Advertisement

ಮದುವೆಗೆ ನಿರಾಕರಿಸಿದ ಪ್ರೆಯಸಿಯನ್ನೇ ಕೊಂದ¨

11:22 AM Jan 11, 2018 | Team Udayavani |

ಬೆಂಗಳೂರು: ಸುಕಂದಕಟ್ಟೆಯ ಕೆಬ್ಬೇಹಳ್ಳ ಬಳಿ ನಡೆದಿದ್ದ ಮಹಿಳೆ ತಸ್ಲಿಮಾ ಬಾನು ಕೊಲೆ ಪ್ರಕರಣ ಬೇಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು, ಮೃತ ಮಹಿಳೆಯ ಮಾಜಿ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕಾರವಾರ ಜಿಲ್ಲೆ ಶಿರಸಿ ತಾಲೂಕಿನ ನಿವಾಸಿ ಮೊಹಮ್ಮದ್‌ ಮುಬೀನ್‌ (30) ಬಂಧಿತ. ಡಿ.26ರಂದು ತಸ್ಲಿàಮಾಬಾನು ಅವರನ್ನು ಕೊಲೆಗೈದು ನೆರೆ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದು ಇತ್ತೀಚೆಗೆ ಕಾರವಾರಕ್ಕೆ ಬಂದಾಗ ಪೊಲೀಸರು ಬಂಧಿಸಿದ್ದಾರೆ.

ಮದುವೆಗೂ ಮೊದಲು ತಸ್ಲಿಮಾಬಾನು ಹಾಗೂ ಆರೋಪಿ ಮುಬೀನ್‌ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಕರಣವೊಂದರಲ್ಲಿ ಜೈಲು ಸೇರಿದ ಮೊಹಮ್ಮದ್‌ ಮುಬೀನ್‌, ಬಿಡುಗಡೆ ಯಾಗಿ ಬರುವಷ್ಟರಲ್ಲಿ, ತಸ್ಲಿಮಾಬಾನು ತನ್ನ ದೂರದ ಸಂಬಂಧಿ ರಜಾಕ್‌ ರನ್ನು ವಿವಾಹವಾಗಿದ್ದರು. ಜೈಲಿನಿಂದ ಹೊರಬಂದ ನಂತರ ಆರೋಪಿ  ದುಬೈಗೆ ತೆರಳಿದ್ದು ಅಲ್ಲಿಂದಲೇ ತಸ್ಲಿಮಾಬಾನುಗೆ ಆಗಾಗ್ಗೆ ಕರೆ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ. ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿ ತಸ್ಲಿಮಾಬಾನು ಮನೆಗೆ ತೆರಳಿ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಆದರೆ, ಮೃತ ಮಹಿಳೆ ಇದಕ್ಕೆ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಆರೋಪಿ ಚಾಕುವಿನಿಂದ ಇರಿದು ಕೊಲೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮುಬೀನ್‌ ಹಾಗೂ ತಸ್ಲಿಮಾಬಾನು ಇಬ್ಬರೂ ಬೈಂದೂರಿನವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಈಕೆಯ ಮನೆಯವರಿಗೂ ಆರೋಪಿ ಪರಿಚಯವಿದ್ದ. ಈ ಮಧ್ಯೆ 2006ರಲ್ಲಿ ಶಿರಸಿಯ ಗಲಾಟೆ ಪ್ರಕರಣದಲ್ಲಿ ಮುಬೀನ್‌ 6
ತಿಂಗಳ ಕಾಲ ಜೈಲುಸೇರಿದ್ದ. ಹೀಗಾಗಿ ತಸ್ಲಿಮಾಬಾನುಗೆ ಪೋಷಕರು ದೂರದ ಸಂಬಂಧಿ ಹಾವೇರಿಯಲ್ಲಿ ಮೆಕ್ಯಾನಿಕ್‌ ಆಗಿದ್ದ ಅಬ್ದುಲ್‌ ರಜಾಕ್‌ ಜತೆ ವಿವಾಹ ಮಾಡಿದ್ದರು.ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಜೀವನ ನಿರ್ವಾಹಣೆಗಾಗಿ ಆರು ವರ್ಷ ಹಿಂದೆ ನಗರಕ್ಕೆ ಬಂದ ದಂಪತಿ ಸುಂಕದಕಟ್ಟೆಯ ಕೆಬ್ಬೇಹಳ್ಳ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಇತ್ತ ಜೈಲಿ ನಿಂದ ಹೊರಬಂದ ಮುಬೀನ್‌ ಕಾರು ಚಾಲಕನಾಗಿ ವೃತ್ತಿ ಆರಂಭಿಸಿದ್ದ. ನಂತರ ಹೆಚ್ಚಿನ ಹಣ ಸಂಪಾದನೆಗಾಗಿ ಸೌದಿ ಅರೇಬಿಯಾ ಹಾಗೂ ದುಬೈಗೆ ತೆರಳಿದ್ದ. ಈ ವೇಳೆ ತನ್ನ ಸ್ನೇಹಿತರ ಮೂಲಕ ಪ್ರಿಯತಮೆಯ ಮೊಬೈಲ್‌ ನಂಬರ್‌ ಪಡೆದ ಆರೋಪಿ ಆಗಾಗ್ಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ. ಜತೆಗೆ ಆಕೆಗೆ ಇಷ್ಟವಾದ
ಉಡುಗೊರೆ ಹಾಗೂ ಹಣವನ್ನು ಕಳುಹಿಸುತ್ತಿದ್ದ. ಕರ್ನಾಟಕಕ್ಕೆ ಬಂದಾಗ ಆಕೆಯನ್ನು ಭೇಟಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಉಡುಗೊರೆ ಕಿತ್ತುಕೊಂಡ ಕಿರಾತಕ: ಹತ್ತಾರು ವರ್ಷಗಳಿಂದ ಪ್ರೀತಿಸಿದ್ದ ತಸ್ಲಿಮಾಬಾನುಗೆ ಮುಬೀನ್‌ ದುಬಾರಿ ಬೆಲೆ ಉಡುಗೊರೆ ನೀಡಿದ್ದ. ಆದರೆ, ಕೊಲೆಗೈದ ಬಳಿಕ ತಾನು ಕೊಟ್ಟಿದ್ದ ಚಿನ್ನದ ಸರ, ಒಂದು ಕರಿಮಣಿ ಸರ, ಒಂದು ಜತೆ
ಬಳೆಗಳನ್ನು ಕಸಿದುಕೊಂಡು ಪರಾರಿಯಾಗಿದ್ದ. ನಂತರ ಲಾಡ್ಜ್ ಖಾಲಿ ಮಾಡಿಕೊಂಡು ದಾವಣಗೆರೆ, ಹುಬ್ಬಳ್ಳಿ, ಹೈದರಬಾದ್‌, ಗೋವಾ ಸೇರಿ ಕೆಲ ಕಡೆಗಳಲ್ಲಿ ಸುತ್ತಾಡಿ ಬಳಿಕ ಕಾರವಾರದಲ್ಲಿ ಸ್ನೇಹಿತನ ಫ್ಲ್ಯಾಟ್‌ನಲ್ಲಿ ತಲೆಮರೆಸಿಕೊಂಡಿದ್ದ. ಈ ಮಾಹಿತಿ ಸಂಗ್ರಹಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಅನುಚೇತ್‌ ಮಾಹಿತಿ ನೀಡಿದ್ದಾರೆ. 

3 ತಿಂಗಳ ಹಿಂದೆ ಬಂದಿದ್ದ: ಆಗಾಗ್ಗೆ ಕರೆ ಮಾಡಿ ಮದುವೆಗೆ ಒತ್ತಾಯಿಸುತ್ತಿದ್ದ ಆರೋಪಿಯ ವಿಚಾರವನ್ನು ತಸ್ಲಿಮಾಬಾನು ತನ್ನ ಸಹೋದರರು ಹಾಗೂ ಪತಿಯ ಬಳಿ ಹೇಳಿಕೊಂಡಿರಲಿಲ್ಲ. ಆತ ಕರೆ ಮಾಡಿದಾಗ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ಈ ಮದ್ಯೆ ಸೆಪ್ಟೆಂಬರ್‌ನಲ್ಲಿ ಸುಕಂದಕಟ್ಟೆ ಮನೆಗೆ ಬಂದಿದ್ದ ಆರೋಪಿ ತಸ್ಲಿಮಾಬಾನು ಪತಿ ರಜಾಕ್‌ನನ್ನು ಪರಿಚಯಸಿಕೊಂಡು ಹೋಗಿದ್ದ. ನಂತರ ಡಿಸೆಂಬರ್‌ನಲ್ಲಿ ಪ್ರಿಯತಮೆಯನ್ನು ನೋಡಲೆಂದು ರಜೆ ಪಡೆದು ಬಂದಿದ್ದ ಮುಬೀನ್‌, ತಸ್ಲಿಮಾಭಾನುಗೆ ಕರೆ ಮಾಡಿ ಮನೆಗೆ  ಬರುತ್ತಿರುವುದಾಗಿ ಹೇಳಿದ್ದ. ಅದರಂತೆ ಕೆಬ್ಬೆಹಳ್ಳ ಬಳಿ ಹೋಗಿ ಮನೆಯ ಗುರುತಿಸಲು ಗೊಂದಲ ಉಂಟಾಗಿ ಸ್ಥಳೀಯರೊಬ್ಬರಿಗೆ, ಈ ರಸ್ತೆಯಲ್ಲಿ ತಸ್ಲಿಮಾಭಾನು ಎಂಬ ಮುಸ್ಲಿಂ ಮಹಿಳೆ ವಾಸವಿರುವ ಮನೆ ಯಾವುದು ಎಂದು ಕೇಳಿದ್ದ. ಇದಕ್ಕೆ ಪಕ್ಕ ಮನೆಯವರು ತಸ್ಲಿಮಬಾನು ಮನೆ ತೋರಿಸಿದ್ದರು. ನಂತರ ಮನೆಯೊಳಗೆ ಹೋದ ಆರೋಪಿ ಕೃತ್ಯವೆಸಗಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೈಯಲ್ಲಿ “ತಸ್ಲಿàಮಾ’ ಪ್ರಿಯತಮೆ ತಸ್ಲಿಮಾ ಮದುವೆಯಾಗಿರುವುದನ್ನು ಕೇಳಿ ಆರೋಪಿ ಮಾನಸಿಕ ಖನ್ನತೆಗೆ ಒಳಗಾಗಿದ್ದ. ಈ ಹಿನ್ನೆಲೆಯಲ್ಲಿ ಚಾಕುವಿನಿಂದ ಇಂಗ್ಲಿಷ್‌ನಲ್ಲಿ “ತಸ್ಲಿಮಾ’ ಎಂದು ಬರೆದುಕೊಂಡಿದ್ದಾನೆ. ಇದನ್ನು ತೋರಿಸಿದ ಆರೋಪಿ ಮದುವೆಯಾಗುವಂತೆ ತಸ್ಲಿಮಾ ಬಾನುರನ್ನು ಪೀಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಹುಡುಕಿಕೊಂಡು ಹೋಗಿದ್ದ  ಆರೋಪಿ ಡಿ.20ರಂದು ದುಬೈನಿಂದ ಬಂದ ಮುಬೀನ್‌, ಸುಂಕದಕಟ್ಟೆಯ ಲಾಡ್ಜ್ವೊಂದರಲ್ಲಿ ವಾಸ್ತವ್ಯ ಹೂಡಿದ್ದ. ಡಿ.26ರಂದು ತಸ್ಲಿಮಾಬಾನುಳ ಮನೆಯನ್ನು ಹುಡುಕಿಕೊಂಡು ಹೋದ ಆರೋಪಿ, ತನ್ನನ್ನು ಮದುವೆಯಾಗುವಂತೆ ಆಕೆಯನ್ನು ಪರಿಪರಿಯಾಗಿ ಬೇಡಿಕೊಂಡಿದ್ದ. ಆದರೆ, “ನನಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮದುವೆ ಸಾಧ್ಯವಿಲ್ಲ’ ಎಂದು ತಸ್ಲಿಮಾ ಹೇಳಿದ್ದರು. ಇದರಿಂದ ಕೋಪಗೊಂಡ ಆರೋಪಿ, ತನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದು ಎಂದು ನಿರ್ಧರಿಸಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ತಸ್ಲಿಮಾರ ಕುತ್ತಿಗೆ, ಬೆನ್ನು, ಹೊಟ್ಟೆ, ಕೈ, ಭುಜ ಹಾಗೂ ಇತರೆಡೆ 20ಕ್ಕೂ ಅಧಿಕ ಬಾರಿ ಇರಿದು ಕೊಲೆಗೈದಿದ್ದ.

ಫೇಸ್‌ಬುಕ್‌ ಕೊಟ್ಟ ಸುಳಿವು ಘಟನೆ ಬಳಿಕ ತಸ್ಲಿಮಾಬಾನು ಮೊಬೈಲ್‌ ಸಿಡಿಆರ್‌ ಪರಿಶೀಲಿಸಿದಾಗ ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಆಧಾರದ ಮೇಲೆ ಫೇಸ್‌ಬುಕ್‌ನಲ್ಲಿ ಆರೋಪಿಯ ಭಾವಚಿತ್ರ ಸಂಗ್ರಹಿಸಲಾಗಿತ್ತು. ಘಟನೆಗೂ ಮುನ್ನ ತಸ್ಲಿಮಾಬಾನು ಮನೆ ವಿಳಾಸ ಹೇಳಿದ್ದ ಸ್ಥಳೀಯ ನಿವಾಸಿಗೆ ಆರೋಪಿಯ ಫೋಟೋ ತೋರಿಸಿ ಖಚಿತಪಡಿಸಿಕೊಳ್ಳಲಾಯಿತು. ನಂತರ ಆರೋಪಿಯ ಚಲವಲನಗಳ ಬಗ್ಗೆ ತೀವ್ರ ನಿಗಾವಹಿಸಿದ್ದು, ಆರೋಪಿ ಬೇರೆ ಬೇರೆ ಸ್ಥಳಗಳಲ್ಲಿರುವುದು ಪತ್ತೆಯಾಗಿತ್ತು. ಕೊನೆಗೆ ಕಾರವಾರಕ್ಕೆ ಬಂದಾಗ ಬಂಧಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಒಬ್ಬನೇ ವ್ಯಕ್ತಿ, ಮೂರು ಹೆಸರು ಆರೋಪಿ ಮೊಹಮ್ಮದ್‌ ಮುಬೀನ್‌ಗೆ ಮೂರು ಹೆಸರುಗಳಿದ್ದವು ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಪಾಸ್‌ಪೋರ್ಟ್‌ನಲ್ಲಿ ಮೊಹಮ್ಮದ್‌ ಮುಬೀನ್‌ ಎಂದು ಹೆಸರಿದ್ದರೆ, ಹಳೆಯ ಮತದಾರರ ಗುರುತಿನ ಚೀಟಿಯಲ್ಲಿ ಆತನ ಹೆಸರು ಮುಬೀನ್‌ ಸಾಬ್‌ ಎಂದಿದೆ. ಹಾಗೇ ಸ್ಥಳೀಯರು ಹಾಗೂ ಮನೆಯವರು ಆರೋಪಿಯನ್ನು ಮುಬೀನ್‌ ಶೇಕ್‌ ಎಂದು ಕರೆಯುತ್ತಿದ್ದರು ಎಂದು ಗೊತ್ತಾಗಿದೆ. ಹೀಗಾಗಿ ಈ ಮೂರರಲ್ಲಿ ಆತನ ಅಸಲಿ ಹೆಸರು ಯಾವುದೆಂದು ತಿಳಿಯಬೇಕಿದೆ.

ಆತನೇ ಆರೋಪಿ ಎಂದರೆ ನಂಬಲಿಲ್ಲ: ಮುಬೀನ್‌ನೇ ಕೊಲೆ ಆರೋಪಿ ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿತ್ತು. ಆದರೆ, ಆರೋಪಿ ಬಂಧಿಸುವವರೆಗೂ ಈ ವಿಚಾರವನ್ನು ಪೊಲೀಸರು ತಸ್ಲಿಮಾಬಾನು ಕುಟುಂಬದವರ ಜತೆ ಚರ್ಚಿಸಿರಲಿಲ್ಲ. ಕೊನೆಗೆ ಬಂಧಿಸಿದ ಬಳಿಕ ಮನೆಯವರಿಗೆ ತಿಳಿಸಿದರೂ ನಂಬುತ್ತಿರಲಿಲ್ಲ. ಘಟನೆಯ ಸಂಪೂರ್ಣ ಚಿತ್ರಣ ವಿವರಿಸಿದಾಗ ನಂಬಿದ್ದು, ಆರೋಪಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next