Advertisement

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

09:28 PM Aug 04, 2020 | Hari Prasad |

ಬಂಟ್ವಾಳ: ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಹೆದ್ದಾರಿಯಲ್ಲಿ ಅಡ್ಡಲಾಗಿ ಬಿದ್ದಿರುವ ಘಟನೆ ಮೆಲ್ಕಾರ್ ಸಮೀಪದ ಬೋಳಂಗಡಿಯಲ್ಲಿ ನಡೆದಿದೆ.

Advertisement

ಕಿರಿದಾದ ಹೆದ್ದಾರಿಯ ನಡುವಲ್ಲೇ ಈ ಲಾರಿ ಉರುಳಿ ಬೀಳುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು ಇದರಿಂದಾಗಿ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.

ಮರದ ದಿಮ್ಮಿಗಳನ್ನು ಹೇರಿಕೊಂಡು ಬಿ.ಸಿ.ರೋಡ್ ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದ ಲಾರಿ ಮೆಲ್ಕಾರ್ ಸಮೀಪದ ಬೋಳಂಗಡಿ ತಿರುವಿಗೆ ಬರುತ್ತಿದ್ದಂತೆ ಮಗುಚಿ ರಸ್ತೆ ಮಧ್ಯದಲ್ಲೇ ಉರುಳಿ ಬಿದ್ದಿದೆ.

ಲಾರಿಯಲ್ಲಿದ್ದ ಮರದ ದಿಮ್ಮಿಗಳು ಒಂದು ಬದಿಗೆ ವಾಲುತ್ತಿದ್ದ ಸ್ಥಿತಿಯಲ್ಲಿದ್ದಾಗ ಅದನ್ನು ಸುಸ್ಥಿತಿಗೆ ತರಲು ಸ್ಥಳಕ್ಕೆ ಕ್ರೇನ್ ತರಿಸಲಾಗಿತ್ತು.

Advertisement

ಅದರೆ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಲು ಮುಂದಾಗುತ್ತಿದ್ದಂತೆ ಲಾರಿ ಮಗುಚಿ ರಸ್ತೆಗೆ ಅಡ್ಡಲಾಗಿ ಬೀಳುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆಯಿಂದ ಕೆಲ ಹೊತ್ತು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ.

ಹೆದ್ದಾರಿಯಲ್ಲಿ ಈ ಘಟನೆ ನಡೆದಿರುವುದರಿಂದ ಸಂಚಾರ ಸುಗಮಗೊಳಿಸಲು ಮೆಲ್ಕಾರ್ ಟ್ರಾಫಿಕ್ ಪೋಲೀಸರು ಮಳೆಯನ್ನು ಲೆಕ್ಕಿಸದೆ ಹರಸಾಹಸ ಪಟ್ಟರು.

ಮೆಲ್ಕಾರ್ ಟ್ರಾಫಿಕ್ ಎಸ್.ಐ.ಗಳಾದ ರಾಜೇಶ್ ಕೆ.ವಿ.ಹಾಗೂ ರಾಮನಾಯ್ಕ್ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next