Advertisement

“ಲವ್ ಮಾಕ್ಟೇಲ್- 2′ಸ್ಕ್ರಿಪ್ಟ್ ಪೂಜೆ ಮುಗಿಸಿದ ಡಾರ್ಲಿಂಗ್ ಕೃಷ್ಣ

07:47 AM Jun 18, 2020 | Lakshmi GovindaRaj |

ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾದ ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶಿಸಿರುವ “ಲವ್ ಮಾಕ್ಟೇಲ್’ ಚಿತ್ರ ತೆರೆಕಂಡಾಗ ಅಷ್ಟಾಗಿ ಪ್ರತಿಕ್ರಿಯೆ ಪಡೆಯದಿದ್ದರೂ, ನಂತರದ ದಿನಗಳಲ್ಲಿ ಜನರಿಂದ ನಿರೀಕ್ಷೆಗೂ ಮೀರಿದ ಮೆಚ್ಚುಗೆ ಪಡೆದುಕೊಂಡಿತು. ಅಲ್ಲದೇ ಲಾಕ್​ಡೌನ್ ಸಮಯದಲ್ಲಿ ಓಟಿಟಿ ಫ್ಲಾಟ್​​ಫಾರಮ್​ನಲ್ಲಿ ತರೆಕಂಡು ಇನ್ನೂ ಹೆಚ್ಚು ಜನಪ್ರಿಯವಾಯಿತು.

Advertisement

“ಲವ್ ಮಾಕ್ಟೇಲ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಇದಕ್ಕೆ ಉತ್ತರವೆಂಬಂತೆ “ಲವ್ ಮಾಕ್ಟೇಲ್- 2′ ಸ್ಕ್ರಿಪ್ಟ್ ಶುರುಮಾಡಿರುವ ವಿಷಯವನ್ನು ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಡಾರ್ಲಿಂಗ್ ಕೃಷ್ಣ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

ಇದೀಗ “ಲವ್ ಮಾಕ್ಟೇಲ್- 2′ ಚಿತ್ರದ ಸ್ಕ್ರಿಪ್ಟ್ ಮುಗಿದಿದ್ದು, ಚಿತ್ರೀಕರಣ​ ಇನ್ನಷ್ಟೇ ಶುರುವಾಗಬೇಕಿದೆ. ಇನ್ನು ಪೂರ್ಣಗೊಂಡ ಸ್ಕ್ರಿಪ್ಟ್​ ಪೂಜೆಯನ್ನು ಬುಧವಾರ ಗಂಗಾ ನಗರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕೃಷ್ಣ ಮತ್ತು ಮಿಲನಾ ನೆರವೇರಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಸದ್ಯ ಹೊಸ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ, ಶೂಟಿಂಗ್​ ಆರಂಭಿಸಲು  ಸರ್ಕಾರದ ಗ್ರೀನ್​ಸಿಗ್ನಲ್​ಗಾಗಿ ಚಿತ್ರತಂಡ ಕಾಯಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next