Advertisement

ಲೂಧಿಯಾನ ಮುನಿಸಿಪಲ್‌ ಕಾರ್ಪೊರೇಶನ್‌: ಕಾಂಗ್ರೆಸ್‌ ಪ್ರಚಂಡ ಜಯ

03:13 PM Feb 27, 2018 | Team Udayavani |

ಲೂಧಿಯಾನ : ಲೂಧಿಯಾನ ಮುನಿಸಿಪಲ್‌ ಕಾರ್ಪೊರೇಶನ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಚಂಡ ಜಯ ಗಳಿಸಿದೆ. 95 ವಾರ್ಡುಗಳ ಪೈಕಿ 62 ವಾರ್ಡುಗಳನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ. 

Advertisement

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಬಿಜೆಪಿ ಜತೆಗೂಡಿ 22 ವಾರ್ಡುಗಳನ್ನು ಗೆದ್ದುಕೊಂಡಿವೆ. ಎಲ್‌ಐಪಿ ಮತ್ತು ಆಪ್‌ ಮೈತ್ರಿಕೂಟ 8 ವಾಡುಗಳನ್ನು ಜಯಿಸಿದೆ. 

ಲೂಧಿಯಾನ ಪಂಜಾಬಿನ ಅತೀ ದೊಡ್ಡ ಮುನಿಸಿಪಲ್‌ ಕಾರ್ಪೊರೇಶನ್‌ ಆಗಿದೆ. ಅಮೃತ್‌ಸರ, ಪಟಿಯಾಲ ಮತ್ತು ಜಾಲಂಧರ್‌ ಮುನಿಸಿಪಲ್‌ ಕಾರ್ಪೊರೇಶನ್‌ಗೆ ಚುನಾವಣೆ ನಡೆದ ಎರಡು ತಿಂಗಳ ತರುವಾಯ ಲೂಧಿಯಾನ ಚುನಾವಣೆ ನಡೆದಿದೆ. 

ಪಂಜಾಬ್‌ನಲ್ಲಿ 2017ರ ಮಾರ್ಚ್‌ನಿಂದ ಅಧಿಕಾರದಲ್ಲಿರುವ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಪಕ್ಷ, ಅಮೃತಸರ, ಪಟಿಯಾಲ ಮತ್ತು ಜಾಲಂಧರ ಸ್ಥಳೀಯಾಡಳಿತೆ ಚುನಾವಣೆಗಳನ್ನು ಗೆದ್ದುಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next