಾತ್ರದ ಮರದ ದಿಮ್ಮಿಗಳು ಸಿಲುಕಿಕೊಂಡಿದ್ದು, ಮಳೆಗಾಲದಲ್ಲಿ ಕೃತಕ ನೆರೆ ಸಂಭವಿಸಲು ಅದು ಕಾರಣವಾಗುವ ಸಾಧ್ಯತೆಯಿದೆ.

Advertisement

ಇಲ್ಲಿ ಕಲ್ಲಾಜೆ ನದಿ ಹರಿಯುತ್ತಿದ್ದು. ಕಳೆದ ಮಳೆಗಾಲದ ಅವಧಿಯಲ್ಲಿ ಮಳೆ ನೀರಿನೊಂದಿಗೆ ಜತೆ ಬೃಹತ್‌ ಗಾತ್ರದ ಮರಗಳು ತೇಲಿ ಬಂದು ಸೇತುವೆ ಕೆಳಗಡೆ ಸಿಲುಕಿವೆ.
ಮರದ ದಿಮ್ಮಿಗಳನ್ನು ತೆರವುಗೊಳಿಸದಿರುವುದರಿಂದ ಅದು ನೀರಿನ ಒಳ ಹರಿವಿಗೆ ತಡೆ ನೀಡುತ್ತಿದೆ. ಮಳೆಗಾಲದಲ್ಲಿ ಮತ್ತಷ್ಟು ಮರದ ದಿಮ್ಮಿಗಳು ನೆರೆಯ ಜತೆ ತೇಲಿ ಬಂದು ಸೇತುವೆ ಅಡಿಯಲ್ಲಿ ಸಿಲುಕಿದರೆ ಅನಾಹುತ ಸಂಭವಿಸುವ ಸಾಧ್ಯತೆಯಿದೆ.ಈ ಹಿಂದೆ ನೆರೆ ಉಂಟಾಗಿ ಸೇತುವೆ ಕೆಳಭಾಗದ ಜನವಸತಿ ಪ್ರದೇಶಗಳು ಮುಳುಗಡೆ ಗೊಂಡಿದ್ದವು, ರಸ್ತೆ ಸಂಚಾರಕ್ಕೂ ಸಮಸ್ಯೆಯಾಗಿತ್ತು. ಹೀಗಾಗಿ ಮಳೆಗಾಲದ ಮುಂಜಾಗ್ರತೆ ಗಾಗಿ ಈ ಮರದ ದಿಮ್ಮಿಯನ್ನು ತೆರವುಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೇತುವೆ ಕೆಳಗಿನ ಮರಗಳನ್ನು ತೆಗೆದು ಸರಾಗ ನೀರಿನ ಹರಿವಿಗೆ ಅವಕಾಶ ಮಾಡಿಕೊಡುವಂತೆ ಸುಬ್ರಹ್ಮಣ್ಯ ಗ್ರಾ.ಪಂ. ವತಿಯಿಂದ ಪಂಜ ಅರಣ್ಯ ಇಲಾಖೆಗೆ ಲಿಖೀತ ಮನವಿ ನೀಡ ಲಾಗಿದೆ. ದಿಮ್ಮಿ ಅಪ್ಪಳಿಸಿರುವುದರಿಂದ ಸೇತುವೆ ಶಿಥಿಲಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಶೀಘ್ರವೇ ಮಳೆ ಆರಂಭಕ್ಕೂ ಮುಂಚಿತ ತೆರವುಗೊಳಿಸುವುದು ಅಗತ್ಯ ಎಂದು ಸುಬ್ರಹ್ಮಣ್ಯ ಪಿಡಿಒ ಮುತ್ತಪ್ಪ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next