Advertisement

ಶಿವಣ್ಣ ಲವ್‌ಸ್ಟೋರಿ ಮಾಡ್ತಾರೆ,ನಮ್ಗೆ ಲವ್‌ ಸ್ಟೋರಿ ಬರೆಯೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ!

01:36 PM Aug 18, 2021 | Team Udayavani |

“ಶಿವಣ್ಣ 124ನೇ ಚಿತ್ರದಲ್ಲೂ ಲವರ್‌ಬಾಯ್‌ ಆಗಿ ಲವ್‌ಸ್ಟೋರಿಯಲ್ಲಿ ನಟಿಸುತ್ತಿದ್ದಾರೆ. ಬಹುಶಃ124 ಸಿನಿಮಾನಾ ನಾವು ಮಾಡೋ ಹೊತ್ತಿಗೆ ತಂದೆ ಕ್ಯಾರೆಕ್ಟರ್‌ ಮಾಡ್ತಾ ಇರ್ತಿವಿ…-ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ಶಿವರಾಜ್‌ಕುಮಾರ್‌ ಅವರ ಮುಖ ನೋಡಿದರು ಸುದೀಪ್‌.

Advertisement

ಮಂಗಳವಾರ ಬೆಳಗ್ಗೆ ಏಳೂವರೆಗೇ ಇಬ್ಬರು ಸ್ಟಾರ್‌ ನಟರು ಜೊತೆಯಾಗಿದ್ದರು. ಅದು ಸುದೀಪ್‌ ಹಾಗೂ ಶಿವಣ್ಣ. ಅದಕ್ಕೆಕಾರಣವಾಗಿದ್ದು, ಶಿವರಾಜ್‌ಕುಮಾರ್‌ಅವರ ಹೊಸ ಚಿತ್ರ. ಶಿವಣ್ಣ ನಟನೆಯ124ನೇ ಚಿತ್ರ “ನೀ ಸಿಗೋವರೆಗೂ’ಮುಹೂರ್ತ ಮಂಗಳವಾರ ಬೆಳಗ್ಗೆ ನಗರದ ಶೆರಟಾನ್‌ ಹೋಟೆಲ್‌ನಲ್ಲಿನಡೆಯಿತು.

ಕಿಚ್ಚ ಸುದೀಪ್‌ ಚಿತ್ರಕ್ಕೆ ಕ್ಲಾಪ್‌ ಮಾಡಿ, ಶಿವಣ್ಣ ಬಗ್ಗೆಮೆಚ್ಚುಗೆಯ ಮಾತುಗಳನ್ನಾಡಿದರು.”ಸಾಮಾನ್ಯವಾಗಿ ಚಿತ್ರರಂಗದಲ್ಲಿ ಒಬ್ಬ ಹೀರೋ ಒಂದಷ್ಟುವರ್ಷ ಇದ್ದು, ಹೊಸ ಹೊಸ ಪ್ರತಿಭೆಗಳು ಬರುತ್ತಿದ್ದಂತೆ ಸಿನಿಮಾಗಳು ಕಮ್ಮಿಯಾಗೋದು ಸಹಜ. ಆದರೆ, ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ ಇದ್ದರೆ ಮಾತ್ರ 124 ಸಂಖ್ಯೆಯನ್ನು ಮುಟ್ಟಲು ಸಾಧ್ಯ ಎಂಬುದನ್ನು ಶಿವಣ್ಣ ತೋರಿಸಿಕೊಟ್ಟಿದ್ದಾರೆ. ಸಿನಿಮಾ ಮೇಲಿನಶಿವಣ್ಣ ಪ್ರೀತಿಎಲ್ಲರಿಗೂ ಗೊತ್ತೇ ಇದೆ’ ಎಂದರು.

ಅಂದಹಾಗೆ, “ನೀ ಸಿಗೋವರೆಗೂ’ ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿ. ತುಂಬಾಗ್ಯಾಪ್‌ನ ನಂತರ ಶಿವಣ್ಣ ನಟಿಸುತ್ತಿರುವ ಲವ್‌ಸ್ಟೋರಿಇದು. ಈ ಬಗ್ಗೆ ಮಾತನಾಡುವ ಸುದೀಪ್‌, “”ಶಿವಣ್ಣ124ನೇ ಚಿತ್ರದಲ್ಲೂ ಲವರ್‌ಬಾಯ್‌ ಆಗಿ ಲವ್‌ಸ್ಟೋರಿಯಲ್ಲಿ ನಟಿಸುತ್ತಿದ್ದಾರೆ. ಬಹುಶಃ124 ಸಿನಿಮಾನಾ ನಾವುಮಾಡೋ ಹೊತ್ತಿಗೆ ತಂದೆಕ್ಯಾರೆಕ್ಟರ್‌ ಮಾಡ್ತಾ ಇರಿ¤àವಿ.ನನಗೆ ಒಂದು ಖುಷಿ ಹಾಗೂ ಬೇಸರವಿದೆ. ಖುಷಿ ಯಾಕೆ ಅಂದರೆ ಇಂತಹ ವ್ಯಕ್ತಿಗಳ ಜೊತೆ ನಾನಿರೋದಕ್ಕೆ. ಬೇಸರಯಾಕೆಂದರೆ ನನ್ನನ್ನು ಹಾಕಿಕೊಂಡು ಲವ್‌ಸ್ಟೋರಿತೆಗೆಯೋದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ.

ನಮಗೂ ಈ ತರಹಲವ್‌ಸ್ಟೋರಿ ಬರೆಯೋರು ಸಿಗಲಿ. ಇತ್ತೀಚೆಗೆ ನನ್ನಸಿನಿಮಾಗಳಲ್ಲಿ ರೊಮ್ಯಾಂಟಿಕ್‌ ಸಾಂಗ್‌ ಮಾಡಿದ್ದೇನೆನಪಿಲ್ಲ, ಎಷ್ಟೋ ವರ್ಷಗಳೇ ಆಗೋಯ್ತು’ ಎನ್ನುತ್ತಾ ಚಿತ್ರಕ್ಕೆ ಶುಭ ಹಾರೈಸಿದರು.ಇನ್ನು, ಸುದೀಪ್‌ ಅವರು ಮಾಡಿಕೊಂಡಿರುವ ಕಥೆಯೊಂದು ತನಗೆ ಇಷ್ಟವಾಗಿದ್ದು, ಸುದೀಪ್‌ ನಿರ್ದೇಶನದಲ್ಲಿ ನಾನು ನಟಿಸಲು ಸಿದ್ಧ ಎಂದು ಶಿವಣ್ಣ ಹೇಳಲು ಮರೆಯಲಿಲ್ಲ.

Advertisement

ಶಿವಣ್ಣ ಎನ್ನಬೇಡಿ,ಡಾರ್ಲಿಂಗ್‌ ಅನ್ನಿ

ಶಿವರಾಜ್‌ಕುಮಾರ್‌ ಅವರ “ನೀಸಿಗೋವರೆಗೂ’ ಚಿತ್ರದಲ್ಲಿ ಮೆಹರಿನ್‌ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದಮೆಹರಿನ್‌ಗೆ ಸುದೀಪ್‌ ಒಂದುಕಿವಿಮಾತು ಹೇಳಿದರು. “ನಾವುಪ್ರೀತಿಯಿಂದ ಶಿವಣ್ಣ ಎಂದು ಕರೆಯುತ್ತೇವೆಂದು ನೀವು ಅವರನ್ನು “ಶಿವಣ್ಣ’ ಎಂದುಕರೆಯಬೇಡಿ. ಏಕೆಂದರೆ ನೀವು ಮಾಡುತ್ತಿರೋದುಲವ್‌ಸ್ಟೋರಿ. ಅಣ್ಣ ಎಂದರೆ “ಬ್ರದರ್‌’ ಎಂದರ್ಥ.ಹಾಗಾಗಿ, ನೀವು ಕೊನೆ ಪಕ್ಷ ಸಿನಿಮಾಮುಗಿಯುವವರೆಗಾದರೂ”ಡಾರ್ಲಿಂಗ್‌’ ಎಂದು ಕರೆಯಿರಿ’ಎನ್ನುತ್ತಾ ನಗೆಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next