Advertisement
ಏ ಹುಡುಗಾ,ನನ್ನ ಮೇಲೆ ಕೋಪ ಬಂದಿದ್ಯಾ? ನಿನ್ನನ್ನ ಸುಮ್ ಸುಮ್ನೆ ಡೌಟ್ ಮಾಡ್ತೀನಿ ಅಂತ ಬೇಜಾರಾ? ಅದು ಅನುಮಾನವಲ್ಲ, ನೀನು ನನ್ನವನು, ನನಗೆ ಮಾತ್ರ ಸೇರಿದವನು ಎಂಬ ಹುಚ್ಚು ಆಸೆ. ನೀನು ಬೇರೆ ಯಾವ ಹುಡುಗಿಯೊಂದಿಗೂ ಮಾತನಾಡಬಾರದು ಅನ್ನೋದು, ಪ್ರೀತಿಯ ಜೊತೆಗೇ ಅಡಗಿರೋ ಸ್ವಾರ್ಥ.
Related Articles
Advertisement
ನಿನ್ನ ಫೋನ್ ಬ್ಯುಸಿ ಬಂದ್ರೆ, ಆನ್‌ಲೈನ್ ಇದ್ರೂ ನನ್ನ ಜೊತೆ ಚಾಟ್ ಮಾಡದಿದ್ರೆ ನಾನು ಸಿಐಡಿ ಆಫೀಸರ್ ಥರ ಆಗಿಬಿಡ್ತೀನಿ. ಯಾಕೆ ಬ್ಯುಸಿ ಬರಿ¤ದೆ? ಯಾರ ಜೊತೆ ಚಾಟ್ ಮಾಡ್ತಾ ಇದ್ದೀಯ? ಅಂತೆಲ್ಲಾ ಸಾವಿರ ಪ್ರಶ್ನೆ ಕೇಳ್ತೀನಿ, ಅದು ನಿನ್ನ ಮೇಲಿನ ಅಪನಂಬಿಕೆಯಿಂದಲ್ಲ. ನೀನು ನನ್ನೋನು ಅನ್ನೋ ಸ್ವಾರ್ಥದಿಂದ!
ನೀನು ಆಗಾಗ ಹೇಳ್ತಾ ಇರಿ¤àಯ- ಸಂಬಂಧಗಳು ತುಂಬಾ ನಾಜೂಕು. ಗಟ್ಟಿ ಹಿಡಿದರೆ ಉಸಿರುಗಟ್ಟುತ್ತದೆ, ಜಾಸ್ತಿ ಸಡಿಲ ಬಿಟ್ಟರೆ ಹಾರಿ ಹೋಗುತ್ತದೆ ಅಂತ. ಆ ಮಾತು ನಿಜ. ನಿನ್ನನ್ನ ಗಟ್ಟಿಯಾಗಿ ಹಿಡ್ಕೊಂಡು ಉಸಿರುಗಟ್ಟಿಸೋಕೆ ನನಗೂ ಇಷ್ಟ ಇಲ್ಲ. ಹಾಗಂತ ಸಡಿಲ ಬಿಟ್ಟು ನೀನು ಹಾರಿಹೋಗಿಬಿಟ್ರೆ… ಈಗಷ್ಟೇ ನಂಬಿಕೆ ಇದೆ ಅಂದೆ, ಮತ್ತೆ ಹಳೇ ರಾಗ ತೆಗೆದೆಯಲ್ಲಾ ಅಂತ ಕೋಪಿಸ್ಕೊಳ್ಳಬೇಡ.
ನನ್ನ ಕೆಲವೊಂದು ವರ್ತನೆ ನಿನಗೆ ಕೋಪ ತರಿಸುತ್ತೆ. ಚಿಕ್ಕ ಹುಡುಗಿ ಥರ ಹಠ ಮಾಡೋದು, ನಿನಗೆ ತಿರುಗಿಸಿ ಮಾತಾಡೋದು.. ಅದು ನನ್ನ ಹುಟ್ಟುಗುಣ. ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅಂತಾರೆ. ಆದರೆ, ನಿನಗೋಸ್ಕರ ಆ ಎಲ್ಲಾ ಗುಣಗಳನ್ನು ಸುಟ್ಟುಬಿಡ್ತೀನಿ ಸರೀನಾ? ನನ್ನ ಈ ಹುಚ್ಚು ಪ್ರೀತೀನ ಅರ್ಥ ಮಾಡ್ಕೊà…ಅದಕ್ಕೆ ಈ ಪತ್ರದ ಮೂಲಕ ನನ್ನ ಹುಚ್ಚುತನಕ್ಕೆಲ್ಲಾ ಸಮರ್ಥನೆ ಕೊಡುತ್ತಿದ್ದೇನೆ. ಯಾಕಂದ್ರೆ, ನೀನು ನನ್ನವನು ಮತ್ತು ನನಗೆ ಮಾತ್ರ ಸೇರಿದವನು… ಇಂತಿ ನಿನ್ನಾಕೆ
ರೋಸ್, ತುಮಕೂರು