Advertisement

ಲಕ್ನೋ ಸೂಪರ್‌ ಜೈಂಟ್ಸ್‌; ಐಪಿಎಲ್‌ ಹೊಸ ತಾರೆ; ಆಯುಷ್‌ ಬದೋನಿ

10:57 PM Mar 29, 2022 | Team Udayavani |

ಮುಂಬಯಿ: ದಿಲ್ಲಿಯ ಯುವ ತಾರೆ ಆಯುಷ್‌ ಬದೋನಿ ತನ್ನ ಚೊಚ್ಚಲ ಐಪಿಎಲ್‌ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಹೊಸ ತಾರೆಯಾಗಿ ಮೂಡಿಬಂದಿದ್ದಾರೆ.

Advertisement

ಗುಜರಾತ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಪರ ಆಡಿದ್ದ ಬದೋನಿ 41 ಎಸೆತ ಎದುರಿಇ 54 ರನ್‌ ಸಿಡಿಸಿ ಗಮನ ಸೆಳೆದಿದ್ದಾರೆ.

ಅಂಡರ್‌-19 ಕ್ರಿಕೆಟ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದರೂ ದಿಲ್ಲಿ ತಂಡವು ಅವರನ್ನು ರಣಜಿ ಟ್ರೋಫಿ ಮತ್ತು ವಿಜಯ್‌ ಹಜಾರೆ ಟ್ರೋಫಿಗಾಗಿ ತನ್ನ ತಂಡದಲ್ಲಿ ಸೇರಿಸಿಕೊಳ್ಳಲು ಕಡೆಗಣಿಸಿತ್ತು. ಇದರಿಂದ ಬಹಳಷ್ಟು ಆಘಾತಕ್ಕೆ ಒಳಗಾಗಿದ್ದ ಬದೋನಿ ಈ ಹಿಂದಿನ ಐಪಿಎಲ್‌ ಹರಾಜಿ ನಲ್ಲೂ ಯಾರೂ ಖರೀದಿಸಲು ಮುಂದೆ ಬರಲಿಲ್ಲ. ಆದರೆ ಈ ವರ್ಷ ಗೌತಮ್‌ ಗಂಭೀರ್‌ ಅವರ ಸೂಚನೆಯಂತೆ ನನ್ನನ್ನು ಆಯ್ಕೆ ಮಾಡಲಾಗಿತ್ತು.

ಅತ್ಯುತ್ತಮ ಪ್ರಯತ್ನ ಮಾಡುವೆ
ಕಳೆದ ಮೂರು ವರ್ಷಗಳಲ್ಲಿ ಹರಾಜಿಯಲ್ಲಿ ನನ್ನ ಹೆಸರು ಬಂದಿತ್ತು ಆದರೆ ಖರೀದಿಯಾಗದೇ ಬಾಕಿ ಉಳಿದಿದ್ದೆ. ಹಾಗಾಗಿ ಈ ಸಲ ನನ್ನ ಹೆಸರು ಹರಾಜಿನಲ್ಲಿ ಬಂದಾಗ ಹೃದಯದ ಬಡಿತ ಜೋರಾಗಿತ್ತು. ಅದೃಷ್ಟವೆಂಬಂತೆ ನೂತನ ತಂಡ ಲಕ್ನೋ ನನ್ನನ್ನು ಆಯ್ಕೆ ಮಾಡಿದೆ. ನಾನು ಆ ತಂಡಕ್ಕೆ ಕೃತಜ್ಞನಾಗಿದ್ದೇನೆ. ಚೆನ್ನಾಗಿ ನಿರ್ವಹಣೆ ನೀಡಿ ನನ್ನ ತಂಡ ಗೆಲ್ಲಲು ಅತ್ಯುತ್ತಮ ಪ್ರಯತ್ನ ಮಾಡುವೆ ಎಂದು ಬದೋನಿ ಹೇಳಿದ್ದಾರೆ.

ಕಳೆದ ವರ್ಷದ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಬದೋನಿ ಕೇವಲ ಐದು ಟಿ20 ಪಂದ್ಯಗಳಲ್ಲಿ ಆಡಿದ್ದರೂ ಒಂದು ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡಿ 8 ರನ್‌ ಗಳಿಸಿದ್ದರು. ಅವರಿನ್ನೂ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಆಡಬೇಕಾಗಿದೆ.

Advertisement

ಲಕ್ನೋ ತಂಡಕ್ಕೆ ಆಯ್ಕೆಯಾದ ಬಳಿಕ ನಾನು ಆಡಿದ ಎರಡು ಅಭ್ಯಾಸ ಪಂದ್ಯಗಳಲ್ಲಿ ಅರ್ಧಶತಕ ಹೊಡೆದಿದ್ದೇನೆ. ಈ ನಿರ್ವಹಣೆ ಗೌತಮ್‌ ಭಯ್ಯ, ಕೋಚ್‌ಗಳಾದ ವಿಜಯ್‌ ಸರ್‌ ಮತ್ತು ಆ್ಯಂಡಿ ಫ್ಲವರ್‌ ಅವರಿಗೆ ತೃಪ್ತಿ ನೀಡಿದೆ. ಈ ಕಾರಣಕ್ಕಾಗಿ ಕೃಣಾಲ್‌ ಪಾಂಡ್ಯ ಅವರಿಗಿಂತ ಮೊದಲು ನನ್ನನ್ನು ಬ್ಯಾಟಿಂಗಿಗೆ ಕಳುಹಿಸಿದ್ದರು ಎಂದು ಬದೋನಿ ವಿವರಿಸಿದರು.

ಅಂಡರ್‌ 19 ಸಾಧನೆ
ಕ್ರಿಕೆಟ್‌ ಕೋಚ್‌ ತಾರಕ್‌ ಸಿನ್ಹ ಅವರ ಗರಡಿಯಲ್ಲಿ ಪಳಗಿದ್ದ ಬದೋನಿ ಅಂಡರ್‌-19 ಹಂತದಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗಮನ ಸೆಳೆದಿದ್ದರು. 2018ರಲ್ಲಿ ಶ್ರೀಲಂಕಾ ವಿರುದ್ಧದ ಯೂತ್‌ ಟೆಸ್ಟ್‌ನಲ್ಲಿ ಅವರು 185 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು. ಆಬಳಿಕ ನಡೆದ ಏಶ್ಯ ಕಪ್‌ನ ಫೈನಲ್‌ನಲ್ಲಿ ಕೇವಲ 28 ಎಸೆತಗಳಿಂದ 52 ರನ್‌ ಸಿಡಿಸಿದ ಸಾಧನೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next