Advertisement

ಅಂಕೋಲಾ: ಬೈಕ್ ಗೆ ಹಿಂಬದಿಯಿಂದ ಲಾರಿ ಢಿಕ್ಕಿ; ಸವಾರ,ಸಹ ಸವಾರ ಸ್ಥಳದಲ್ಲೇ ಸಾವು  

11:52 AM Jun 01, 2022 | Team Udayavani |

ಅಂಕೋಲಾ: ಬೈಕ್‌ಗೆ ಲಾರಿಯೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮತ್ತು ಸಹ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾ.ಹೆ 65 ರ ಬೊಗ್ರಿಬೈಲ್ ಬಳಿ ಬುಧವಾರ ( ಜೂ.1 ರಂದು) ನಡೆದಿದೆ.

Advertisement

ಅಗಸೂರು ಗ್ರಾಮದ ಬೊಮ್ಮಯ್ಯ ನಾಯಕ ಮತ್ತು ನಾರಾಯಣ  ನಾಯಕ ಮೃತ ದುರ್ಧೈವಿಗಳು.

ಅಗಸೂರಿನಿಂದ ಅಂಕೋಲಾ ಕಡೆ ಬರುತ್ತಿದ್ದ ಬೈಕ್ ಗೆ   ಹಿಂಬದಿಯಿಂದ ಅತಿವೇಗದಿಂದ ಬಂದ ಲಾರಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಸವಾರರು ಲಾರಿಯ ಮುಂಬದಿ ಚಕ್ರಕ್ಕೆ ಸಿಲುಕೆ ಅಪ್ಪಚ್ಚಿ ಆಗಿದ್ದಾರೆ.

ಘಟನೆಯಾದ ಬಳಿಕ ಲಾರಿ ಚಾಲಕ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next