Advertisement

ಎಸ್‌ಪಿ ಅಭ್ಯರ್ಥಿ ಪತ್ನಿ ಪೂನಂ ಪರ ಶತ್ರುಘ್ನ ಸಿನ್ಹಾ ಪ್ರಚಾರ: ಕೈ ಅಭ್ಯರ್ಥಿ ಆಕ್ಷೇಪ

09:54 AM May 04, 2019 | Team Udayavani |

ಲಕ್ನೋ : ಈ ಲೋಕಸಭಾ ಕ್ಷೇತ್ರದ ಎಸ್‌ ಪಿ ಅಭ್ಯರ್ಥಿಯಾಗಿರುವ ತನ್ನ ಪತ್ನಿ ಪೂನಂ ಸಿನ್ಹಾ ಪರ ಕಾಂಗ್ರೆಸ್‌ ನಾಯಕ ಶತ್ರುಘ್ನ ಸಿನ್ಹಾ ಪ್ರಚಾರಕಾರ್ಯ ಕೈಗೊಂಡಿರುವುದಕ್ಕೆ ಲಕ್ನೋ ಕಾಂಗ್ರೆಸ್‌ ಅಭ್ಯರ್ಥಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಶತ್ರುಘ್ನ ಸಿನ್ಹಾ ಅವರು ಪತ್ನಿ ಪೂನಂ ಸಿನ್ಹಾ ನಾಮಪತ್ರ ಸಲ್ಲಿಸುವಾಗ ಅವರ ಜತೆಗಿದ್ದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್‌ ಯಾದವ್‌ ನೇತೃತ್ವದಲ್ಲಿ ನಿನ್ನೆ ಗುರುವಾರ ನಡೆದಿದ್ದ ಚುನಾವಣಾ ಸಭೆಯಲ್ಲಿ ಶತ್ರುಘ್ನ ಸಿನ್ಹಾ ಭಾಗವಹಿಸಿದ್ದರು.

‘ಶತ್ರುಘ್ನ ಸಿನ್ಹಾ ಅವರ ನಡೆವಳಿಕೆಯನ್ನು ಕಂಡರೆ ಅವರು ಕಾಂಗ್ರೆಸ್‌ ಪಕ್ಷ ಸೇರಿದ್ದಾರಾದರೂ ಈಗಿನ್ನೂ ಅವರು ಆರ್‌ಎಸ್‌ಎಸ್‌ಗೆ ರಾಜೀನಾಮೆ ನೀಡಿಲ್ಲ ಎಂದನ್ನಿಸುತ್ತದೆ’ ಎಂದು ಕಾಂಗ್ರೆಸ್‌ನ ಲಕ್ನೋ ಅಭ್ಯರ್ಥಿ ಆಚಾರ್ಯ ಪ್ರಮೋದ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next