Advertisement
ಜಾಹೀರಾತಿನಲ್ಲಿ ಮೊದಲ ಭೇಟಿ: ಅದು, 2013ರ ಸಮಯ. ಅದಾಗಲೇ ಕೊಹ್ಲಿ ಕ್ರಿಕೆಟ್‌ನಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ. ಧೋನಿ ನಂತರ ಕೊಹ್ಲಿಯೇ ನಾಯಕ ಅನ್ನುವ ಕೂಗು ಆಗಲೇ ಎದ್ದಿತ್ತು. ಹೀಗಾಗಿ ಜಾಹೀರಾತು ಕಂಪನಿಗಳು ಕೊಹ್ಲಿಯ ಹಿಂದೆ ಬಿದ್ದಿದ್ದವು. ಶಾಂಪೂವೊಂದರ ಜಾಹೀರಾತಿಗೆ ಕೊಹ್ಲಿ ಸಹಿ ನೀಡಿದ್ದ. ಅತ್ತ ಅನುಷ್ಕಾ ಕೂಡ ಅದೇ ಜಾಹೀರಾತಿನಲ್ಲಿದ್ದರು. ಈ ಇಬ್ಬರಿಂದ ಮೊದಲ ಬಾರಿಗೆ ಜಾಹೀರಾತು ಮಾಡಿಸಲಾಯಿತು. ಇದೇ ಪರಿಚಯ ಮುಂದೇ ಸ್ನೇಹವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿತು.
Related Articles
Advertisement
ಬ್ರೇಕ್‌ಅಪ್ ಗಾಸಿಪ್: ಚೆನ್ನಾಗಿಯೇ ಇದ್ದ ಈ ಜೋಡಿಯ ನಡುವಿನ ಬ್ರೇಕ್‌ಅಪ್ ಸುದ್ದಿ ಹಬ್ಬಿದ್ದು 2016ರಲ್ಲಿ. ಇದಕ್ಕೆಲ್ಲ ಕಾರಣವಾಗಿದ್ದು ಬಾಲಿವುಡ್. ಹೌದು, ಅನುಷ್ಕಾಗೆ ಬಾಲವುಡ್ ಬಿಡಲು ಇಷ್ಟಿಯಿಲ್ಲ. ಆದರೆ ಕೊಹ್ಲಿಗೆ ಅನುಷ್ಕಾ ಇನ್ನು ಮುಂದೆ ಚಿತ್ರಗಳಲ್ಲಿ ಅಭಿನಯಿಸುವುದುಬೇಡ ಅನ್ನುವ ಭಾವನೆಯಿದೆ. ಈ ಬಿಕ್ಕಟ್ಟಿನಿಂದ ಈ ಜೋಡಿ ಬ್ರೇಕ್‌ಅಪ್ ಆಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸುಮಾರು 6 ತಿಂಗಳ ಕಾಲ ಈ ಜೋಡಿ ಜತೆಯಾಗಿ ಓಡಾಡಿರಲಿಲ್ಲ. ಪಾರ್ಟಿಗಳಲ್ಲಿ ಭೇಟಿ ಮಾಡಿದರೂ ದೂರವೇ ಉಳಿದಿದ್ದರು. ಇದು ಬ್ರೇಕ್‌ಅಪ್ ಗಾಸಿಪ್ ಸೃಷ್ಟಿಸಿತ್ತು.
ಪ್ಯಾಚ್‌ಅಪ್ ಮಾಡಿದ ಸಲ್ಮಾನ್ ಖಾನ್: ದೂರವಾಗಿದ್ದ ಅನುಷ್ಕಾ ಮತ್ತು ಕೊಹ್ಲಿ ಜೋಡಿಯನ್ನು ಮತ್ತೆ ಒಂದಾಗಿಸಿದ್ದು ಬಾಲಿವುಡ್ ಬಾಕ್ಸ್ ಆಫೀಸ್ ಕಿಂಗ್ ಸಲ್ಮಾನ್ ಖಾನ್ ಅನ್ನುವ ಮಾತಿದೆ. ಕೊಹ್ಲಿ ಮತ್ತು ಅನುಷ್ಕಾ ಇಬ್ಬರಿಗೂ ಆತ್ಮೀಯ ಸ್ನೇಹಿತನಾಗಿದ್ದ ಸಲ್ಮಾನ್ ಈ ಜೋಡಿಯನ್ನು ಪುನಃ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಅವರನ್ನು ಪಾರ್ಟಿಯೊಂದರಲ್ಲಿ ಭೇಟಿ ಮಾಡಿಸಿದ ಸಲ್ಮಾನ್ ಪ್ಯಾಚ್‌ಅಪ್ ಮಾಡಿಸಿದ್ದಾರೆ.
ಜತೆಜತೆಯಲ್ಲಿಯೇ ಸುತ್ತಾಟ: ಪ್ಯಾಚ್‌ಅಪ್ ನಂತರ ಅಧಿಕೃತವಾಗಿ ಈ ಜೋಡಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಜತೆಗಿರುವ ಫೋಟೋಗಳನ್ನು ಕೊಹ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಹೆಚ್ಚಿನದಾಗಿ ಇವರ ಓಡಾಟ ಭಾರತ ಕ್ರಿಕೆಟ್ ತಂಡ ವಿದೇಶಿ ಪ್ರವಾಸ ಕೈಗೊಂಡಾಗ ಆಗಿರುತ್ತಿತ್ತು. ಹಣವಿದ್ದು, ತಾರಾಪಟ್ಟವಿದ್ದು, ಹಲವು ಏಳು ಬೀಳುಗಳನ್ನು ಕಂಡು ಅಂತೂ ಮದುವೆಯಾಗಿದ್ದಾರೆ. ಈ ಜೋಡಿಗೊಂದು ಶುಭಹಾರೈಸೋಣ.