Advertisement

ಹಿಮಾಚಲ ಪ್ರದೇಶ: 3.5 ಅಂಕಗಳ ಕಡಿಮೆ ತೀವ್ರತೆಯ ಭೂಕಂಪ

06:56 AM Feb 13, 2019 | Team Udayavani |

ಶಿಮ್ಲಾ : ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಇಂದು ಬುಧವಾರ ಬೆಳಗ್ಗೆ 7.35ರ ಹೊತ್ತಿಗೆ 3.5 ಅಂಕಗಳ ಕಡಿಮೆ ತೀವ್ರತೆಯ ಭೂಕಂಪ ಸಂಭವಿಸಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಭೂಕಂಪದಿಂದಾಗಿ ಯಾವುದೇ ಜೀವ ಹಾನಿ, ಸೊತ್ತು ನಾಶ, ನಷ್ಟ ಉಂಟಾದ ವರದಿ ಈ ವರೆಗೆ ಬಂದಿಲ್ಲ. 

ಧರ್ಮಶಾಲಾ ಪಟ್ಟಣದಿಂದ ಉತ್ತರಕ್ಕೆ ಐದು ಕಿ.ಮೀ. ನೆಲದಾಳದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತೆಂದು ಶಿಮ್ಲಾದಲ್ಲಿ  ಹವಾಮಾನ ಕೇಂದ್ರದ ನಿರ್ದೇಶಕ ಮನಮೋಹ್‌ ಸಿಂಗ್‌ ತಿಳಿಸಿದರು. 

ಕಾಂಗ್ರಾ ಜಿಲ್ಲೆಯಾದ್ಯಂತ ಭೂಮಿ ಕಂಪಿಸಿದ ಅನುಭವ ಜನರಿಗೆ ಆಗಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರಾ ಜಿಲ್ಲೆ ಸಹಿತ ಹಿಮಾಚಲ ಪ್ರದೇಶದ ಬಹು ಭಾಗ ಭೂಕಂಪ ವಲಯವೆಂದು ಪರಿಗಣಿತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next