ದೇವನಹಳ್ಳಿ: ರೈತರಿಗೆ ಮಳೆ ಕೈಕೊಟ್ಟಿದೆ. ಅದರ ಜೊತೆಗೆ ಅಧಿಕ ಶ್ರಾವಣ ಇದ್ದರೂ ಸಹ ಹೂವಿನ ಬೆಲೆ ಏರಿಕೆ ಆಗುತ್ತಿದೆ. ಶ್ರಾವಣ ಮಾಸ ಬರುತ್ತಿರುವುದರಿಂದ ಹೂವಿನ ಬೆಲೆಯಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುತ್ತದೆ. ಬಯಲುಸೀಮೆಯ ಪ್ರದೇಶದ ಜಿಲ್ಲೆಗಳಾಗಿರುವುದರಿಂದ ಇರುವ ಅಲ್ಪಸಲ್ಪದ ಜಮೀನುಗಳಲ್ಲಿ ಹಾಗೂ ಕೊಳವೆಬಾವಿಗಳಲ್ಲಿ ಇರುವ ನೀರಿನಲ್ಲಿಯೇ ಹೂವಿನ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಬೆಂ.ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕಿನ ರೈತರು ಬೆಂಗಳೂರಿಗೆ ಹತ್ತಿರ ಇರುವುದರಿಂದ ಮಾರು ಕಟ್ಟೆಗಳಿಗೆ ಹಾಗೂ ತಮಿಳುನಾಡು, ಅಂದ್ರ ಪ್ರದೇಶ, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ಇತರೆ ಭಾಗ ಗಳಿಗೆ ಹೂಗಳನ್ನು ಸರಬರಾಜು ಮಾಡುತ್ತಿದ್ದಾರೆ. ರೈತರಿಗೆ ಹೂವಿನ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳು ರೈತರಿಗೆ ಅನುಕೂಲ ಮಾಡಿದೆ. ರೈತರಿಗೆ ಒಂದು ಕಡೆ ಸಮರ್ಪಕ ಮಳೆಯಾಗಿದೆ ಕಂಗಲಾಗುವಂತೆ ಮಾಡಿದೆ. ಶ್ರಾವಣ ಮಾಸ ಬರುತ್ತಿರುವುದರಿಂದ ದೇವಾಲಯಗಳಲ್ಲಿ ಹೆಚ್ಚಿನ ಪೂಜೆ ಹಾಗೂ ದೇವಾ ಲಯಕ್ಕೆ ಹೂವಿನ ಅಲಂಕಾರ ಹಾಗೂ ಮನೆಗಳಲ್ಲಿ ದೇವರ ಪೂಜೆಗೆ ಹೂವನ್ನು ಹೆಚ್ಚು ಖರೀದಿಸುತ್ತಾರೆ. ಹಾಗೂ ವರಮಹಾ ಲಕ್ಷ್ಮೀ ಹಬ್ಬ ಇರುವುದರಿಂದ ಹಬ್ಬಕ್ಕೆ ಹೂವಿನ ದರ ಹೆಚ್ಚಾಗಲಿದೆ. ಕನಕಾಂಬರವನ್ನು ಆ ದಿನ ಮಾತ ನಾಡಿ ಸಲು ಆಗುವುದಿಲ್ಲ. ಹೂವಿನ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಲಿದೆ.
ಹೂವಿನ ಬೆಳೆಗಾರರಲ್ಲಿ ಸಂತಸ: ಶ್ರಾವಣ ಮಾಸ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಳಿಕೆಯಾಗಿದ್ದ ಹೂವಿನ ಬೆಲೆ ಏರಿಕೆ ಆಗುತ್ತಿದ್ದು, ಶ್ರಾವಣಮಾಸ ಹೂವಿನ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಆಷಾಢ ಮುಗಿದ ಬಳಿಕೆ ಕಳೆಗುಂದಿದ್ದ ಹೂವಿನ ಬೆಲೆ ಶ್ರಾವಣ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.ಗುಲಾಬಿ ರೂ130ಕ್ಕೆ ಏರಿಕೆ: ಪ್ರತಿ ಕೆ.ಜಿ.ಗೆ ರೂ.60 ಇದ್ದ ಮರಾಬುಲ್ (ಗುಲಾಬಿ ರೂ130ಕ್ಕೆ ಏರಿಕೆಯಾಗಿದೆ). ರೂ 60 ಇದ್ದ ಸೇವಂತಿ (ಸೆಂಟ್ ಯೆಲ್ಲೋ) ರೂ.150/, ರೂ90 ಇದ್ದ ಚಂಡು ಹೂವು ರೂ160/-, ರೂ30 ಇದ್ದ ಸಾಮಾನ್ಯ ಚಂಡು ಹೂ ರೂ.80, ರೂ 60 ಇದ್ದ ಕೆಂಪು ಗುಲಾಬಿ ರೂ130ಕ್ಕೆ ಏರಿಕೆಯಾಗಿದೆ. ಶ್ರಾವಣಮಾಸ ಮುಗಿಯುವವರಿಗೂ ದರ ಏರಿಕೆ ನಿರೀಕ್ಷೆ ಇದೆ ಎಂದು ಹೂವಿನ ವ್ಯಾಪಾರಿಗಳು ತಿಳಿಸಿದ್ದಾರೆ.
ಮುಂಗಾರು ಅವಧಿ ಹಿನ್ನೆಲೆಯಲ್ಲಿ 20 ದಿನಗಳಿಂದ ನಿರಂತರವಾಗಿ ಮೋಡ ಮುಸುಕಿದ ವಾತಾವರಣದ ನಡುವೆ ಆಗಾಗ ಮಳೆ ಬೀಳುತ್ತಿತ್ತು. ಇದರಿಂದ ಬೆಳೆ ನಾಶ, ಎಲೆಗಳಿಗೆ ಚುಕ್ಕಿರೋಗ, ಹೂವು ಮೊಗ್ಗಿನ ಹಂತ ದಲ್ಲಿ ಕೊಳಪೆರೋಗ ಸೇರಿ ವಿವಿಧ ರೋಗಬಾಧೆಯಿಂದ ಹೂವಿನ ಬೆಳೆ ಪ್ರಮಾಣ ಕಡಿಮೆಯಾಗಿತ್ತು. ಈಗ ಮಾರುಕಟ್ಟೆಗೆ ಹೂವಿನ ಅವಕ ಕಡಿಮೆಯಾಗಿದೆ. ಬೆಲೆ ಏರಿಕೆಯಾಗುತ್ತಿದೆ ಎಂದು ತಿಳಿಸಿದರು.
ಹೂವಿನ ಬೆಲೆ ಹೆಚ್ಚಳ: ಇಳಿಕೆ ಸಾಮಾನ್ಯ. ಹೂ ಬೆಳೆದರೂ ಮಾರುಕಟ್ಟೆಯಲ್ಲಿ ಬೇರೆ ಬೇರೆ ಕಾರಣ ಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಈಗ ಬೆಲೆ ಕಡಿಮೆಯಾದಾಗ ಒಳ್ಳೆಯ ಬೆಲೆ ಸಿಕ್ಕಿದೆ ಎಂದು ಹೂವಿನ ಬೆಳೆ ಗಾರರು ಹೇಳುತ್ತಾರೆ. ರೇಷ್ಮೆ, ಹಾಲು ಉತ್ಪಾದನೆ, ಹೂ ಮತ್ತು ತರ ಕಾರಿ ಬೆಳೆಯುವಲ್ಲಿ ಮುಂಚೂಣಿಯಲ್ಲಿರುವ ಗ್ರಾಮಾಂತರ ಭಾಗದಲ್ಲಿ ಗುಲಾಬಿ, ಮೆರಾಬೆಲ್, ವ್ಯಾನಿಷ್, ಚಾಮಂತಿ, ಗುಲಾಬಿ ವೈಟ್, ಹಳದಿ ಗುಲಾಬಿ, ಸೇರಿದಂತೆ ನಾನಾ ಬಗೆಯ ಹೂ ಬೆಳೆಯಲಾಗುತ್ತಿದೆ. ಆಂದ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿ ವಿವಿಧ ಕಡೆ ರಫ್ತು ಮಾಡಲಾಗುತ್ತಿದೆ. ಆದರೆ, ಕಳೆದ ತಿಂಗಳಲ್ಲಿ ಮಳೆ ಹೆಚ್ಚಾದ ಕಾರಣಕ್ಕೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಷ್ಟು ಹೂ ಮಾರುಕಟ್ಟೆಗೆ ಬರುವುದಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಸರಿಯಾದ ಹೂವಿನ ಮಾರುಕಟ್ಟೆ ನಿರ್ಮಾಣವಾಗಬೇಕು. ಜಿಲ್ಲೆಯ 4 ತಾಲೂಕುಗಳಲ್ಲಿ ಹೂವಿನ ಬೆಳೆಗಾರರು ಹೆಚ್ಚು ಇದ್ದಾರೆ. ಬೆಂಗಳೂರಿಗೆ ಹತ್ತಿರವಿದ್ದರೂ ಸಹ ಕೇವಲ ಕೆಆರ್ ಮಾರುಕಟ್ಟೆ ಇತರೆ ಕಡೆಗೆ ರೈತರು ಹೂವನ್ನು ತೆಗೆದುಕೊಂಡು ಹೋಗಬೇಕು. ಸ್ಥಳೀಯವಾಗಿ ಮಾರುಕಟ್ಟೆ ನಿರ್ಮಾಣವಾಗುವಂತೆ ಆಗಬೇಕು.
– ಮುನಿಯಪ್ಪ, ಹೂವಿನ ಬೆಳೆಗಾರ
ಶ್ರಾವಣ ಮಾಸ ಬರುತ್ತಿರುವುದರಿಂದ ಹೂವಿನ ಬೆಲೆ ಏರಿಕೆಯಾಗಲಿದೆ. ವಿವಿಧ ಹೂಗಳಿಗೆ ಬಾರೀ ಬೇಡಿಕೆ ಇದೆ.ಹೂವಿನ ಪ್ರಮಾಣ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ.
– ಅಣ್ಣಪ್ಪ, ಹೂವಿನ ವ್ಯಾಪಾರಿ
ಇದನ್ನೂ ಓದಿ: Single Use plastic:ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ದಂಡಾಸ್ತ್ರ,ಯಾವ ಉತ್ಪನ್ನಗಳಿಗೆ ನಿಷೇಧ