Advertisement

ಹೊಸಬರ ಲವ್‌ ಇನ್‌ ಲಾಕ್‌ಡೌನ್ :‌ ತೆರೆಮೇಲೆ ಪ್ರೇಮಕಥೆ

04:26 PM Dec 04, 2020 | Suhan S |

ಕೋವಿಡ್‌ ಲಾಕ್‌ಡೌನ್‌ನಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಇಲ್ಲೊಂದು ಚಿತ್ರ ತೆರೆಗೆ ಬರುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಲವ್‌ ಇನ್‌ ಲಾಕ್‌ಡೌನ್‌’. ಲಾಕ್‌ಡೌನ್‌ ಸಮಯದಲ್ಲಿ ನಡೆದ ಅಪರೂಪದ ಪ್ರೇಮ ಕಥೆಯೊಂದನ್ನು ತೆರೆಮೇಲೆ ಹೇಳಲು ಹೊರಟಿದ್ದಾರೆ ನಿರ್ದೇಶಕ ಮಂಜುನಾಥ್‌ ಬಿ. ರಾಮ್‌.

Advertisement

“ಶ್ರೀಕನ್ನಡಾಂಬೆ ಮೂವೀಸ್‌’ ಬ್ಯಾನರ್‌ ಅಡಿಯಲ್ಲಿ ಎಂ.ನಾರಾಯಣ ಸ್ವಾಮಿ ಬಂಡವಾಳ ಹೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಲವ್‌ ಇನ್‌ ಲಾಕ್‌ಡೌನ್‌’ ಚಿತ್ರದಲ್ಲಿ ನಾಯಕನಾಗಿ ಮಂಜುನಾಥ್‌ಮತ್ತು ನಾಯಕಿಯಾಗಿ ಯಶಸ್ವಿ ತೆರೆಮೇಲೆ ಕಾಣಿಸಿ ಕೊಳ್ಳುತ್ತಿದ್ದಾರೆ. ಉಳಿದಂತೆ, ಕಿಲ್ಲರ್‌ ವೆಂಕಟೇಶ್‌, ಬ್ಯಾಂಕ್‌ ಜನಾರ್ದನ್‌, ಗಣೇಶ್‌ ರಾವ್‌, ಭಲರಾಮ್‌ ಪಾಂಚಾಲ್, ಪಲ್ಲವಿ ರಾಜೇಂದ್ರ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ರಮೇಶ್‌ ಕೊಯಿರಾ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ  ಡ್ಯಾನಿಯಲ್‌ ಸಂಗೀತ ಸಂಯೋಜನೆಯಿದೆ. ಚಿಕ್ಕಬಳ್ಳಾಪುರ, ಕೊಲಾರ, ಗಜೇಂದ್ರಗಡ ಸುತ್ತಮುತ್ತ ಮೂರು ಹಂತದಲ್ಲಿ “ಲವ್‌ ಇನ್‌ ಲಾಕ್‌ಡೌನ್‌’ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next