Advertisement
ತನ್ನ ಪತ್ನಿ “ರಚ್ಚು’ವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಾಯಕ ಅಜೇಯ್, ಆಕೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧನಾಗಿರುತ್ತಾನೆ. ಪತಿ ಮೇಲಿನ ಉತ್ಕಟ ಪ್ರೀತಿಯಿಂದ, ಆಕೆಯ ಎಲ್ಲಾ ತಪ್ಪುಗಳನ್ನು ಕ್ಷಮಿಸುವ ಅಜೇಯ್, ಆಕೆಗಾಗಿ ಮಾಡಬಾರದ ಎಲ್ಲ ಸಾಹಸ (ತಪ್ಪು)ಗಳನ್ನೂ ಮಾಡುತ್ತಾನೆ. ಅಷ್ಟಕ್ಕೂ ಪತ್ನಿ ರಚ್ಚುಗಾಗಿ, ಪತಿ ಅಜೇಯ್ ತೆಗೆದುಕೊಂಡಿರುವ ರಿಸ್ಕ್ ಎಂಥದ್ದು ಅನ್ನೋದೇ “ಲವ್ ಯು ರಚ್ಚು’ ಚಿತ್ರದ ಕಥಾಹಂದರ.
Related Articles
Advertisement
ಇನ್ನು, ಚಿತ್ರಕಥೆ, ಸಂಭಾಷಣೆಯನ್ನು ಇನ್ನಷ್ಟು ಮೊನಚಾಗಿಸಿದ್ದರೆ, “ರಚ್ಚು’ ಓಟಕ್ಕೆ ಇನ್ನಷ್ಟು ವೇಗ ಸಿಗುವ ಸಾಧ್ಯತೆಗಳಿದ್ದವು. ಇನ್ನು “ಲವ್ ಯು ರಚ್ಚು’ ಸಿನಿಮಾದ ಟೈಟಲ್ ಹೇಳುವಂತೆ, ರಚಿತಾ ರಾಮ್ ನಿರ್ವಹಿಸಿರುವ ರಚ್ಚು (ರಚನಾ) ಪಾತ್ರದ ಸುತ್ತಲೇ ಇಡೀ ಚಿತ್ರಕಥೆ ಸಾಗುತ್ತದೆ. ರಚ್ಚು ಪಾತ್ರದಲ್ಲಿ ಕನಸು ಕಂಗಳ ಹುಡುಗಿಯಾಗಿ, ಗೃಹಿಣಿಯಾಗಿ ಎರಡು ಶೇಡ್‌ನ ಪಾತ್ರದಲ್ಲಿ ರಚಿತಾ ರಾಮ್ ಅಭಿನಯ ಗಮನ ಸೆಳೆಯುತ್ತದೆ. ಸಿನಿಮಾವನ್ನು ಹೈಲೈಟ್‌ನಲ್ಲಿ ರಚಿತಾ ಪಾತ್ರ ಕೂಡಾ ಪ್ರಮುಖವಾಗಿದೆ. ಪತ್ನಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಆಕೆಯ ಖುಷಿಗಾಗಿ ಏನು ಬೇಕಾದರೂ ತ್ಯಾಗ ಮಾಡಬಲ್ಲ ಪತಿಯ ಪಾತ್ರದಲ್ಲಿ ನಾಯಕ ಅಜೇಯ್ ರಾವ್ ಅವರದ್ದು ಅಚ್ಚುಕಟ್ಟಾದ ಅಭಿನಯ.
ನೆಗೆಟೀವ್ ಶೇಡ್‌ನ ರಾಘು ಶಿವಮೊಗ್ಗ, ಆರು ಗೌಡ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದ ಪಾತ್ರಗಳಿಗೆ ಚಿತ್ರದಲ್ಲಿ ಹೆಚ್ಚಿನ ಆದ್ಯತೆ ಇಲ್ಲದಿರುವುದರಿಂದ, ಅವುಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಎರಡು ಹಾಡುಗಳು ಥಿಯೇಟರ್ ಹೊರಗೂ ನೋಡುಗರ ಕಿವಿಯಲ್ಲಿ ಗುನುಗುಡುವಂತಿದೆ.
ಜಿ.ಎಸ್.ಕಾರ್ತಿಕ ಸುಧನ್