Advertisement
ಅವಳಿಗೆ ಅವನ ಬಗ್ಗೆ ಗೊತ್ತಿದೆ. ಅವನಿಗೆ ಅವಳ ಮೇಲೆ ಮನಸ್ಸಿದೆ. ಇಷ್ಟು ಹೇಳಿದರೆ ಸಾಕು, ಅವರಿಬ್ಬರ ಪ್ರಯಾಣ ಮುಗಿಯುವಷ್ಟರಲ್ಲಿ ಅವಳಿಗೂ ಅವನ ಮೇಲೆ ಪ್ರೀತಿಯಾಗುತ್ತದೆ ಎಂದು ಸಿಕ್ಕಾಪಟ್ಟೆ ಚಿತ್ರಗಳನ್ನು ನೋಡಿರುವ ಪ್ರೇಕ್ಷಕರು ಹೇಳಿಬಿಡುತ್ತಾರೆ. ಅವರ ಊಹೆ ತಪ್ಪೇನಲ್ಲ. ಖಂಡಿತವಾಗಿಯೂ ಚಿತ್ರ ಮುಗಿಯುವಷ್ಟರಲ್ಲಿ ಅವಿರಬ್ಬರು ಒಂದಾಗುತ್ತಾರೆ. ಆದರೆ, ಹೇಗೆ ಎಂಬುದಕ್ಕೆ ಚಿತ್ರ ನೋಡಬೇಕು.
Related Articles
Advertisement
ಪ್ರೇಮ, ತರಲೆಗಳ ಜೊತೆಗೆ ಹೋರಾಟ, ಸಿದ್ಧಾಂತ, ಮಾನವೀಯತೆ ಎಲ್ಲವನ್ನೂ ಸೇರಿಸುತ್ತಾ ಹೋಗುತ್ತಾರೆ. ಮೊದಲ ಎರಡು ಗಂಟೆ ಸ್ವಲ್ಪ ಹಗರುವಾಗಿ ಸಾಗುವ ಚಿತ್ರ, ಕೊನೆಯ 20 ನಿಮಿಷ ಬಹಳ ಗಂಭೀರವಾಗುತ್ತದೆ. ಆರಂಭದಲ್ಲೆಲ್ಲಾ ಅನೂಪ್ ಏನು ಹೇಳುವುದಕ್ಕೆ ಹೊರಟಿದ್ದರು ಎಂಬುದು ಕೊನೆಗೆ ಮನವರಿಕೆಯಾಗುತ್ತದೆ. ಉದಾಹರಣೆಗೆ, “ಮುಂದೆ ಬನ್ನಿ’ ಎಂಬ ರೀಮಿಕ್ಸ್ ಹಾಡು. ಚಿತ್ರದ ಟೈಟಲ್ ಕಾರ್ಡ್ ತೋರಿಸುವಾಗ ಬರುವ ಈ ಹಾಡು ಗಿಮಿಕ್‌ಗೆ ಅಂತನಿಸಬಹುದು.
ಆದರೆ, ಚಿತ್ರದ ಅಂತ್ಯಕ್ಕೆ ಆ ಹಾಡಿನ ತಾತ್ಪರ್ಯ ಬಹಳ ಅದ್ಭುತವಾಗಿ ಸಿಂಕ್ ಆಗುತ್ತದೆ ಎಂದು ಕ್ರಮೇಣ ಅರ್ಥವಾಗುತ್ತದೆ. ಹಾಗಾಗಿ ಚಿತ್ರದ ವಿಷಯದಲ್ಲಿ ಅರ್ಜೆಂಟ್ ಮಾಡಿಕೊಳ್ಳಬಾರದು. ಸ್ವಲ್ಪ ತಾಳ್ಮೆಯಿಂದ ಕಾದರೆ, ಚಿತ್ರ ಹಿಡಿಸೀತು. ಅನೂಪ್ ಹಾಗೂ ನಿರೂಪ್ ಇಬ್ಬರಿಗೂ ಇದು “ರಂಗಿತರಂಗ’ಕ್ಕಿಂತ ತದ್ವಿರುದ್ಧವಾದ ಚಿತ್ರ. ಅದು ಗಂಭೀರ ಮತ್ತು ವಿಷಾಧದ ಚಾಯೆಯಲ್ಲಿ ಸಾಗಿದರೆ, ಇಲ್ಲಿ ಚಿತ್ರ ಆರಂಭದಿಂದ ಕ್ಲೈಮ್ಯಾಕ್ಸ್‌ವರೆಗೂ ಮಜವಾಗಿ ಸಾಗುತ್ತದೆ.
ಆ ಮಟ್ಟಿಗೆ ಅವರಿಬ್ಬರಿಗೂ ದೊಡ್ಡ ಬದಲಾವಣೆ ಎಂದರೆ ತಪ್ಪಿಲ್ಲ. ಅನೂಪ್ ಹಾಗೂ ನಿರೂಪ್ ಇಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಆವಂತಿಕಾ ಶೆಟ್ಟಿ ಸಹ ಲವಲವಿಕೆಯಿಂದ ಕಾಣಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ರವಿಶಂಕರ್ ವಿಭಿನ್ನವಾಗಿ ಕಾಣಿಸುತ್ತಾರೆ ಎಂಬುದು ನಿಜ. ಆದರೆ, ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇಲ್ಲ. ಹಾಗೆಯೇ ಅವರು ತೆರೆಯ ಮೇಲೆ ಹೆಚ್ಚು ಹೊತ್ತು ಕಾಣುವುದಿಲ್ಲ.
ಆರ್ಯ ಬಹಳ ಕಷ್ಟಪಟ್ಟು ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನೊಂದಿಷ್ಟು ಹೊಸಬರು ಚಿತ್ರದಲ್ಲಿ ನಟಿಸಿದ್ದು, ಅವರೆಲ್ಲರೂ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರೆಲ್ಲರ ಜೊತೆಗೆ ಇನ್ನೊಬ್ಬರನ್ನು ಮರೆಯುವ ಹಾಗಿಲ್ಲ. ಅವರೇ ಪುನೀತ್ ರಾಜಕುಮಾರ್. ಪುನೀತ್ ಈ ಚಿತ್ರದಲ್ಲಿ ಅಭಿನಯಿಸಿಲ್ಲದಿದ್ದರೂ ನಿರೂಪಕರಾಗಿ ಚಿತ್ರದ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರ ಜೊತೆಗೆ ಇರುತ್ತಾರೆ. ಚಿತ್ರವನ್ನು ಮುನ್ನಡೆಸುವುದು ಅವರೇ.
ಅನೂಪ್ ಇಲ್ಲಿ ಬರೀ ನಿರೂಪಣೆಯಿಂದಷ್ಟೇ ಅಲ್ಲ, ಸಂಗೀತದಿಂದಲೂ ಗಮನಸೆಳೆಯುತ್ತಾರೆ. ಅವರ ಸಂಗೀತ ನಿರ್ದೇಶನದಲ್ಲಿ ಒಂದೆರೆಡು ಹಾಡುಗಳು ನಿಜಕ್ಕೂ ಚೆನ್ನಾಗಿ ಮೂಡಿಬಂದಿವೆ. ಇನ್ನು ಇಡೀ ಚಿತ್ರವನ್ನು ಬಹಳ ಅದ್ಭುತವಾಗಿ ಸೆರೆಹಿಡಿದಿರುವುದು ಛಾಯಾಗ್ರಾಹಕ ವಿಲಿಯಮ್ ಡೇವಿಡ್. ಬಸ್ ಒಳಗಿರಲಿ, ಹಾಸ್ಟಲ್ ಇರಲಿ, ಕಾಡಿರಲಿ … ಎಲ್ಲವನ್ನೂ ಬಹಳ ಚೆನ್ನಾಗಿ ಸೆರೆಹಿಡಿದಿದ್ದಾರೆ ವಿಲಿಯಂ.
ಚಿತ್ರ: ರಾಜರಥನಿರ್ದೇಶನ: ಅನೂಪ್ ಭಂಡಾರಿ
ನಿರ್ಮಾಣ: ಅಜಯ್ ರೆಡ್ಡಿ, ಅಂಜು ವಲ್ಲಭನೇನಿ, ವಿಶು ಡಾಕಪ್ಪಗಿರಿ ಮತ್ತು ಸತೀಶ್ ಶಾಸ್ತ್ರಿ
ತಾರಾಗಣ: ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ರವಿಶಂಕರ್, ಆರ್ಯ, ವಿನಯಾ ಪ್ರಸಾದ್ ಮುಂತಾದವರು * ಚೇತನ್ ನಾಡಿಗೇರ್