ಬ್ರುಸ್ಸೆಲ್: ಮಹಿಳೆಯೊಬ್ಬಳು ಮೃಗಾಲಯದ ಚಿಂಪಾಂಜಿಯೊಂದಿಗೆ ಪ್ರೀತಿ ಬೆಳೆಸಿಕೊಂಡಿದ್ದಾಳೆ. ವಿಶೇಷವೆಂದರೆ ಚಿಂಪಾಂಜಿ ಕೂಡ ಆಕೆಯನ್ನು ಮನಸಾರೆ ಪ್ರೀತಿಸಲಾರಂಭಿಸಿದೆ. ಈ ವಿಚಿತ್ರ ಘಟನೆ ನಡೆದಿರುವುದು ಬೆಲ್ಜಿಯಂನ ಆ್ಯಂಟ್ವರ್ಪ್ ಮೃಗಾಲಯದಲ್ಲಿ!
ಆ್ಯಂಟ್ವರ್ಪ್ ಮೃಗಾಲಯದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಮಹಿಳೆ ಕಳೆದ 4 ವರ್ಷಗಳಿಂದ ಪ್ರತಿ ವಾರ ಝೂಗೆ ಬರುತ್ತಿದ್ದಳು. ಪ್ರತಿ ಬಾರಿ ಚಿಂಪಾಜಿ ಬಳಿ ಹೋಗಿ ಅದರೊಂದಿಗೆ ಸಂವಹನ ನಡೆಸುತ್ತಿದ್ದಳು. ಗ್ಲಾಸ್ ರೂಂ ಒಳಗಿರುತ್ತಿದ್ದ ಚಿಟಾ ಹೆಸರಿನ ಚಿಂಪಾಂಜಿ ಜತೆ ಸನ್ನೆಯಲ್ಲೇ ಮಾತನಾಡುತ್ತಿದ್ದಳು. ಚಿಟಾ ಮತ್ತು ಆಕೆ ಪರಸ್ಪರ ಮುತ್ತನ್ನೂ ಕೊಟ್ಟುಕೊಳ್ಳುತ್ತಿದ್ದರಂತೆ.
ಇತ್ತೀಚೆಗೆ ಚಿಟಾ, ಆಕೆಯನ್ನು ಬಿಟ್ಟು ಬೇರಾರೊಂದಿಗೂ ಬೆರೆಯದೆ ಒಬ್ಬನೇ ಕುಳಿತಿರುತ್ತಿದ್ದ. ಈ ಹಿನ್ನೆಲೆಯಲ್ಲಿ ಆ ಮಹಿಳೆಗೆ ಮೃಗಾಲಯ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ:ಪ್ರಯಾಣ ಸಂಕಷ್ಟ: ಅಫ್ಘಾನ್ ಏಕದಿನ ಸರಣಿ ಲಂಕಾದಿಂದ ಪಾಕಿಸ್ಥಾನಕ್ಕೆ ಶಿಫ್ಟ್
ಮೃಗಾಲಯ ಅಧಿಕಾರಿಗಳು ಆಕೆಯನ್ನು ಕೇಳಿದಾಗ ಮೊದಲು ತಾನು ಪ್ರಾಣಿ ಪ್ರಿಯೆ ಎಂದಿದ್ದು, ನಂತರ ಚಿಂಪಾಂಜಿ ಜೊತೆಗೆ ಅಫೇರ್ ಹೊಂದಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ಇದೀಗ ಮೃಗಾಲಯ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಕ್ರಮವನ್ನು ಖಂಡಿಸಿ ಕೋರ್ಟ್ ಮೊರೆ ಹೋಗಲು ಮಹಿಳೆ ನಿರ್ಧರಿಸಿದ್ದಾಳೆ.