Advertisement

ಪ್ರೀತಿ-ವಿಶ್ವಾಸದಿಂದ ಜೀವನ ಸಾಗಿಸಿ

12:51 PM Apr 30, 2017 | |

ಮಲೇಬೆನ್ನೂರು: ತಂದೆ-ತಾಯಿ, ಅತ್ತೆ-ಮಾವ, ಎಲ್ಲ ಬಂಧು-ಬಾಂಧವರ ಮತ್ತು ಪರಿವಾರದಡಿಯಾಗಿ ಜೀವನ ಸಾಗಿಸಿದಾಗ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂದು ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. 

Advertisement

ಪಟ್ಟಣದ ನಂದಿಗುಡಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ  ಹಾಗೂ ಶ್ರೀ ಬಸವಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ 12ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅವರು ಮಾತನಾಡಿದರು. 

ವಿರೋಧ, ವಾದ  ಮತ್ತು ಹಗೆತನ ದೂರಮಾಡಿ. ಸಾಮರಸ್ಯ ಬದುಕಿಗೆ ಪ್ರೇಮ, ಪ್ರೀತಿ, ವಿಶ್ವಾಸಗಳನ್ನು ಮೈಗೂಡಿಸಿಕೊಂಡು ಸುಖ ಶಾಂತಿಯಿಂದ ಜೀವನ ಸಾಗಿಸಿ ಎಂದು 21 ಜೋಡಿ ನವ ದಂಪತಿಗಳಿಗೆ ಶುಭ ಹಾರೈಸಿದರು. 

ಜಾತಿ, ಮತ, ಪಂಥ ಇವುಗಳ ಬೇಧವಿಲ್ಲದೆ ಐಕ್ಯಮತ್ಯದಿಂದ ಇಂತಹ ಸರಳ ಸಾಮೂಹಿಕ ವಿವಾಹಗಳು ಜರುಗಬೇಕು. ಈ ಕಲ್ಪನೆಯು 12ನೇ ಶತನಮಾನದಲ್ಲೇ ಭಕ್ತ ಭಂಡಾರಿ ಬಸವಣ್ಣನವರ ಪರಿಕಲ್ಪನೆಯಾಗಿತ್ತು ಎಂದರು. 

ಅರೆ ಮಾದೇನಹಳ್ಳಿಮಠದ ಶ್ರೀ ಶಿವ ಸುಜ್ಞಾನತೀರ್ಥ ಮಹಾಸ್ವಾಮೀಜಿ  ಮಾತನಾಡಿ, ಜಗಜ್ಯೋತಿ ಬಸವೇಶ್ವರರು ಮನುಕುಲವನ್ನು ಒಂದೇ ವೇದಿಕೆಯಲ್ಲಿ ಕಾಣಬೇಕೆಂದುಕೊಂಡಿದ್ದು, ಧಾರ್ಮಿಕ ಏಕತೆ ಸಾರುತ್ತಿರುವ ಇಂತಹ ಕಾಯಕ್ರಮ ಹೆಚ್ಚು  ನಡೆಯಬೇಕು ಎಂದರು. 

Advertisement

ಶಾಸಕ ಎಚ್‌.ಎಸ್‌. ಶಿವಶಂಕರ್‌, ಕಾಂಗ್ರೆಸ್‌ ಮುಖಂಡ ಎಸ್‌. ರಾಮಪ್ಪ, ಎಪಿಎಂಸಿ ಸದಸ್ಯರ ಮಂಜುನಾಥ್‌ ಪಟೇಲ್‌, ಮಾಜಿ ಕುಲಪತಿ ದೀಟೂರು ಮಹೇಶ್ವರಪ್ಪ, ಮಾಗನಹಳ್ಳಿ ಹಾಲಪ್ಪ ಮುಂತಾದವರು ಮಾತನಾಡಿದರು. 

ಹುಲಿಕಂತಿ ಮಠದ ಶ್ರೀ ಸಿದ್ದಯಸ್ವಾಮಿ, ಮಾಜಿ ಶಾಸಕ ಬಿ.ಪಿ. ಹರೀಶ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ವಿಎಸ್‌ಎಸ್‌ಎನ್‌ ಅಧ್ಯಕ್ಷ ಕೆ.ಪಿ. ಗಂಗಾಧರ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಯಕ್ಕನಹಳ್ಳಿ ಬಸವರಾಜಪ್ಪ, 

ಭೋವಿಕುಮಾರ್‌, ಬೆಸ್ಕಾಂ ಇಂಜಿನಿಯರ್‌ ಶ್ರೀನಿವಾಸ್‌, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಸುರೇಶ್‌, ಸದಸ್ಯರಾದ ಯೂಸೂಫ್‌ ಖಾನ್‌, ಸುಬ್ಬಿರಾಜಪ್ಪ, ಮುಖಂಡರಾದ ಎಂ. ಮಂಜುನಾಥ್‌, ಕಣ್ಣಾಳ್‌ ಪರಶಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next