Advertisement

Lucknow Super Giants: ಲಕ್ನೋ ತಂಡಕ್ಕೆ ಮ್ಯಾಟ್‌ ಹೆನ್ರಿ

11:10 PM Mar 30, 2024 | Team Udayavani |

ಲಕ್ನೋ: ನ್ಯೂಜಿಲ್ಯಾಂಡ್‌ ಆಲ್‌ರೌಂಡರ್‌ ಮ್ಯಾಟ್‌ ಹೆನ್ರಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ. ವೈಯಕ್ತಿಕ ಕಾರಣದಿಂದ ಈ ಬಾರಿಯ ಐಪಿಎಲ್‌ನಿಂದ ಹಿಂದೆ ಸರಿದಿರುವ, ಇಂಗ್ಲೆಂಡ್‌ನ‌ ಡೇವಿಡ್‌ ವಿಲ್ಲಿ ಜಾಗವನ್ನು ಹೆನ್ರಿ ತುಂಬಲಿದ್ದಾರೆ.

Advertisement

ಮೂಲಬೆಲೆ 1.25 ಕೋಟಿ ರೂ.ಗೆ ಮ್ಯಾಟ್‌ ಹೆನ್ರಿ, ಲಕ್ನೋ ತಂಡದೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 2022 ಮತ್ತು 2023ರಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸಿದ್ದ ಡೇವಿಡ್‌ ವಿಲ್ಲಿ, ಮಾನಸಿಕ ಒತ್ತಡದ ಕಾರಣ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಟಿ20 ಲೀಗ್‌ನಲ್ಲಿ ಅಬುದಾಭಿ ನೈಟ್‌ರೈಡರ್, ಪಾಕಿಸ್ಥಾನ್‌ ಸೂಪರ್‌ ಲೀಗ್‌ನಲ್ಲಿ ಮುಲ್ತಾನ್‌ ಸುಲ್ತಾನ್‌ ಪರ ಆಡಿರುವುದರಿಂದ, ಎರಡು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಐಪಿಎಲ್‌ನಲ್ಲಿ ಆಡಲು ಕಷ್ಟವಾಗುತ್ತದೆ ಎಂದಿದ್ದಾರೆ.

ಹೆನ್ರಿಗೆ ಹೆಚ್ಚಿನ ಐಪಿಎಲ್‌ ಅನುಭವವಿಲ್ಲ. 2017ರಲ್ಲಿ ಪಂಜಾಬ್‌ ಪರ 2 ಪಂದ್ಯವಷ್ಟೇ ಆಡಿದ್ದರು. ಚೆನ್ನೈ ತಂಡದಲ್ಲೂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next