Advertisement
ಪ್ರತಿಯೊಬ್ಬ ಮಹಾಸಾಧಕನ ಹಿಂದೆ ಆತನ ಜೀವನಾನುಭವ ಇದ್ದೇ ಇರುತ್ತದೆ. ಲೂಯಿ ಬ್ರೆ„ಲ್ ಜೀವನದಲ್ಲೂ ಅದೇ ಅಗಿರುವಂಥದ್ದು. ತುಂಬ ಬಡತನ ದಿಂದಲೇ ಬೆಳೆದ ಕುಟುಂಬ ಲೂಯಿ ಬ್ರೆ„ಲ್ ಅವರದು. ಫ್ರಾನ್ಸ್ ದೇಶದ ಕೂವ್ರೆ ಗ್ರಾಮದಲ್ಲಿ 1809ರ ಜ. 4ರಂದು ಸೈಮನ್ ರೆ ಬ್ರೈಲ್ -ಮೋನಿಕಾ ಬ್ರೈಲ್ ದಂಪತಿಗೆ ಜನಿಸಿದವರೇ ಲೂಯಿ. ಲೂಯಿ ಬ್ರೆ„ಲ್ ಜನಿಸಿದಾಗ ಎಲ್ಲವೂ ಸರಿಯಿತ್ತು. ತಂದೆ ಸೈಮನ್‌ರದು ಕುದುರೆ ಸವಾರರಿಗೆ ಚರ್ಮದ ಜೀನ್ ತಯಾರಿಸುವ ವೃತ್ತಿ. ಲೂಯಿಗೆ ಆಗಿನ್ನು ಮೂರು ವರ್ಷ. ಆಟವಾ ಡುತ್ತ ತಂದೆ ಕೆಲಸ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಬಂದ ಲೂಯಿ ಚೂಪಾದ ದಬ್ಬಣ ತೆಗೆದುಕೊಂಡು ಅಲ್ಲಿ ಬಿದ್ದಿದ್ದ ಚರ್ಮಕ್ಕೆ ಚುಚ್ಚಲಾರಂಭಿಸಿದ. ಕ್ಷಣಮಾತ್ರದಲ್ಲಿ ಕೈಯಲ್ಲಿದ್ದ ದಬ್ಬಣ ಅವನ ಎಡಕಣ್ಣಿಗೆ ಚುಚ್ಚಿತು. ಕಣ್ಣಿನಿಂದ ರಕ್ತ ಸುರಿಯಲಾರಂಭಿಸಿತು. ಆಗಿನ್ನೂ ಔಷಧಗಳು ಆವಿಷ್ಕಾರಗೊಂಡಿರಲಿಲ್ಲ. ಕೆಲವು ಗಿಡ ಮೂಲಿಕೆಗಳಿಂದ ಕಣ್ಣಿಗೆ ಚಿಕಿತ್ಸೆ ನೀಡಲಾಯಿತು. ದಿನ ಕಳೆದಂತೆ ಕಣ್ಣು ಕೆಂಪಾಗಿ ಊದಿಕೊಳ್ಳಲು ಫ್ರಾರಂಭವಾಯಿತು. ಕೀವು ಉಂಟಾಗಿ ಸೋಂಕಾಗಿ ಬಲಗಣ್ಣಿಗೂ ಘಾಸಿಯುಂಟು ಮಾಡಿತು. ಪರಿಣಾಮ ಎಲ್ಲವೂ ಮಂಜಿನಂತೆ ಕಾಣತೊಡಗಿದವು. ದೃಷ್ಟಿ ದುರ್ಬಲವಾಗಿ ತನ್ನ ಐದನೇ ವಯಸ್ಸಿನಲ್ಲಿ ಲೂಯಿ ಶಾಶ್ವತವಾಗಿ ಕುರುಡನಾದ. ಇದು ಅವನ ಜೀವನವನ್ನೇ ಬದಲಾಯಿಸಿತು.
Related Articles
Advertisement
ಶತಮಾನದ ಅನಂತರ ಮರುಸಂಸ್ಕಾರ!: ಲೂಯಿ 1856ರಲ್ಲಿ ಕ್ಷಯರೋಗಕ್ಕೆ ತುತ್ತಾಗಿ ಜ. 6ರಂದು ಇಹಲೋಕ ತ್ಯಜಿಸಿದರು. ಲೂಯಿ ನಿಧನದ ಅನಂತರ ಬ್ರೈಲ್ ಲಿಪಿ ಹೆಚ್ಚು ಪ್ರಸಿದ್ದಿಗೊಂಡು, ವಿಶ್ವವ್ಯಾಪಿಯಾಯಿತು. ಹಲವೆಡೆ ಲೂಯಿ ಹೆಸರಿನಲ್ಲಿ ಅಂಧರ ಶಾಲೆಗಳು ತೆರೆದುಕೊಂಡವು. ಹುಟ್ಟೂರಿನಲ್ಲಿ ಅಮೃತ ಶಿಲೆಯ ಸ್ಮಾರಕ ನಿರ್ಮಿಸಲಾಯಿತು. ಲೂಯಿಯ ಮಹತ್ವದ ಸಾಧನೆಯನ್ನು ಮನಗಂಡ ಫ್ರಾನ್ಸ್ ಸರಕಾರ 1952ರಲ್ಲಿ ಅಂದರೆ ಲೂಯಿ ನಿಧನದ 100 ವರ್ಷಗಳ ಆನಂತರ ಕೂವ್ರೆ ಶ್ಮಶಾನದಲ್ಲಿದ್ದ ಲೂಯಿಯ ಶವ ಹೊರತೆಗೆದು, ಸಕಲ ಸರಕಾರಿ ಮರ್ಯಾದೆ, ಗೌರವಗಳೊಂದಿಗೆ ಪ್ಯಾರಿಸ್‌ನ ಪಾಂಥೆಯೋ ಶ್ಮಶಾನದಲ್ಲಿ ಮರುಸಂಸ್ಕಾರ ಮಾಡಲಾಯಿತು.
ಭಾರತಕ್ಕೆ ಬ್ರೈಲ್ ಲಿಪಿ: ಬ್ರೈಲ್ ಲಿಪಿ 1951 ರಲ್ಲಿ ಭಾರತ ಪ್ರವೇಶಿಸಿತು. ಕೆಲವು ಸಾಂಕೇತಿಕ ಬದಲಾವಣೆಗಳೊಂದಿಗೆ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಬ್ರೈಲ್ ಲಿಪಿ ಅಳವಡಿ ಸಲಾಯಿತು. ಕಾಲ ಕಳೆದಂತೆ ಬ್ರೈಲ್ ಲಿಪಿಯನ್ನು ಗಣಕಯಂತ್ರಕ್ಕೂ ಅಳವಡಿಸಿ, ಬ್ರೈಲ್ ಮುದ್ರಣ ಯಂತ್ರಗಳಿಂದ ಅನೇಕ ಪುಸ್ತಕಗಳನ್ನು ಮುದ್ರಿಸಲಾಯಿತು. ಪ್ರಸ್ತುತ ಅಂಧರಿಗೊಸ್ಕರ ಪುಸ್ತಕ, ಶೈಕ್ಷಣಿಕ ಸಾಮಗ್ರಿ, ಬ್ಲೆ„ಂಡ್ ಸ್ಟಿಕ್ ಇತ್ಯಾದಿ ವಸ್ತುಗಳು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಗರದಲ್ಲಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವಿಶ್ಯುವಲ್ ಹ್ಯಾಂಡಿಕ್ಯಾಪ್ (ಎನ್‌ಐವಿಎಚ್) ಮುಖಾಂತರ ದೇಶಾದ್ಯಂತ ಪೂರೈಸಲಾಗುತ್ತಿದೆ.
ಅಂಧರ ಸಾಧನೆ: ದೃಷ್ಟಿ ವಿಶೇಷ ಚೇತನರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೆ ಸಹಜ ರೀತಿಯಿಂದ ಬದುಕು ನಡೆಸುತ್ತಿದ್ದಾರೆ. ಅಂಗವೈಕಲ್ಯವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅಮೆರಿಕದ ಲೇಖಕಿ ಹೆಲನ್‌ಕೆಲ್ಲರ್, ಕವಿ ಜಾನ್‌ಮಿಲ್ಟನ್, ಕಾರ್ಟೂನಿಸ್ಟ್ ಜೇಮ್ಸ್ ಟರ್ಬರ್, ಹುಟ್ಟು ಅಂಧರಾಗಿ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು.. ಈ ಎಲ್ಲರೂ ತಮ್ಮ ದೈಹಿಕ ವೈಕಲ್ಯವನ್ನು ಮರೆತು ಮಾಡಿದ ಸಾಧನೆ ಮತ್ತು ಪಡೆದ ಯಶಸ್ಸು ಅಪಾರ. ಸಿಡಿಯಲ್ಲಿ ಕೇಳಿಸಿಕೊಂಡು ಕಲಿಯುವುದಕ್ಕೂ ಬ್ರೈಲ್ ಲಿಪಿ ಮೂಲಕ ಕಲಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.