“ಪ್ರೇಮ’ ಕೇವಲ ಹುಡುಗ ಹುಡುಗಿಯರ ಮಧ್ಯೆ ಸಂಭವಿಸುವ ಕ್ರಿಯೆ ಅಲ್ಲ, ಅದು ಸರ್ವಾಂತರ್ಯಾಮಿ! ಪ್ರೇಮ ಅಲಿಯಾಸ್ ಪ್ರೀತಿ ಉರ್ಫ್ ಲವ್ ಇದೆಯಲ್ಲಾ ಅಷ್ಟು ಸಾಮಾನ್ಯದ ಸಂಗತಿಯಲ್ಲ ಬಿಡಿ. ಮೊದ ಮೊದಲು ಭಯವಾಗುವ, ಹೆದರಿಸುತ್ತಲೇ ಹೆಗಲೇರುವ , ಅತೀವ ಆಕರ್ಷಕ ಸಮ್ಮೋಹಿನಿ. ಹದಿನಾರರ ವಯಸ್ಸಿನ ಹುಚ್ಚು ಕೋಡಿ ಮನಸ್ಸಿನ ನೂರು ಕ್ಯಾಂಡಲ್ ಬಲ್ಬ್ ಪ್ರೀತಿ. ಏಕಾಂತದಲ್ಲಿ ಅಂತರಾಳದಲ್ಲಿ ಎದೆಯ ಒಳಸುಳಿಯಲ್ಲಿ ನಮಗೇ ಗೊತ್ತಿಲ್ಲದೆ ಪ್ರವಹಿಸುವ ಅಸ್ಪಷ್ಟ ಭಾವ ಚೈತ್ರ ಯಾನ ಪ್ರೀತಿ. ಮನುಷ್ಯ ರಷ್ಟೇ ಅಲ್ಲದೇ ಸಕಲ ಚರಾಚರ ಗಳ ನಡುವೆ ಸದಾ ಹರಿವ ಜೀವದ್ರವ್ಯ ಪ್ರೇರಕ ಪ್ರೀತಿ. ಹಗಲೆನ್ನದೆ ಇರುಳೆನ್ನದೆ ಸಕಲರನ್ನು ಕಾವ ಅಮೃತದ ಬಿಂದು ಈ ಸೀದಾ ಸಾದಾ ಪ್ರೀತಿ. ದೇಶ, ಕಾಲ, ಧರ್ಮ, ಜಾತಿ, ಅಂತಸ್ತು, ಭಾಷೆ, ವರ್ಣ ಎಲ್ಲವನ್ನೂ ಮೀರಿ ನಿಲ್ಲಬಲ್ಲ ಶಕ್ತಿ ಇರುವುದು ಮಾತ್ರ ಪ್ರೀತಿಗೆ ಎಂದರೆ ಅಚ್ಚರಿ ಪಡಬೇಕಿಲ್ಲ. ತಾಯಂತೆ ಪೊರೆವ, ತಂದೆಯಂತೆ ಕಾವ ಪ್ರೀತಿಗೆ ಶರಣು ಶರಣಾರ್ಥಿ.
ಪ್ರೀತಿಯನ್ನು ಪ್ರೀತಿಯಂದ ಪ್ರೀತ್ಸಿ ಎಂಬುದು ಸವಕಲು ಡೈಲಾಗು. ಅಕ್ಷರಶಃ ಪ್ರೀತಿಯ ಇರುವಿಕೆ, ಅದರ ಜೀವಂತಿಕೆಗಳನ್ನು ಕಂಡುಕೊಂಡು ಬದುಕುವುದರಲ್ಲಿ ನಿಜವಾದ ಅರ್ಥವಿದೆ. ನಮ್ಮನ್ನು ಕಾಡುವ, ಕೆಣಕುವ ಇನ್ನೊಂದು ಜೀವಿದೆ ಎಂಬುದೇ ಜಗತ್ತಿನ ಅಚ್ಚರಿಗಳಲ್ಲಿ ಒಂದಾದ ವಿಷಯ. ನಮ್ಮ ಪಾಲಿಗೆ ಬಂದದ್ದನ್ನೆÇÉಾ ಸ್ವೀಕರಿಸಿ, ಮೇಲು ಕೀಳು ಎಂಬ ಭಾವ ತೊರೆದು ಬದುಕುವುದರಲ್ಲಿ ನಿಜವಾದ ಅರ್ಥವಿದೆ.
//ಮಾವು ನಾವು, ಬೇವು ನಾವು ;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು.//
ಯಾವುದೋ ಯಾತನೆ, ಚಿಂತೆ, ಭಯ, ಮುಜುಗರ, ಸಂಕೋಚ ಇವೆಲ್ಲವನ್ನೂ ಹೋಗಲಾಡಿಸಿ ಮನಸ್ಸನ್ನು ಹಗುರಗೊಳಿಸಿ ಆಕಾಶದಲ್ಲಿ ತೇಲುವಂತೆ ಮಾಡುವ ಮಾಯಾ ಲಾಂದ್ರ ಪ್ರೀತಿ. ಒಂದೇವೊಂದು ಪ್ರೀತಿಯ ಮಾತು, ಹೆಗಲ ಮೇಲೆ ಕೈ ಇಟ್ಟ ಸ್ಪರ್ಷ ಇಷ್ಟು ಸಾಕು ಎÇÉಾ ಖಾಯಿಲೆ ದೂರಾಗಲು. ಆತ್ಮೀಯತೆ, ಅಕ್ಕರೆ, ಸನಿಹ, ಸಾನಿಧ್ಯಗಳು ತುಂಬಿಕೊಡುವ ಉತ್ಸಾಹದಲ್ಲಿ ಪ್ರೀತಿಯ ಉತ್ಕಟತೆ ಇದೆ. ಬದುಕು ಒಬ್ಬರೇ ಇರುವ ತನಕ ಹೇಗೋ ಸಾಗಿಬಿಡುತ್ತದೆ. ಹರೆಯದಲ್ಲಿ ಜೋಡಿಯಾಗಿ ಬದುಕಿನ ಬಂಡಿ ಎಳೆಯುವ ಹೊತ್ತು ಶುರುವಾದಾಗಲೆ ನಾವು ಎಷ್ಟು ಸಮರ್ಥರು ಎಂಬುದು ಅರಿವಿಗೆ ಬರುತ್ತದೆ. ಸಂಗಾತಿಯನ್ನು ಸ್ವಾಗತಿಸಲೇಬೇಕಲ್ಲ ಬದುಕಿನ ಒಂದು ಕಾಲಘಟ್ಟದಲ್ಲಿ.
//ನನ್ನ ಕೈ ಹಿಡಿದವಳೆ,
ಮಾಂದಳಿರ ಮೈಯವಳೆ,
ದೂರ ನಿಲ್ಲುವರು ಏಕೆ ಚೈತ್ರದೊಳಗೆ?
ಕೋಗಿಲೆಯ ಹಾಡಿನಲಿ
ತಳಿರು ಸಿರಿಬೀಡಿನಲಿ
ಒಲವ ಚಿಮ್ಮುತ ಬಾರೆ ನನ್ನ ಬಳಿಗೆ.//
– ಕಂಡಕ್ಟರ್ ಸೋಮು