Advertisement

ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ

03:57 PM Mar 07, 2017 | Team Udayavani |

ಚಿಂಚೋಳಿ: ಯಾವುದೇ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಹೊರತು ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಹೆಚ್ಚು ಕ್ರೀಡೆಗಳಲ್ಲಿ ಆಸಕ್ತಿ ತೋರಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ಗುರುತಿಸಿಕೊಳ್ಳಲು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶಜಾಧವ ಹೇಳಿದರು. 

Advertisement

ಪಟ್ಟಣದ ಲಿಂ| ಶ್ರೀ ಚನ್ನಬಸವ ಶಿವಯೋಗಿಗಳ 66ನೇ ಜಾತ್ರಾ ಮಹೋತ್ಸವದ ಅಂಗವಾಗಿ ಚಂದಾಪುರ ಚನ್ನಬಸವೇಶ್ವರ ಪಿಯು ಕಾಲೇಜು ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕು ವಾಲಿಬಾಲ್‌ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಆಟಗಾರರು ದೇಶಿ ಆಟದ ಕಡೆಗೆ ಹೆಚ್ಚಿನ ಗಮನ ಕೊಡಬೇಕು.

ವಾಲಿಬಾಲ್‌, ಕಬಡ್ಡಿ, ಕುಸ್ತಿ ಮತ್ತುಖೋಖೋ ಆಟಗಳಲ್ಲಿ ಆಸಕ್ತಿ ಹೊಂದಬೇಕು. ಈಗ ಕೇವಲ ಕ್ರಿಕೆಟ್‌ ಆಟದತ್ತ ಹೆಚ್ಚು ಒಲುವು ತೋರಿಸುತ್ತಿರುವುದರಿಂದ ನಮ್ಮ ದೇಶದ ಕ್ರೀಡೆಗಳು ಬೆಳಕಿಗೆ ಬರುತ್ತಿಲ್ಲ ಎಂದು ಹೇಳಿದರು. 

ಸಂತೋಷ  ಸೀಳಿನ್‌, ಎಪಿಎಂಸಿ ನಿರ್ದೇಶಕ ಅಜೀತ ಪಾಟೀಲ, ಕಾಡಾ ಸದಸ್ಯ ಕೆ.ಎಂ. ಬಾರಿ, ಪುರಸಭೆ ಸದಸ್ಯರಾದ ರಾಮಶೆಟ್ಟಿ ಪವಾರ, ರಾಜಕುಮಾರ ಪವಾರ, ಶಾಮರಾವ ಕೊರವಿ, ಶಿವನಾಗಯ್ಯ ಸ್ವಾಮಿ, ಶಬ್ಬೀರಮಿಯ್ನಾ, ಚನ್ನಬಸಪ್ಪ ನಾವದಗಿ, ಮಲ್ಲಿಕಾರ್ಜುನ ಪಾಲಾಮೂರ, ಚನ್ನವೀರ ಕಲ್ಲೂರ, ಬಸವರಾಜ ಐನೋಳಿ, ಸುಭಾಶ ಸೀಳಿನ್‌ ಇದ್ದರು.

ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಹೈದ್ರಾಬಾದ ಅಶೋಕ ವಾಲಿಬಾಲ್‌ ತಂಡ (ಪ್ರಥಮ 21 ಸಾವಿರ ರೂ.), ರಾಜು ವಾಲಿಬಾಲ್‌ ತಂಡ ಹೈದ್ರಾಬಾದ(ದ್ವಿತೀಯ 15 ಸಾವಿರ ರೂ.), ಕಲಬುರಗಿ ಮಹಾಂತೇಶ ವಾಲಿಬಾಲ್‌ ತಂಡಗಳಿಗೆ (ತೃತೀಯ 10ಸಾವಿರ ರೂ.)ಬಹುಮಾನ ಮತ್ತು ಟ್ರೋμ ನೀಡಲಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next