ಲಂಡನ್: ಮೊದಲ ಟೆಸ್ಟ್ ಪಂದ್ಯ ಡ್ರಾ ಆದ ಬಳಿಕ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಂದು ಲಾರ್ಡ್ಸ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿದೆ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದೆ.
ಗಾಯಾಳುಗಳ ಸಮಸ್ಯೆಯಿಂದ ಎರಡೂ ತಂಡಗಳಲ್ಲಿ ಬದಲಾವಣೆ ಮಾಡಲಾಗಿದೆ. ಭಾರತದ ತಂಡದಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ಇಶಾಂತ್ ಶರ್ಮಾ ಇಂದು ಆಡುವ ಬಳಗದಲ್ಲಿ ಅವಕಾಶ ಪಡೆದಿದ್ದಾರೆ. ಇಂಗ್ಲೆಂಡ್ ನಲ್ಲಿ ಮೂರು ಬದಲಾವಣೆ ಮಾಡಿಕೊಂಡಿದ್ದು, ಜ್ಯಾಕ್ ಕ್ವಾಲಿ, ಸ್ಟುವರ್ಟ್ ಬ್ರಾಡ್, ಲಾರೆನ್ಸ್ ಬದಲಿಗೆ ಮೋಯಿನ್ ಅಲಿ, ಹಮೀದ್ , ಮಾರ್ಕ್ ವುಡ್ ಸ್ಥಾನ ಪಡೆದಿದ್ದಾರೆ.
ಲಾರ್ಡ್ಸ್‌ನಲ್ಲಿ ಎರಡೇ ಸಲ ಭಾರತ ಲಕ್ಕಿ: ಲಾರ್ಡ್ಸ್ ನಲ್ಲಿ ಭಾರತ ಈವರೆಗೆ ಒಟ್ಟು 18 ಟೆಸ್ಟ್ ಗಳನ್ನಾಡಿದ್ದು,ಕೇವಲ ಎರಡನ್ನಷ್ಟೇ ಜಯಿಸಿದೆ. 12ರಲ್ಲಿ ಸೋಲನುಭವಿಸಿದೆ. 4 ಪಂದ್ಯ ಡ್ರಾಗೊಂಡಿದೆ. ಭಾರತ ಲಾರ್ಡ್ಸ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಭರ್ತಿ 54 ವರ್ಷ ಕಾಯಬೇಕಾಯಿತು. 1986ರಲ್ಲಿ ಕಪಿಲ್‌ದೇವ್ ನಾಯಕತ್ವದ ಭಾರತ ಇಲ್ಲಿ ಆಡಲಾದ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನೇ 5 ವಿಕೆಟ್ ಗಳಿಂದ ಗೆದ್ದು ಇತಿಹಾಸ ಬರೆಯಿತು.
ಇದನ್ನೂ ಓದಿ:ಬೆಳ್ಳಿ ಪದಕ ವಿಜೇತೆ ಚಾನು ಜೊತೆಗಿನ ಸಲ್ಮಾನ್ ಖಾನ್ ಫೋಟೊ ಟ್ರೋಲ್| ಯಾಕೆ ಗೊತ್ತಾ?
ಭಾರತ ಇಲ್ಲಿ ಮತ್ತೂಂದು ಜಯ ಕಾಣಲು 2014ರ ತನಕ ಕಾಯಬೇಕಾಯಿತು. ಅಂತರ 5 ವಿಕೆಟ್. ನಾಯಕರಾಗಿದ್ದವರು ಧೋನಿ ಮತ್ತು ಕುಕ್. 319 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಇಶಾಂತ್ ಶರ್ಮ ದಾಳಿಗೆ ತತ್ತರಿಸಿ 223ಕ್ಕೆ ಆಲೌಟ್ ಆಗಿತ್ತು. ಇಶಾಂತ್ ಸಾಧನೆ 74ಕ್ಕೆ 7 ವಿಕೆಟ್. 2018Ãಲ್ಲಿ ಕೊನೆಯ ಸಲ ಇಲ್ಲಿ ಆಡಿದ್ದ ವಿರಾಟ್ ಕೊಹ್ಲಿ ಪಡೆ ಇನ್ನಿಂಗ್ಸ್ ಹಾಗೂ 159 ರನ್ನುಗಳ ಆಘಾತಕಾರಿ ಸೋಲಿಗೆ ತುತ್ತಾಗಿತ್ತು.
ತಂಡಗಳು
ಭಾರತ: ರೋಹಿತ್ ಶರ್ಮ, ಕೆ.ಎಲ್.ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜ, ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್: ರೋರಿ ಬರ್ನ್ಸ್, ಹಸೀಬ್ ಹಮೀದ್, ಡಾಮ್ ಸಿಬ್ಲಿ, ಜೋ ರೂಟ್, ಜಾನಿ ಬೇರ್‌ಸ್ಟೊ, ಮೊಯಿನ್ ಅಲಿ, ಜಾಸ್ ಬಟ್ಲರ್, ಸ್ಯಾಮ್ ಕರನ್, ಓಲೀ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್