Advertisement

418 ಕೋಟಿ ರೂ. ಅತಿವೃಷ್ಟಿ ಹಾನಿ: ಈಶ್ವರಪ್ಪ

06:33 PM Aug 07, 2021 | Shreeram Nayak |

ಶಿವಮೊಗ್ಗ/ ತೀರ್ಥಹಳ್ಳಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಪ್ರಮಾಣ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಾಥಮಿಕವಾಗಿ 418 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ ಎಂದು ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ಅತಿವೃಷ್ಟಿಯಿಂದ ಹಾನಿಗೀಡಾಗಿರುವ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿ, ಕುಡುಮಲ್ಲಿಗೆ ಗ್ರಾಪಂನ ಪ್ರದೇಶಗಳಿಗೆ ನೂತನ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೃಷಿ ಭೂಮಿ, ಮನೆಗಳು, ಪ್ರಾಣ ಹಾನಿ, ಜಾನುವಾರು ಹಾನಿ ಸೇರಿದಂತೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ
ಒದಗಿಸಲಾಗುವುದು. ಸರಕಾರದ ಮಾರ್ಗಸೂಚಿ ಹೊರತುಪಡಿಸಿ ಹೆಚ್ಚುವರಿ ಪರಿಹಾರ ಒದಗಿಸುವ ಕುರಿತು ಪ್ರಯತ್ನಿಸಲಾಗುವುದು
ಎಂದರು.

ಅತಿವೃಷ್ಟಿ ನಷ್ಟ ಪರಿಹಾರ ಸಮೀಕ್ಷೆ ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವರದಿ ಕೈ ಸೇರಿದ ಬಳಿಕ ಪರಿಹಾರ ಒದಗಿಸಲು ಕ್ರಮ
ಕೈಗೊಳ್ಳಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಇದನ್ನೂ ಓದಿ:ಈ ಒಂದು ಚಹಾ ನಿಮ್ಮ ಮನಸಿನ ಒತ್ತಡವನ್ನು ದೂರ ಮಾಡಬಲ್ಲದು!

Advertisement

ಒಂದೇ ದಿನ ಸುರಿದ ಭಾರೀ ಮಳೆಗೆ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದಿದೆ. ಹಲವು ಕೆರೆಗಳ ಕೋಡಿ ಹರಿದು ಕೃಷಿ ಜಮೀನುಗಳಿಗೆ ಹಾನಿ ಸಂಭವಿಸಿದೆ. ಗ್ರಾಮೀಣ ರಸ್ತೆಗಳು ಹಾನಿಗೀಡಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಅಂದಾಜು ನಡೆಸುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಸಚಿವರು ಗುಡ್ಡ ಕುಸಿತದಿಂದ ಹಾನಿಗೀಡಾದ ಕೂಡಿಗೆ ಮಜಿರೆಯ ಹೆಗ್ಗಾರು ಬೆಟ್ಟ, ಭಾರತಿಪುರ ಬಳಿಯ ಹೆದ್ದಾರಿ ಕುಸಿತ, ಎಡೆಹಳ್ಳಿ ಕೆರೆ ಬಳಿಯ
ಗುಡ್ಡ ಕುಸಿತ ಸ್ಥಳ, ಯೋಗಿ ನರಸೀಪುರ ಬಳಿಯ ಹುಲಿಬೆಟ್ಟ ಗುಡ್ಡ ಕುಸಿತ ಹಾಗೂ ಗೇರುವಳ್ಳಿ ಬಳಿ ರಸ್ತೆ ಕುಸಿದ ಸ್ಥಳ ಪರಿಶೀಲನೆ ನಡೆಸಿದರು.
ಜಿಲ್ಲಾ ಧಿಕಾರಿ ಕೆಬಿ.ಶಿವಕುಮಾರ್‌, ಜಿಪಂ ಸಿಇಒ ವೈಶಾಲಿ, ಎಸ್ಪಿ ಲಕ್ಷ್ಮೀಪ್ರಸಾದ್‌ ಮತ್ತಿತರರು ಇದ್ದರು.

ಕಾಳಜಿ ಕೇಂದ್ರಗಳಲ್ಲಿ 640 ಜನಕ್ಕೆ ಆಶ್ರಯ
ಸಣ್ಣ ರೈತರ ಕೃಷಿ ಭೂಮಿ-4609 ಹೆಕ್ಟೇರ್‌, ತೋಟಗಾರಿಕೆ ಭೂಮಿ- 1132 ಹೆಕ್ಟೇರ್‌, ಇತರೆ ರೈತರ ಕೃಷಿ ಭೂಮಿ -240 ಹೆಕ್ಟೇರ್‌, ಮೃತಪಟ್ಟ ಜಾನುವಾರುಗಳು 27, ಸಂಪೂರ್ಣ ಹಾನಿಯಾದ ಮನೆಗಳು (ಕಚ್ಚಾ ಮತ್ತು ಪಕ್ಕಾ ಸೇರಿ) 126, ಹೆಚ್ಚಿನ ಹಾನಿಯಾಗಿರುವ ಮನೆಗಳು (ಕಚ್ಚಾ ಮತ್ತು ಪಕ್ಕಾ ಸೇರಿ) 478, ಭಾಗಶಃ ಹಾನಿಯಾಗಿರುವ ಮನೆಗಳು (ಕಚ್ಚಾ ಮತ್ತು ಪಕ್ಕಾ ಸೇರಿ) 540, ರಾಜ್ಯ ಹೆದ್ದಾರಿ 56 ಕಿ.ಮೀ., ಜಿಲ್ಲಾ ಮುಖ್ಯ ರಸ್ತೆ 138 ಕಿ.ಮೀ., ಗ್ರಾಮೀಣ ರಸ್ತೆ 1243 ಕಿ.ಮೀ., ನಗರ ರಸ್ತೆಗಳು 168 ಕಿ.ಮೀ., ಸೇತುವೆಗಳು 196, ವಿದ್ಯುತ್‌ ಕಂಬಗಳು 2033,
ಅಂಗನವಾಡಿ ಕಟ್ಟಡಗಳು 309, ಪ್ರಾಥಮಿಕ ಶಾಲೆಗಳು – 1000, ಕೆರೆಗಳು 326, ಮಾನವ ಹಾನಿ 4 ಸಂಭವಿಸಿವೆ. 10 ಕಾಳಜಿ ಕೇಂದ್ರಗಳಲ್ಲಿ 640 ಜನರಿಗೆ ಆಶ್ರಯ ಒದಗಿಸಲಾಗಿತ್ತು ಎಂದು ಈಶ್ವರಪ್ಪ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next