Advertisement

ಲಾರ್ಡ್ಸ್‌ ಟೆಸ್ಟ್‌ : ಭಾರತಕ್ಕೆ ಇನ್ನಿಂಗ್ಸ್‌ ಸೋಲು

06:00 AM Aug 13, 2018 | Team Udayavani |

ಲಂಡನ್‌: ವೇಗಿಗಳಾದ ಆ್ಯಂಡರ್ಸನ್‌ ಮತ್ತು ಸ್ಟುವರ್ಟ್‌ ಬ್ರಾಡ್‌ ದಾಳಿಗೆ ಕೊಚ್ಚಿ ಹೋದ ಭಾರತವು ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಮತ್ತು 159 ರನ್ನುಗಳಿಂದ ಸೋಲನ್ನು ಕಂಡಿದೆ.

Advertisement

ಮೊದಲ ಇನ್ನಿಂಗ್ಸ್‌ನಲ್ಲಿ 289 ರನ್‌ ಹಿನ್ನಡೆ ಪಡೆದ ಬಳಿಕ ನಾಲ್ಕನೇ ದಿನ ತನ್ನ ದ್ವಿತೀಯ ಇನ್ನಿಂಗ್ಸ್‌ ಆಡಿದ ಭಾರತವು ಮತ್ತೆ ಆ್ಯಂಡರ್ಸನ್‌ ದಾಳಿಗೆ ತತ್ತರಿಸಿತು. ಅವರ ಜತೆ ಬ್ರಾಡ್‌ ಕೂಡ ಭಾರತದ ಮೇಲೆ ಎರಗಿದ ಕಾರಣ ಭಾರತ ನೆಲಕಚ್ಚಿತು. ಅವರಿಬ್ಬರ ನಿರಂತರ ದಾಳಿಯಿಂದ ಭಾರತ 130 ರನ್ನಿಗೆ ಆಲೌಟಾಗಿ ಶರಣಾಯಿತು. ಹಾರ್ದಿಕ್‌ ಮತ್ತು ಅಶ್ವಿ‌ನ್‌ ಮಾತ್ರ ಸ್ವಲ್ಪಮಟ್ಟಿಗೆ ಇಂಗ್ಲೆಂಡ್‌ ದಾಳಿಯನ್ನು ಎದುರಿಸಲು ಯಶಸ್ವಿಯಾಗಿದ್ದರು. ಅವರಿಬ್ಬರು ಏಳನೇ ವಿಕೆಟಿಗೆ 55 ರನ್‌ ಪೇರಿಸಿದ್ದರು. 

ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಕಿತ್ತ ಆ್ಯಂಡರ್ಸನ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ 23 ರನ್ನಿಗೆ 4 ವಿಕೆಟ್‌ ಪಡೆದರು. ಬ್ರಾಡ್‌ 44 ರನ್ನಿಗೆ 4 ವಿಕೆಟ್‌ ಕಿತ್ತು ಭಾರತದ ಕತೆ ಮುಗಿಸಿದರು. ಇನ್ನೆರಡು ವಿಕೆಟನ್ನು ವೋಕ್ಸ್‌ ಪಡೆದರು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ ವೋಕ್ಸ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. 

289 ರನ್‌ ಮೊದಲ ಇನ್ನಿಂಗ್ಸ್‌ ಹಿನ್ನಡೆ ಪಡೆದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲೂ ನೀರಸ ಆಟವಾಡಿತು. ಮುರಳಿ ವಿಜಯ್‌ ಮತ್ತೆ ಶೂನ್ಯಕ್ಕೆ ಔಟಾದರೆ ಕೆಎಲ್‌ ರಾಹುಲ್‌ 10 ರನ್‌ ಗಳಿಸಲಷ್ಟೇ ಶಕ್ತರಾದರು. ಪೂಜಾರ 17, ರಹಾನೆ 13 ಮತ್ತು ಕೊಹ್ಲಿ 17 ರನ್‌ ಗಳಿಸಿ ಔಟಾದರು.
 
7 ವಿಕೆಟಿಗೆ 396 ಡಿಕ್ಲೇರ್‌
ಆರು ವಿಕೆಟಿಗೆ 357 ರನ್ನಿನಿಂದ ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್‌ ತಂಡವು ಏಳನೇ ವಿಕೆಟ್‌ ಪತನವಾಗುತ್ತಲೇ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಮೂರನೇ ದಿನ ಬೇರ್‌ಸ್ಟೊ ಜತೆ ಆರನೇ ವಿಕೆಟಿಗೆ 189 ರನ್ನುಗಳ ಭರ್ಜರಿ ಜತೆಯಾಟ ನಡೆಸಿದ್ದ ಕ್ರಿಸ್‌ ವೋಕ್ಸ್‌ ವೈಯಕ್ತಿಕವಾಗಿ ಶತಕ ದಾಖಲಿಸಿ ಸಂಭ್ರಮಿಸಿದ್ದರು. ಆದರೆ ಬೇರ್‌ಸ್ಟೋ 93 ರನ್ನಿಗೆ ಔಟಾಗಿ ನಿರಾಶೆ ಅನುಭವಿಸಿದ್ದರು. 120 ರನ್ನಿನಿಂದ ನಾಲ್ಕನೇ ದಿನದಾಟ ಆರಂಭಿಸಿದ ವೋಕ್ಸ್‌ ಅವರು ಕುರಾನ್‌ ಜತೆ ಏಳನೇ ವಿಕೆಟಿಗೆ 76 ರನ್ನುಗಳ ಜತೆಯಾಟ ನಡೆಸಿದರು. 49 ಎಸೆತಗಳಲ್ಲಿ 40 ರನ್‌ ಸಿಡಿಸಿದ ಕುರಾನ್‌ ಅವರು ಪಾಂಡ್ಯ ಎಸೆತದಲ್ಲಿ ಶಮಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ತತ್‌ಕ್ಷಣವೇ ಇಂಗ್ಲೆಂಡ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.49 ಎಸೆತ ಎದುರಿಸಿದ ಕುರಾನ್‌ 5 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ್ದರೆ ವೋಕ್ಸ್‌ 137 ರನ್‌ ಗಳಿಸಿ ಅಜೇಯರಾಗಿ ಉಳಿದರು. 177 ಎಸೆತ ಎದುರಿಸಿದ ಅವರು 21 ಬೌಂಡರಿ ಬಾರಿಸಿದ್ದರು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌  107
ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌
ಅಲಸ್ಟೇರ್‌ ಕುಕ್‌    ಸಿ ಕಾರ್ತಿಕ್‌ ಬಿ ಶರ್ಮ    21
ಕೆಕೆ ಜೆನ್ನಿಂಗ್ಸ್‌    ಎಲ್‌ಬಿಡಬ್ಲ್ಯು ಬಿ ಶಮಿ    11
ಜೋ ರೂಟ್‌    ಎಲ್‌ಬಿಡಬ್ಲ್ಯು ಬಿ ಶಮಿ    19
ಒಲೀ ಪೋಪ್‌    ಎಲ್‌ಬಿಡಬ್ಲ್ಯು ಬಿ ಪಾಂಡ್ಯ    28
ಜಾನಿ ಬೇರ್‌ಸ್ಟೊ    ಸಿ ಕಾರ್ತಿಕ್‌ ಬಿ ಪಾಂಡ್ಯ    93
ಜೋಸ್‌ ಬಟ್ಲರ್‌    ಎಲ್‌ಬಿಡಬ್ಲ್ಯು ಬಿ ಶಮಿ    24
ಕ್ರಿಸ್‌ ವೋಕ್ಸ್‌    ಔಟಾಗದೆ    137
ಸ್ಯಾಮ್‌ ಕುರಾನ್‌    ಸಿ ಶಮಿ ಬಿ ಪಾಂಡ್ಯ    40
ಇತರ:        23
ಒಟ್ಟು (7 ವಿಕೆಟಿಗೆ ಡಿಕ್ಲೇರ್‌x)        396
ವಿಕೆ‌ಟ್‌ ಪತನ: 1-28, 2-32, 3-77, 4-89, 5-131, 6-320, 7-396
ಬೌಲಿಂಗ್‌:
ಇಶಾಂತ್‌ ಶರ್ಮ        22-4-101-1
ಮೊಹಮ್ಮದ್‌ ಶಮಿ        23-4-96-3
ಕುಲದೀಪ್‌ ಯಾದವ್‌        9-1-44-0
ಹಾರ್ದಿಕ್‌ ಪಾಂಡ್ಯ        17.1-0-66-3
ಆರ್‌. ಅಶ್ವಿ‌ನ್‌        17-1-68-0
ಭಾರತ ದ್ವಿತೀಯ ಇನ್ನಿಂಗ್ಸ್‌
ಮುರಳಿ ವಿಜಯ್‌    ಸಿ ಬೇರ್‌ಸ್ಟೊ ಬಿ ಆ್ಯಂಡರ್ಸನ್‌    0
ಕೆಎಲ್‌ ರಾಹುಲ್‌      ಎಲ್‌ಬಿಡಬ್ಲ್ಯು ಬಿ ಆ್ಯಂಡರ್ಸನ್‌    10
ಚೇತೇಶ್ವರ ಪೂಜಾರ    ಬಿ ಬ್ರಾಡ್‌    17
ಅಜಿಂಕ್ಯ ರಹಾನೆ    ಸಿ ಜೆನ್ನಿಂಗ್ಸ್‌ ಬಿ ಬ್ರಾಡ್‌    13
ವಿರಾಟ್‌ ಕೊಹ್ಲಿ    ಸಿ ಪೋಪ್‌ ಬಿ ಬ್ರಾಡ್‌    17
ಹಾರ್ದಿಕ್‌ ಪಾಂಡ್ಯ    ಎಲ್‌ಬಿಡಬ್ಲ್ಯು ಬಿ ವೋಕ್ಸ್‌    26
ದಿನೇಶ್‌ ಕಾರ್ತಿಕ್‌    ಎಲ್‌ಬಿಡಬ್ಲ್ಯು ಬಿ ಬ್ರಾಡ್‌    0
ಆರ್‌. ಅಶ್ವಿ‌ನ್‌    ಔಟಾಗದೆ    33
ಕುಲದೀಪ್‌    ಬಿ ಆ್ಯಂಡರ್ಸನ್‌    0
ಮೊಹಮ್ಮದ್‌ ಶಮಿ   ಎಲ್‌ಬಿಡಬ್ಲ್ಯು ಬಿ ಆ್ಯಂಡರ್ಸನ್‌     0
ಇಶಾಂತ್‌ ಶರ್ಮ    ಸಿ ಪೋಪ್‌ ಬಿ ವೋಕ್ಸ್‌    2
ಇತರ:        12
ಒಟ್ಟು  (ಆಲೌಟ್‌)        130
ವಿಕೆಟ್‌ ಪತನ: 1-0, 2-13, 3-35, 4-50, 5-61, 6-61, 7-116, 8-121, 9-125
ಬೌಲಿಂಗ್‌:
ಜೇಮ್ಸ್‌ ಆ್ಯಂಡರ್ಸನ್‌        12-5-23-4
ಸ್ಟುವರ್ಟ್‌ ಬ್ರಾಡ್‌        16-6-44-4
ಕ್ರಿಸ್‌ ವೋಕ್ಸ್‌        10-2-24-2
ಸ್ಯಾಮ್‌ ಕುರಾನ್‌        9-1-27-0

Advertisement
Advertisement

Udayavani is now on Telegram. Click here to join our channel and stay updated with the latest news.

Next