Advertisement

ಚಿಕ್ಕಮ್ಮನ ಖಾಸಗಿ ದೃಶ್ಯ ಸೆರೆ ಹಿಡಿದು 25 ಲಕ್ಷಕ್ಕೆ ಬೇಡಿಕೆಯಿಟ್ಟ ಯುವತಿ‌, ಪ್ರಿಯಕರ ಬಂಧನ

12:40 PM Jul 19, 2022 | Team Udayavani |

ಬೆಂಗಳೂರು: ಚಿಕ್ಕಮ್ಮ ಪರಪುರುಷನ ಜತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ದೃಶ್ಯವನ್ನು ಸೆರೆ ಹಿಡಿದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬಾಗಲೂರಿನ ನಿವಾಸಿ ಉಷಾ(24) ಮತ್ತು ಸುರೇಶ್‌ ಬಾಬು(31) ಬಂಧಿತರು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪರಸ್ಪರ ಪ್ರೇಮಿಸುತ್ತಿದ್ದರು. ಈ ಮಧ್ಯೆ ಉಷಾ ತನ್ನ ಚಿಕ್ಕಮ್ಮ ಪರಪುರುಷನ ಜತೆ ದೈಹಿಕ ಸಂಪರ್ಕ ಹೊಂದಿರುವ ವಿಚಾರ ತಿಳಿದಿದ್ದಳು.

ಚಿಕ್ಕಮ್ಮನಿಗೆ ಬ್ಲ್ಯಾಕ್‌ಮೇಲ್‌: ಆರೋಪಿಗಳ ಪೈಕಿ ಉಷಾ ಸಂತ್ರಸ್ತೆಯ ಸಹೋದರಿಯ ಪುತ್ರಿಯಾಗಿದ್ದಾಳೆ. ಇತ್ತೀಚೆಗೆ ಸಂತ್ರಸ್ತೆ ಹಾಗೂ ಆಕೆಯ ಪ್ರಿಯಕರ ಹೋಟೆಲ್‌ಗೆ ಹೋಗಲು ಕೊಠಡಿ ಕಾಯ್ದಿರಿಸಿದ್ದರು. ಈ ವಿಚಾರ ತಿಳಿದುಕೊಂಡ ಆರೋಪಿಗಳು ಮೊದಲೇ ಆ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಪ್ರಿಯಕರ ಖಾಸಗಿಯಾಗಿ ಕಳೆದ ದೃಶ್ಯಗಳನ್ನು ಸೆರೆ ಹಿಡಿದುಕೊಂಡು ಬ್ಲ್ಯಾಕ್‌ ಮೇಲ್‌ ಮಾಡಲು ಆರಂಭಿಸಿದ್ದಾರೆ.

ಸಂತ್ರಸ್ತೆ ಮೊಬೈಲ್‌ಗೆ ವಿಡಿಯೋ ಕಳುಹಿಸಿದ ಆರೋಪಿ, 25 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಸಂಬಂಧಿಕರು, ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಆಕೆ, ಒಪ್ಪದಿದ್ದಾಗ, ಹಿಂಬಾಲಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ.

ಹೀಗಾಗಿ ಸಂತ್ರಸ್ತೆ ದೂರು ನೀಡಿದ್ದರು. ತನಿಖೆ ವೇಳೆ ಉಷಾರ ಕೃತ್ಯ ಬಯಲಾಗಿದ್ದು, ಆಕೆಯ ಬಂಧಿಸಿದಾಗ ಸತ್ಯಾಂಶ ಬಯಲಾಗಿದೆ. ಬಳಿಕ ಆಕೆಯ ಪ್ರಿಯಕರ ಸುರೇಶ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next