Advertisement
ಲಾಸ್ಟ್ ಬೆಂಚಲ್ಲಿರುವವರೆಲ್ಲ ಕಿರಿಕ್ ಪಾರ್ಟಿಗಳೆಂದು ನಾನು ಹೇಳ್ತಾ ಇಲ್ಲ , ಕಿರಿಕ್ ಮಾಡೋರಿಗೆ ಫರ್ಸ್ಡ್ ಬೆಂಚು, ಲಾಸ್ಟ್ ಬೆಂಚು ಎಲ್ಲಾ ಒಂದೇ. ಆದರೆ ಲಾಸ್ಟ್ ಬೆಂಚಲ್ಲಿ ಕೂತವರು ಮುಗ್ಧರಾಗಿದ್ದರೂ ಅವರಿಗೆ ಒಮ್ಮೆಲೇ ಕಿರಿಕತ್ವ ಪ್ರಾಪ್ತಿಯಾಗುತ್ತೆ. ತರ್ಲೆ ಅನ್ನೋ ಪದಕ್ಕೆ ಸಮಾನಾರ್ಥಕ ಪದವಾಗಿರೋ ಎಷ್ಟೋ ಜನರು ಕಾಲೇಜಿನಲ್ಲಿ ಕಾಣಸಿಗುತ್ತಾರೆ.
ನಾವೇ ಹೀಗಾದರೆ ಹುಟ್ಟಾ ತರ್ಲೆಗಳು ಹುಡುಗರು, ನಮಗಿಂತ ಒಂದು ಕೈ ಮೇಲೆ. ಒಂದು ದಿನ ಬ್ರೇಕ್ ಟೈಮಲ್ಲಿ ಲಾಸ್ಟ್ ಬೆಂಚು, ಅದರ ಮುಂದಿನ ಬೆಂಚ್‌ನಲ್ಲಿ ತಲಾ ಇಬ್ಬರು ಹುಡುಗರು ಕೂತರು, ಮುಂದೆ ಕೂತವರು ಎರಡು ಬೇರೆ ಬೇರೆ ಬೈಕು ಚಲಾಯಿಸುವಂತೆ ನಟಿಸುತ್ತಿದ್ದರು. ಹಿಂದಿನವರು ಹಾಗೆ ಸುಮ್ಮನೆ ಬೈಕ್ ಹಿಂದೆ ಕೂತಂತೆ ನಟಿಸುತ್ತಿದ್ದರು. ಅವರನ್ನು ನೋಡಿದಾಗ ನನಗವರ ಕಾನ್ಸೆಪ್ಟ್ ಅರ್ಥ ಆಯಿತು. ಆದರೆ ಮುಂದೆ ಕೂತವರು ಒಂದು ಕೈಯ್ಯಲ್ಲಿ ಬೈಕ್ ಚಲಾಯಿಸಿ ಇನ್ನೊಂದು ಕೈಯ್ಯಲ್ಲಿ ಟೈ ಎತ್ತಿ ಅದನ್ನು ಗಾಳಿಯಲ್ಲಿ ತೇಲುತ್ತಿರುವಂತೆ ಮಾಡುತ್ತಿದ್ದರು. ಕುತೂಹಲದಿಂದ ಅದೇನೆಂದು ಕೇಳಿದೆ ಅದಕೊಬ್ಬ , “ನಾವು ಭಯಂಕರ ಸ್ಪೀಡಲ್ಲಿ ಗಾಡಿ ಓಡಿಸುತ್ತಿದ್ದೇವೆ. ಹಾಗಾಗಿ ಗಾಳಿಯ ರಭಸಕ್ಕೆ ಟೈ ತೇಲಾಡುತ್ತಿದೆ’ ಎಂದ. ಇನ್ನೊಬ್ಬ “ಸೈಡಿಗೆ ಹೋಗು, ಟಯರ್ ಕೆಳಗೆ ಸಿಲುಕಿ ಸಾಯಬೇಡ’ ಎಂದ. ನನಗಾಗ “ಹೀಗೂ ಉಂಟೆ’ ಎಂದೆನಿಸಿತು. ನಾನು ಸೇರಿದ ಕಾಲೇಜಿಗೆನೇ ಒಬ್ಬ ಹಳೆಯ ತರ್ಲೆ ಕ್ಲಾಸ್‌ಮೇಟ್ ಸೇರಿಕೊಂಡ. ಅವನಿಗೆ ದೊಡ್ಡ ಕಿರಿಕ್ ಗ್ಯಾಂಗ್ ಸಿಕು¤. ಕೆಲವರಂತೂ ಕಿರಿಕ್ ಹಾಗೂ ಇನ್ನಿತರ ತರ್ಲೆ ತಮಾಷೆಗಳು ಎಂಬ ಕೋರ್ಸಿನಲ್ಲಿ ಪಿಎಚ್. ಡಿ ಮಾಡಿದ್ದರು. ನಾವು ಪ್ರಥಮ ಪಿಯುಸಿಯಲ್ಲಿದ್ದಾಗ ಕ್ರಿಕೆಟ್ ಜ್ವರ ಇಳಿದು ಪಿಕೆಎಲ್ ಜ್ವರ ವ್ಯಾಪಕವಾಗಿ ಹರಡಿತ್ತು. ಅದರಲ್ಲಿ ನಮ್ಮ ಕ್ಲಾಸಿನ ತರ್ಲೆ ಗ್ಯಾಂಗಿನ ಗಮನ ಸೆಳೆದದ್ದು “ಯಾದವ್ ಜಿ’ ಎಂಬ ಟಿ.ವಿ. ಪರದೆ ಮೇಲೆ ಕಾಣಿಸದ ಥರ್ಡ್ ಅಂಪೈರ್. ಆವಾಗಿನಿಂದ ಶುರು ಕ್ಲಾಸ್‌ರೂಮಿನ ಬಾಗಿಲು ಗಾಳಿಯಿಂದಾಗಿ ಸ್ವಲ್ಪ ಸರಿದರೆ ಸಾಕು, “ಯಾದವ್ ಜಿ’ ಎನ್ನುತ್ತಿದ್ದರು, ಮಾತ್ರವಲ್ಲ ಇನ್ನಾ$Âವುದೇ ಅಗೋಚರ (ನಿಷ್ಪ್ರಯೋಜಕ) ವಿಷಯ ಸಂಭವಿಸಿದರೆ ಅದು “ಯಾದವ್ ಜಿ’ ಮಾಡಿದ್ದು ಎನ್ನುತ್ತಿದ್ದರು. ಒಂದೊಮ್ಮೆ ನನ್ನನ್ನು ಕರೆದು “ಅಗೋ ಅಲ್ಲಿ ಯಾದವ್ ಜಿ’ ಎಂದಾಗ ನಾನೂ ಸುಮ್ಮನೆ “ಹಾಂ , ಹೇಗಿದ್ದೀರಾ?’ ಎಂದು ಕೇಳಿದ್ದೆ.
Related Articles
Advertisement
ಲೆಕ್ಚರರ್ ಯಾರನ್ನಾದರೂ ಪ್ರಶ್ನಿಸಿದಾಗ, ಯಾರಾದರೂ ಏನಾದರೂ ಹೇಳಿದರೆ ಅಥವಾ ಏನೂ ಹೇಳದೆ ತಮ್ಮಷ್ಟಕೆ ಕೂತರೆ, ಎÇÉಾ ಹುಡುಗರು ಒಬ್ಬನ ಹೆಸರು ಹೇಳುತ್ತಿದ್ದರು, ಮೊದಮೊದಲು ಅವನು ಪಾಪ ಎಂದುಕೊಳ್ಳುತ್ತಿದ್ದೆವು, ಆಮೇಲೆ ಗೊತ್ತಾಯಿತು ಆ ಕಿರಿಕ್ ಪಾರ್ಟಿಗಳಿಗೆ ಆತನೇ “ಬಾಸ್’ ಎಂದು. ದ್ವಿತೀಯ ವರ್ಷದ ಶುರುವಿಗೆ ನಾನು ಲಾಸ್ಟ್ ಬೆಂಚಲ್ಲಿ ಕೂತಿದ್ದೆ, ಆದರೆ ನಮ್ಮ ಕ್ಲಾಸ್ ಲೆಕ್ಚರರ್ ರೊಟೇಷನ್ ಮಾಡಿ ಎಂದಿದ್ದರು. ಇದಕ್ಕೆ ಕಾರಣ ನಾವಲ್ಲ, ನಮಗಿಂತಲೂ ಹತ್ತು ಪಟ್ಟು ಜಾಸ್ತಿ ತರೆಲಗಳೆಂದು ಖ್ಯಾತರಾಗಿದ್ದ ಹುಡುಗರು.
ಮೊನ್ನೆ ನಮ್ಮ ಕೆಮಿಸ್ಟ್ರಿ ಲೆಕ್ಚರರ್ ಬಲಕೈ ನೋವೆಂದು ಎಡಕೈಯಲ್ಲಿ ಬರೆಯಲು ಪ್ರಯತ್ನಿಸುತ್ತಿದ್ದರು, ಇದನ್ನು ಮನಗೊಂಡ ಲಾಸ್ಟ್ ಬೆಂಚಿನ “ಕಿರಿಕ್ ಪಾರ್ಟಿ’ಗಳು ಚಪ್ಪಾಳೆ ತಟ್ಟಿದರು, ಲೆಕ್ಚರರ್ ಹಿಂದೆ ತಿರುಗಿದಾಗ ನಾವೆಲ್ಲ ಲಾಸ್ಟ್ ಬೆಂಚಿನತ್ತ ಕಣ್ಣು ಹಾಯಿಸಿದೆವು. ಆಗ ಅವರು ಹಿಂದೆ ಯಾರಿಲ್ಲ ಎಂದು ತಿಳಿದೂ ಕೂಡ “ಯಾರು ಮಾರ್ರೆà ಕ್ಲಾಪ್ಸ್ ಹೊಡಿªದ್ದು ‘ಎಂದು ಕೇಳುತ್ತಿದ್ದರು. ಅದ್ಯಾರ ಆತ್ಮದ ಜೊತೆ ಮಾತಾಡುತ್ತಿದ್ದರೋ ಏನೋ, ನನಗಣಿಸುವ ಪ್ರಕಾರ, “ಯಾದವ್ ಜಿ’ ಇದ್ದಿರಬೇಕು.
ಫ್ರೀ ಟೈಮಲ್ಲಿ ನಮ್ಮ ಕ್ಲಾಸಿಗೆ ಅತಿಥಿಗಳು ಬರುತ್ತಿದ್ದರು. ಅತಿಥಿಗಳೆಂದರೆ ಬೇರೆ ಕ್ಲಾಸಿನವರು. ಅವರು ಬರುವುದು ಹಿಂದಿನ ಬೆಂಚುಗಳ ಹಿಂದೆ ಇರುವ ಸ್ಥಳದಲ್ಲಿ ಕಬಡ್ಡಿ ಆಡಲು.ಅವರಾಟಕ್ಕೆ ನಾವೇ ವೀಕ್ಷಕರು. ಹೀಗೆ ಆಡುತ್ತಿದ್ದಾಗ ಅಚಾನಕ್ಕಾಗಿ ಹಿಂದಿ ಲೆಕ್ಚರರ್ ಎಂಟ್ರಿ ಕೊಟ್ಟರು. ಅವರನ್ನು ಗಮನಿಸಿದವರು ಹೊರನಡೆದರು, ಆದರೆ ಪಾಪ ರೈಡ್ ಮಾಡಲು ಹೋದವನಿಗೆ ಅದರ ಪರಿವೇ ಇಲ್ಲ. ಉಳಿದವರು ಹೊರ ನಡೆದಾಗ ಆತ ಅವರೆಲ್ಲ ತನಗೆ ಹೆದರಿದ್ದಾರೆ ಎಂದುಕೊಂಡಿರಬಹುದು. ಆಮೇಲೆ ಲೆಕ್ಚರರನ್ನು ಕಂಡಾಗ ಅಲ್ಲೇ ಇದ್ದ ಬೆಂಚಿನ ಮೇಲೆ ಕುಳಿತು ಅಳಬೇಕೋ, ನಗಬೇಕೋ, ಎಂಬಂತೆ ನೋಡಿದಾಗ ಆತನ ಸ್ಥಿತಿ ಕಂಡು ಉಪನ್ಯಾಸಕರು ಕೂಡ ನಕ್ಕು ಹೊರಟು ಹೋದರು.
ಇನ್ನು ಈಗೀಗ ಒಂದು ಹೊಸ ಗೇಮ್ ಶುರುವಿಟ್ಟಿದ್ದಾರೆ ನಮ್ಮ ಕ್ಲಾಸ್ ಕಿರಿಕ್ ಪಾರ್ಟಿಗಳು, ಯಾವ ಹೆಸರು ಹೇಳಬೇಕಿದ್ದರೂ ಆ ಹೆಸರ ಮುಂದೆ ಒನ್ ಎಂದು ಸೇರಿಸಿ ಹೇಳಬೇಕು, ಇಲ್ಲದಿದ್ದರೆ ಒದೆ ಗ್ಯಾರೆಂಟಿ. ಅವರ ಪ್ಲಾನ್ ತುಂಬಾನೇ ಸಿಂಪಲ…- ಹೇಗಾದ್ರು , ಯಾರಿಗಾದ್ರೂ ಸುಮ್ಮನೆ ಹೊಡೀಬೇಕು ಅಷ್ಟೇ. ಫ್ರೀ ಇದ್ದಾಗ ಅವರೆಲ್ಲ ಹಳೆ ಸಿನಿಮಾ ಹಾಡುಗಳನ್ನ , ಭಕ್ತಿಗೀತೆಗಳನ್ನ ಹಾಡುತ್ತಿರುತ್ತಾರೆ, ಡೆಸ್ಕ್ ಅವರಿಗೆ ತಬಲಾ ಇದ್ದಂತೆ. ಒಂದು ದಿನ ಒಬ್ಬ ಇನ್ನೇನು ಹಾಡಿನ ಎರಡನೇ ಸಾಲು ಹಾಡಬೇಕೆನ್ನುವಷ್ಟರಲ್ಲಿ ಲೆಕ್ಚರರ್ ಬಂದರು, ಪಾಪ ಆತ ಅರ್ಧಕ್ಕೇ ನಿಲ್ಲಿಸಿಬಿಟ್ಟ.
ಅದೇನೋ ತುಂಬಾ ದಿವಸಗಳ ನಂತರ ಅವರೆಲ್ಲ ಒಂದು ಹೊಸ ಕನ್ನಡ ಸಿನೆಮಾದ ಹಾಡನ್ನು ಗುನುಗುತ್ತಿದ್ದರು, ಆ ಹಾಡು ಕಿರಿಕ್ ಪಾರ್ಟಿ ಸಿನಿಮಾದ “ತಿಬೋìಕಿ’ ಹಾಡು, ಆ ಹಾಡು ಎಲ್ಲಾ ಕಿರಿಕ್ ಪಾರ್ಟಿಗಳನ್ನ ತಲೆಯಲ್ಲಿಟ್ಟುಕೊಂಡು ಬರೆದ ಹಾಡೆಂಬುವುದರಲ್ಲಿ ಸಂಶಯವಿಲ್ಲ.
ಅದೆಷ್ಟು “ಕಿರಿಕ್ ಪಾರ್ಟಿ’ಗಳು ಆ “ಕಿರಿಕ್ ಪಾರ್ಟಿ’ಯನ್ನು ನೋಡಲು ಕಾಯುತ್ತಿದ್ದಾರೋ ಏನೋ. “
– ರಕ್ಷಿತ ವರ್ಕಾಡಿ ಡಾ. ಎನ್‌ಯಸ್‌ಎ ಎಂ ಪದವಿಪೂರ್ವ ಕಾಲೇಜು, ನಂತೂರು