Advertisement

ಲೋಭ ಮತ್ತು ಲಾಭ

04:01 PM Apr 20, 2020 | mahesh |

ನಾವು ನಮ್ಮ ಸಾಮರ್ಥ್ಯವನ್ನು (ಸೆಲ್ಫ್ ವರ್ಥ್), ಯಶಸ್ಸನ್ನು, ನಮ್ಮ ಆರ್ಥಿಕ ಸ್ಥಿತಿಯನ್ನು ಆಧರಿಸಿ ಅಳೆಯಬಾರದು ಎನ್ನುತ್ತಿದೆ ಸಂಶೋಧನೆ. ಅಂದರೆ, ಸಾಮರ್ಥ್ಯಕ್ಕೂ, ಆರ್ಥಿಕ ಸ್ಥಿತಿಗೂ ಯಾವತ್ತೂ ಥಳುಕು ಹಾಕಬಾರದು ಎನ್ನುವುದು ಇದರ ತಾತ್ಪರ್ಯ. ಏಕೆಂದರೆ, ಯಾವಾಗ ನಾವು ನಮ್ಮ ಯಶಸ್ಸನ್ನು, ನಮ್ಮ ಆರ್ಥಿಕ ಪ್ರಾಬಲ್ಯವನ್ನು ಆಧರಿಸಿ ಲೆಕ್ಕ ಹಾಕುತ್ತೇವೆಯೋ ಆಗ, ನಾವು ಜೀವನದಲ್ಲಿ ಒಂಟಿಯಾಗುತ್ತೇವಂತೆ. ಒಂಟಿ ಆದ ನಂತರದಲ್ಲೇ ನಮಗೆ ಒತ್ತಡವೂ ಜೊತೆಯಾಗುತ್ತದಂತೆ. ಇದು ನಮ್ಮ ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರ್ಥಿಕ ಸ್ವಾತಂತ್ರ್ಯ ಹೊಂದುವ ರೇಸಿನಲ್ಲಿ, ನಾವು ಹಲವು ಕಾಂಪ್ರೋಮೈಸ್‌ ಮಾಡಿಕೊಳ್ಳಬೇಕಾಗುತ್ತದೆ. ಬೆಲೆ ತೆರಬೇಕಾಗುತ್ತದೆ. ಬದುಕಿನಲ್ಲಿ ಯಾವುದೂ ಸುಮ್ಮನೆಯೇ ಬರುವುದಿಲ್ಲ. ಈ ಕಾಂಪ್ರಮೈಸ್‌ಗಳಲ್ಲಿ ಮುಖ್ಯವಾದುದೆಂದರೆ, ಮನೆಮಂದಿಯೊಂದಿಗೆ, ಸ್ನೇಹಿತರೊಂದಿಗೆ ಕಳೆಯುವ ಸಮಯದಿಂದ ವಂಚಿತರಾಗುವುದು. ಇದರಿಂದಲೇ ಏಕಾಂಗಿತನ ಆವರಿಸಿಕೊಳ್ಳುತ್ತದೆ.

Advertisement

ಯಾವನೇ ಒಬ್ಬ ಮನುಷ್ಯನ ಯಶಸ್ಸಿನ ಹಿಂದೆ ಆತನ ಸಾಮಾಜಿಕ ಜೀವನ ಇರಬೇಕು, ಆಗಲೇ ಆ ಮನುಷ್ಯನ ಜೀವನ ಪರಿಪೂರ್ಣ ಎನ್ನಿಸಿಕೊಳ್ಳುತ್ತದೆ. ಸಾಮಾಜಿಕ ಜೀವನ ಮತ್ತು ವೃತ್ತಿಬದುಕಿಗೂ ಸಂಬಂಧವೇ ಇಲ್ಲ ಎಂದು ಕೆಲವರು ತಿಳಿಯುತ್ತಾರೆ. ಹಣ ಇವತ್ತಿಲ್ಲದಿದ್ದರೆ ನಾಳೆ ಇರುತ್ತೆ. ಅದೇ ರೀತಿ, ಹಣ ಇವತ್ತಿದ್ದರೆ ನಾಳೆ ಇರೋದಿಲ್ಲ ಎಂಬುದೂ ಸತ್ಯವೇ. ಒಂದನ್ನುಒಪ್ಪಿಕೊಂಡು ಇನ್ನೊಂದನ್ನು ತಿರಸ್ಕರಿಸುವುದು ಸಾಧ್ಯವಿಲ್ಲ. ಎರಡೂ ಸತ್ಯವೇ. ಹೀಗಾಗಿ, ಹಣದ ಕುರಿತು ಕಾಳಜಿ ಇರಲಿ, ಲೋಭ ಬೇಡ. ಲೋಭದಿಂದ ಲಾಭವಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next