ಬೀದರ: ತಾಯಿ ಮಡಿಲಲ್ಲಿ ಕಲಿತಿರುವ ಭಾಷೆಯೇ ಮಾತೃಭಾಷೆ. ಅಂತಹಮಾತೃ ಭಾಷೆಯಾದ ಕನ್ನಡ ಭಾಷೆಮೇಲೆ ವಿಶ್ವಾಸವಿಟ್ಟು ಪ್ರೀತಿಸಿ,ಗೌರವಿಸಬೇಕು. ಆಗ ಮಾತ್ರ ನಮ್ಮವ್ಯಕ್ತಿತ್ವ ವಿಕಾಸ ಹೊಂದುತ್ತದೆ ಎಂದುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಟಿ.ಎಸ್. ನಾಗಾಭರಣ ತಿಳಿಸಿದರು.
ನಗರದ ಜ್ಞಾನಸುಧಾ ವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜ್ಞಾನಸುಧಾ ಸಿವಿಲ್ ಸರ್ವಿಸಸ್ ಅಕಾಡೆಮಿ ಹಾಗೂ ಜಿಲ್ಲಾ ಕಸಾಪದಿಂದ ಅನ್ಯ ಭಾಷಿಕರಿಗಾಗಿ ಕನ್ನಡಕಲಿಕಾ ಕೇಂದ್ರ ಉದ್ಘಾಟಿಸಿ ಅವರುಮಾತನಾಡಿದರು. ನಮ್ಮ ನಾಡಿನ ಮಾತೃಭಾಷೆ ನಿಜವಾದ ಶಕ್ತಿ ಇಂದಿನ ಯುವಕರುಅರಿತುಕೊಂಡು ಈ ಭಾಷೆ ಎಲ್ಲ ಕಡೆಪಸರಿಸಬೇಕು. ಕನ್ನಡ ಸದಾಕಾಲ ಸಾರ್ವಭೌಮವಾಗಿರಬೇಕೆಂದರೆ ಮೊದಲು ಕನ್ನಡಿಗರು ಕನ್ನಡ ಭಾಷೆ ಹೆಚ್ಚಾಗಿ ಬಳಸುವ ಮೂಲಕಮಾತೃಭಾಷೆ ಋಣ ತೀರಿಸಬೇಕು ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳು ಮೊಬೈಲ್‌ಹೆಚ್ಚಾಗಿ ಬಳಸುತ್ತಿರುವ ಕಾರಣ ಅವರಜ್ಞಾಪಕ ಶಕ್ತಿ ಕುಗ್ಗುತ್ತಿದೆ. ಗೂಗಲ್ ಮತ್ತಿತರಸಾಮಾಜಿಕ ಜಾಲಾತಾಣಗಳಿಂದಕೇವಲ ಮಾಹಿತಿ ಸಿಗುತ್ತದೆ ಹೊರತುಜ್ಞಾನಾರ್ಜನೆ ಆಗುವುದಿಲ್ಲ. ಪುಸ್ತಕಗಳನ್ನುಹೆಚ್ಚಾಗಿ ಓದುವುದರಿಂದ ಮಾತ್ರಜ್ಞಾನ ವೃದ್ಧಿಯಾಗುತ್ತದೆ. ಹೀಗಾಗಿವಿದ್ಯಾರ್ಥಿಗಳು ಕನ್ನಡ ಪುಸ್ತಕ ಓದುವಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ|ಪೂರ್ಣಿಮಾ ಜಿ. ಮಾತನಾಡಿ, ಕನ್ನಡಚಿತ್ರರಂಗ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನಾಗಾಭರಣ ಅಮೋಘ ಸಾಧನೆಗೈದಿದ್ದು,ಅವರು ನಿರ್ದೇಶಿಸಿರುವ ಚಲನಚಿತ್ರಗಳುಉತ್ತಮ ಸಂದೇಶ ಸಾರುತ್ತವೆ. ಹೀಗಾಗಿಅವರ ಚಲನಚಿತ್ರಗಳನ್ನು ಪ್ರತಿಯೊಬ್ಬರುವೀಕ್ಷಿಸಬೇಕು ಎಂದು ತಿಳಿಸಿದರು.
ಕಸಾಪ ತಾಲೂಕಾಧ್ಯಕ್ಷ ಎಂ.ಎಸ್.ಮನೋಹರ ಮಾತನಾಡಿದರು. ಪ್ರಾಧಿಕಾರದ ಸದಸ್ಯ ವಿಜಯಕುಮಾರ ಸೋನಾರೆ, ಪತ್ರಕರ್ತ ಅಪ್ಪರಾವ್ ಸೌದಿ, ಶಿಕ್ಷಣ ಸಂಸ್ಥೆ ಸದಸ್ಯರಾದ ರೇವಣಸಿದ್ದಯ್ಯಸ್ವಾಮಿ, ಮಂಜುಳಾ ಮೂಲಗೆ, ರವಿಮೂಲಗೆ, ಪ್ರಾಚಾರ್ಯರಾದ ಚನ್ನವೀರಪಾಟೀಲ, ಸುನೀತಾ ಸ್ವಾಮಿ ಇದ್ದರು.ಲೋಕೇಶ ಪಾಟೀಲ ಪ್ರಾಸ್ತಾವಿಕಮಾತನಾಡಿದರು. ಸಂಸ್ಕೃತಿವಿಜಯಕುಮಾರ ಸ್ವಾಗತಿಸಿ ಸಂಸ್ಕೃತಿ ವಂದಿಸಿದರು.