Advertisement

ಸುನಿ “ಬಜಾರ್‌’ನಲ್ಲಿ “ಲವ್ ಫೇಲ್ಯೂರ್’: Watch

03:59 PM Aug 11, 2018 | |

“ಚಮಕ್‌’ ನಂತರ “ಬಜಾರ್‌’ ಎಂಬ ಹೊಸ ಚಿತ್ರವನ್ನು ಸುನಿ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಅಲ್ಲದೇ ಚಿತ್ರದ ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಚಿತ್ರತಂಡ ಚಿತ್ರದ “ಲವ್ ಫೇಲ್ಯೂರ್’ ಸಾಂಗ್ ನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದೆ. ಈ ಹಾಡಿಗೆ ವಿಜಯ್ ಪ್ರಕಾಶ್ ಮತ್ತು ಸಾಧುಕೋಕಿಲಾ ಧ್ವನಿ ನೀಡಿದ್ದು, ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

Advertisement

ನೋಡಲು ಪಕ್ಕಾ ಕಮರ್ಷಿಯಲ್ ಸಿನಿಮಾದಂತೆ ಕಾಣಿಸುತ್ತಿರುವ “ಬಜಾರ್’ ಸಿನಿಮಾ ಅಂಡರ್ ವರ್ಲ್ಡ್ ಕಥಾಹಂದರವನ್ನೊಳಗೊಂಡಿದ್ದು, ಈ ಚಿತ್ರದಲ್ಲಿ ಪ್ರೇಮ ಸಂದೇಶ ಸಾರುವ ಪಾರಿವಾಳಕ್ಕೂ ಪ್ರಮುಖ ಪಾತ್ರವಿದೆ. ಪಾರಿವಾಳಗಳ ಬೆಟ್ಟಿಂಗ್‍ನಲ್ಲಿ ನಡೆಯುವ ಪ್ರೇಮಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. “ಬಜಾರ್‌’ ಚಿತ್ರದ ಮೂಲಕ ಧನ್‌ವೀರ್‌ ಎಂಬ ಹೊಸ ನಟನನ್ನು ಸುನಿ ಕನ್ನಡಕ್ಕೆ ಪರಿಚಯಿಸುತ್ತಿದ್ದು, ಧನ್‌ವೀರ್‌ ಎದುರು ನಾಯಕಿಯಾಗಿ “ಧೈರ್ಯಂ’ನ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. 

“ಬಜಾರ್‌’ ಚಿತ್ರವನ್ನು ಭಾರತಿ ಫಿಲಂ ಪ್ರೊಡಕ್ಷನ್ಸ್‌ನಡಿ ತಿಮ್ಮೇಗೌಡ ನಿರ್ಮಿಸುತ್ತಿದ್ದು, ಎಂ.ಎಲ್‌. ಪ್ರಸನ್ನ ಅವರ ಕಥೆಗೆ ಸುನಿ ಚಿತ್ರಕಥೆ ರಚಿಸಿದ್ದಾರೆ. ಸುನಿ ಮತ್ತು “ಮೃಗಶಿರ’ ಶ್ರೀಕಾಂತ್‌ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು, ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಇನ್ನು ನಟ ಶಿವಧ್ವಜ್‌, ಚಿತ್ರದ ಪ್ರೊಡಕ್ಷನ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next