Advertisement

ಲೋಕ ಕಲ್ಯಾಣಕ್ಕಾಗಿ ಭಗವಂತ ವಾಮನನಾದ…

12:30 AM Mar 16, 2019 | |

ಆಕಾಶದಲ್ಲಿ ಭಾರೀ ಶಬ್ದ ಉಂಟಾಯಿತು. ಮಳೆಗಾಲದಲ್ಲಿ ಕರಿಮೋಡಗಳು ಆಕಾಶವನ್ನು ಮುಚ್ಚಿಬಿಡುವಂತೆಯೇ, ಮಾರೀಚ ಮತ್ತು ಸುಭಾಹು ಎಂಬ ರಾಕ್ಷಸರು ಎಲ್ಲೆಡೆ  ತಮ್ಮ ಮಾಯೆಯನ್ನು ಹರಡುತ್ತಾ ಯಜ್ಞ ಮಂಟಪದ ಕಡೆಗೆ ಓಡಿ ಬರುತ್ತಿದ್ದರು. ಅವರ ಅನುಚರರೂ ಜೊತೆಗೇ ಇದ್ದರು. ಆ ಭಯಂಕರ ರಾಕ್ಷಸರು ಅಲ್ಲಿಗೆ ಬಂದು ರಕ್ತದ ಮಳೆಗರೆಯಲು ಪ್ರಾರಂಭಿಸಿದರು.

Advertisement

ಶ್ರೀರಾಮ ಲಕ್ಷ್ಮಣರು  ತಾಟಕಿಯನ್ನು ಸಂಹರಿಸಿದ ನಂತರ ಪ್ರಾತಃಕಾಲವನ್ನು ನಿರೀಕ್ಷಿಸುತ್ತಾ ವಿಶ್ವಾಮಿತ್ರರೊಂದಿಗೆ ಆ ರಾತ್ರಿ ತಾಟಕವನದಲ್ಲೇ ವಿಶ್ರಮಿಸಿದರು.  ಬೆಳಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ , ಮಹಾತಪಸ್ವಿ ವಿಶ್ವಾಮಿತ್ರರು ರಾಮನಲ್ಲಿ  “ಬಹಳ ಸಂತೋಷದಿಂದ ರಾಜಕುಮಾರ, ನಿನಗೆ ಮಂಗಳವಾಗಲಿ. ತಾಟಕ ವಧೆಯಿಂದ ನಾನು ಬಹಳ ಸಂತುಷ್ಟನಾಗಿರುವೆನು. ಆದ್ದರಿಂದ ನಿನಗೆ ಎಲ್ಲ ಪ್ರಕಾರದ ಅಸ್ತ್ರಗಳನ್ನು ಕೊಡುತ್ತಿದ್ದೇನೆ’ ಎಂದು ಹೇಳಿ ಎÇÉಾ ರೀತಿಯ ದಿವ್ಯಾಸ್ತ್ರ ಹಾಗೂ ಮಹಾನ್‌ ದಂಡಚಕ್ರ, ಧರ್ಮಚಕ್ರ, ವಿಷ್ಣುಚಕ್ರ ಹಾಗೂ ಅತ್ಯಂತ ಭಯಂಕರ ಐಂದ್ರಚಕ್ರ , ಇಂದ್ರನ ವಜ್ರಾಸ್ತ್ರ ,ಶಿವನ ತ್ರಿಶೂಲ, ಬ್ರಹ್ಮದೇವರ ಬ್ರಹ್ಮಶಿರ ಎಂಬ ಅಸ್ತ್ರ, ಜೊತೆಗೆ ಪರಮೋತ್ತಮವಾದ ಬ್ರಹ್ಮಾಸ್ತ್ರವನ್ನೂ , ಹತ್ತು ಹಲವು ವಿಶೇಷಾಸ್ತ್ರಗಳನ್ನು  ಕರುಣಿಸಿ ಹಾರೈಸಿದರು.

ಶ್ರೀರಾಮನು ವಿಶ್ವಾಮಿತ್ರರಿಂದ ಆ ಅಸ್ತ್ರಗಳ ಸಂಹಾರವಿಧಿಯನ್ನು ಅರಿತು, ಅವರೆಲ್ಲರೂ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಾ ತಾಟಕವನದಿಂದ ಹೊರಬಂದರು. ಅಲ್ಲಿ ಅವರಿಗೆ ಒಂದು ಪರ್ವತದ ಬಳಿ ದಟ್ಟವಾದ ಮೋಡಗಳಂತೆ ನಿಬಿಡವಾದ ವೃಕ್ಷಗಳಿಂದ ತುಂಬಿದ ಆಶ್ರಮವು ಕಾಣಿಸಿತು. ಅದು ಜಿಂಕೆಗಳ ಸಮೂಹಗಳಿಂದ ತುಂಬಿಕೊಂಡು ಅತ್ಯಂತ ಮನೋಹರವಾಗಿ ಕಾಣುತ್ತಿತ್ತು. ನಾನಾ ಬಗೆಯ ಪಕ್ಷಿಗಳ ಮಧುರ ಕಲರವದಿಂದ ಆಶ್ರಮದಶೋಭೆ ಹೆಚ್ಚಿತ್ತು .

ಇದನ್ನು ಕಂಡ ಶ್ರೀರಾಮನು ವಿಶ್ವಾಮಿತ್ರರಲ್ಲಿ “ಪೂಜ್ಯರೇ,  ಇದು ಯಾರ ಆಶ್ರಮ ? ಇದರ ಬಗ್ಗೆ ತಿಳಿದುಕೊಳ್ಳುವ ಉತ್ಕಠತೆ ನನ್ನ ಮನಸಿನಲ್ಲಿ ಉಂಟಾಗಿದೆ. ಎಲ್ಲಿ ನಿಮ್ಮ ಯಜ್ಞ ಕ್ರಿಯೆ ನಡೆಯುವುದು? ಆ ಪಾಪಿ ದುರಾಚಾರಿ, ಬ್ರಹ್ಮಹತ್ಯೆ ಮಾಡಿರುವ, ನಿಮ್ಮ ಯಜ್ಞದಲ್ಲಿ ವಿಘ್ನವನ್ನು ಮಾಡಲು ಬರುತ್ತಾ ಇರುವ ಆ ದುರಾತ್ಮ ರಾಕ್ಷಸರು ಎಲ್ಲಿ ?ದಯಮಾಡಿ ಇದೆಲ್ಲದರ ಬಗ್ಗೆ ನನಗೆ ತಿಳಿಸಿರಿ’ ಎಂದು ಕೇಳಿದನು.

 ಅಪ್ರಮೇಯನಾದ ಶ್ರೀರಾಮನ ಮಾತನ್ನು ಕೇಳಿ ಮಹಾತೇಜಸ್ವೀ ವಿಶ್ವಾಮಿತ್ರರು ಅವನ ಪ್ರಶ್ನೆಗಳಿಗೆ ಉತ್ತರಿಸುತ್ತಾ.. ಆ ಆಶ್ರಮದ ಹಿಂದಿನ ವೃತ್ತಾಂತವನ್ನು ವಿವರಿಸತೊಡಗಿದರು. “ರಾಮ, ಬಹಳ ಹಿಂದೆ ದೇವವಂದಿತ ಭಗವಾನ್‌ ವಿಷ್ಣುವು ನೂರು ಯುಗಗಳವರೆಗೆ ಇಲ್ಲಿ ತಪಸ್ಸನ್ನು ಮಾಡಿದ್ದನು. ಈ ಸ್ಥಾನವು ವಾಮನನ¨ªಾಗಿದೆ. ವಿಷ್ಣುವು ವಾಮನ ಅವತಾರ ಧರಿಸುವ ಮೊದಲಿನಿಂದಲೂ ಈ ಆಶ್ರಮವಿತ್ತು.  ಇದು ಸಿದ್ಧಾಶ್ರಮವೆಂದು ಪ್ರಸಿದ್ಧವಾಗಿತ್ತು. ಏಕೆಂದರೆ ಇಲ್ಲಿ ಮಹಾಯೋಗಿ ವಿಷ್ಣುವಿಗೆ ಸಿದ್ದಿ ಉಂಟಾಗಿತ್ತು. ಅವನು ತಪಸ್ಸು ಮಾಡುತ್ತಿ¨ªಾಗಲೇ ವಿರೋಚನ ಕುಮಾರ ಬಲಿಚಕ್ರವರ್ತಿಯು ಇಂದ್ರನನ್ನು ಮರುದ್ಗಣಗಳ ಸಹಿತ ಸೋಲಿಸಿ ಅವರ ರಾಜ್ಯವನ್ನು ವಶಪಡಿಸಿಕೊಂಡಿದ್ದನು. ಅವನು ಮೂರು ಲೋಕಗಳಲ್ಲಿಯೂ ವಿಖ್ಯಾತನಾಗಿದ್ದನು.
 
ಇಂದ್ರಾದಿ ದೇವತೆಗಳೆಲ್ಲ ಈ ಆಶ್ರಮಕ್ಕೆ ಬಂದು ಭಗವಾನ್‌ ವಿಷ್ಣುವಿನಲ್ಲಿ ಪ್ರಾರ್ಥಿಸಿದರು. “ಬಲಿಯು ಈಗಾಗಲೇ ಮೂರೂ ಲೋಕಗಳನ್ನು ಗೆದ್ದೂ ವಿಜಯಶಾಲಿಯಾಗಿದ್ದಾನೆ. ಈಗ ಶತ ಯಾಗವನ್ನು ಮಾಡಿ ಅಜೇಯನಾಗಲು ಹೊರಟಿ¨ªಾನೆ. ಇದರಿಂದ ರಾಕ್ಷಸರ ಉಪದ್ರವವೂ ಎಲ್ಲೇ ಮೀರುತ್ತಿದೆ. ಬಲಿಯ ಯಜ್ಞವು ಪೂರ್ಣವಾಗುವ ಮೊದಲೇ ನೀನು ಅವನನ್ನು ತಡೆದು ನಮ್ಮನ್ನು ರಕ್ಷಿ$ಸಬೇಕು. ಈ ಸಮಯದಲ್ಲಿ ಯಾವನೇ ದೇಶದೇಶಾಂತರಾದ ಯಾಚಕನು ಬಂದು ಅವನಲ್ಲಿ ಬೇಡಿದರೂ ಗೋ , ಭೂಮಿ, ಸುವರ್ಣ ಮುಂತಾದ ಬೇಡಿಕೆಗಳನ್ನು ಕೇಳಿ ದಾನಮಾಡುತ್ತಿ¨ªಾನೆ. ನೀನು ದೇವತೆಗಳ ಹಿತಕ್ಕಾಗಿ ನಿನ್ನ ಯೋಗಮಾಯೆಯಿಂದ ವಾಮನರೂಪವನ್ನು ಧರಿಸಿ ಆ ಯಜ್ಞಕ್ಕೆ ಹೋಗಿ ನಮ್ಮ ಉತ್ತಮ ಕಲ್ಯಾಣವನ್ನು ಮಾಡು’ ಎಂದು ಬೇಡಿಕೊಂಡರು.

Advertisement

 ಅದೇ ಸಮಯಕ್ಕೆ, ಅಗ್ನಿಯಂತೆ ತೇಜಸ್ವೀ ಮಹರ್ಷಿ ಕಶ್ಯಪರು ಅವರ ಧರ್ಮಪತ್ನಿ ಅದಿತಿಯ ಜೊತೆ ಒಂದು ಸಾವಿರ ವರ್ಷಗಳವರೆಗೆ ಮಹಾನ್‌ ವ್ರತವನ್ನು ಆಚರಿಸಿ, ಭವಂತನನ್ನೇ ಮಗುವಾಗಿ ಪಡೆಯುವ ಹಂಬಲದಿಂದ, ಅದೇ ಆಶ್ರಮಕ್ಕೆ ವಿಷ್ಣುವನ್ನು ದರ್ಶಿಸಲು ಬಂದರು.

ಅದಿತಿ ಕಶ್ಯಪರ ಹಾಗೂ ಎಲ್ಲಾ  ದೇವತೆಗಳ ಬೇಡಿಕೆಗಳನ್ನು ಮನ್ನಿಸಿ ಭಗವಾನ್‌ ನಾರಾಯಣನು ಅದಿತಿ ದೇವಿಯ ಗರ್ಭದಿಂದ ಪ್ರಕಟನಾಗಿ ವಾಮನರೂಪವನ್ನು ಧರಿಸಿ, ಬಲಿಯ ಬಳಿ ಹೋದನು. ಅಲ್ಲಿ,  ಮೂರೂ ಹೆಜ್ಜೆ ಜಾಗವನ್ನು ಯಾಚಿಸಿ, ಬಲಿಯ ನಿಗ್ರಹಿಸಿ ಮೂರುಲೋಕಗಳನ್ನು ಪುನಃ ಇಂದ್ರನಿಗೆ ಒಪ್ಪಿಸಿದನು. ಅದೇ ಭಾಗವತನು ಹಿಂದೆ ಇಲ್ಲಿ ವಾಸಿಸಿದ್ದನು. ಅದಕ್ಕಾಗಿ ಈ ಆಶ್ರಮವು ಎಲ್ಲ ವಿಧದ ಶ್ರಮ(ದುಃಖ)ವನ್ನು ನಾಶಮಾಡುವಂತಹುದು. ಆ ಭಗವಾನ್‌ ವಾಮನನಲ್ಲಿ ಭಕ್ತಿ ಇರುವುದರಿಂದ ನಾನೂ ಕೂಡ ಈ ಸ್ಥಾನವನ್ನು ಉಪಯೋಗಿಸುತ್ತಿದ್ದೇನೆ. ಇದೇ ಆಶ್ರಮಕ್ಕೆ ನನ್ನ ಯಜ್ಞದಲ್ಲಿ ವಿಘ್ನವನ್ನೊಡ್ಡುವ ರಾಕ್ಷಸರು ಬರುತ್ತಾರೆ. ರಾಮ! ನೀನು ಇಲ್ಲೇ  ಆ ದುರಾಚಾರಿಗಳನ್ನು ವಧಿಸುವುದಿದೆ’ ಎಂದು ತಿಳಿಸಿದರು.

ವಿಶ್ವಾಮಿತ್ರರು ಬಂದಿರುವುದನ್ನು ನೋಡಿ ಸಿದ್ಧಾಶ್ರಮದಲ್ಲಿ ವಾಸಿಸುವ ಎಲ್ಲ ತಪಸ್ವಿಗಳು ಕೂಡಲೇ ಅವರ ಬಳಿಗೆ ಬಂದು ಎಲ್ಲರು ಸೇರಿ ಯಥೋಚಿತವಾಗಿ ಪೂಜಿಸಿ ಸತ್ಕಾರ ಮಾಡಿದರು. 

   ಅನಂತರ ವಿಶ್ವಾಮಿತ್ರರಿಗೆ ನಮಸ್ಕರಿಸಿ, ಆ ರಾಕ್ಷಸರ ಬಗ್ಗೆ ವಿಚಾರಿಸಲು ಮುಂದೆ ಬಂದರು,ಇದನ್ನು ಗಮನಿಸಿದ ಕೌಶಿಕ ಮುನಿಗಳು  “ರಾಮ, ವಿಶ್ವಾಮಿತ್ರರು ಯಜ್ಞದ ದೀಕ್ಷೆ ಪಡೆದಿರುವುದರಿಂದ ಈಗ ಮೌನವಾಗಿದ್ದಾರೆ. ರಘುವಂಶಿ ವೀರರಾದ ನೀವಿಬ್ಬರೂ ಎಚ್ಚರವಾಗಿದ್ದು, ಇಂದಿನಿಂದ ಆರು ರಾತ್ರಿಗಳವರೆಗೆ ಇವರ ಯಜ್ಞವನ್ನು ರಕ್ಷಿಸುತ್ತಾ ಇರಿ’  ಎಂದರು.

    ಮುನಿಗಳ ಈ ಮಾತನ್ನು ಕೇಳಿ ಆ ಇಬ್ಬರು ರಾಜಕುಮಾರರೂ ಒಂದೇ ಸಮ ಆರು ಹಗಲು, ಆರು ರಾತ್ರಿಗಳವರೆಗೆ ಆ ತಪೋವನವನ್ನು ರಕ್ಷಿಸುತ್ತಾ ಇದ್ದರು. ಅಷ್ಟು ದಿನ ಅವರು ನಿ¨ªೆಯನ್ನೇ ಮಾಡದೆಯೇ ವಿಶ್ವಾಮಿತ್ರರ ಯಜ್ಞದ ರಕ್ಷಣೆಯಲ್ಲೇ  ತತ್ಪರರಾದರು.  ಶಾಸ್ತ್ರವಿಧಿಗನುಸಾರ ವೇದಮಂತ್ರಗಳ ಉಚ್ಚಾರಣಾ ಪೂರ್ವಕ ಆ ಯಜ್ಞದ ಕಾರ್ಯಪ್ರಾರಂಭಗೊಂಡಿತು. ಈ ಪ್ರಕಾರ ಐದು ದಿನಗಳು ಕಳೆದು ಆರನೆಯ ದಿನ ಬಂದಾಗ ಶ್ರೀರಾಮನು ಸೌಮಿತ್ರಿಯಲ್ಲಿ –  ಸುಮಿತ್ರಾ ನಂದನ.  ನೀನು ನಿನ್ನ ಚಿತ್ತವನ್ನು ಏಕಾಗ್ರಗೊಳಿಸಿ ಎಚ್ಚರವಾಗಿರು’ ಎಂದು ಹೇಳಿದನು.

ಇದೇ ಸಮಯದಲ್ಲಿ ಆಕಾಶದಲ್ಲಿ ಭಾರೀ ಶಬ್ದ ಉಂಟಾಯಿತು. ಮಳೆಗಾಲದಲ್ಲಿ ಕರಿಮೋಡಗಳು ಆಕಾಶವನ್ನು ಮುಚ್ಚಿಬಿಡುವಂತೆಯೇ, ಮಾರೀಚ ಮತ್ತು ಸುಭಾಹು ಎಂಬ ರಾಕ್ಷಸರು ಎÇÉೆಡೆ  ತಮ್ಮ ಮಾಯೆಯನ್ನು ಹರಡುತ್ತಾ ಯಜ್ಞ ಮಂಟಪದ ಕಡೆಗೆ ಓಡಿ ಬರುತ್ತಿದ್ದರು. ಅವರ ಅನುಚರರೂ ಜೊತೆಗೇ ಇದ್ದರು. ಆ ಭಯಂಕರ ರಾಕ್ಷಸರು ಅಲ್ಲಿಗೆ ಬಂದು ರಕ್ತದ ಮಳೆಗರೆಯಲು ಪ್ರಾರಂಭಿಸಿದರು.

ರಕ್ತ ಪ್ರವಾಹದಿಂದ ಯಜ್ಞವೇದಿಕೆಯ ಸುತ್ತಲಿನ ಭೂಮಿ ನೆನೆದಿರುವುದನ್ನು ನೋಡಿ ಶ್ರೀರಾಮಚಂದ್ರನು ವಾಯುವಿನ ವೇಗದಿಂದ ಮೋಡಗಳು ಛಿನ್ನ-ಭಿನ್ನವಾಗುವಂತೆ ಮಾನವಾಸ್ತ್ರವನ್ನು ತನ್ನ ಧನುಸ್ಸಿಗೆ ಸಂಧಾನಮಾಡಿದನು. ಆ ಅಸ್ತ್ರವು ಅತ್ಯಂತ ತೇಜಸ್ವಿಯಾಗಿತ್ತು. ರಾಮನು ರೋಷ ಭರಿತನಾಗಿ ಮಾರೀಚನ ಎದೆಗೆ ಆ ಬಾಣವನ್ನು ಪ್ರಯೋಗಿಸಿದನು. ಆ ಏಟಿನಿಂದ ಮಾರೀಚನು ನೂರು ಯೋಜನ ದೂರ ಸಮುದ್ರದಲ್ಲಿ ಹೋಗಿ ಬಿದ್ದನು. ಮರುಕ್ಷಣವೇ ಶ್ರೀರಾಮನು ತನ್ನ ಕೈಚಳಕ ತೋರಿಸುತ್ತ ಶೀಘ್ರವಾಗಿ ಮಹಾ ಆಗ್ನೇಯಾಸ್ತ್ರವನ್ನು ಅನುಸಂಧಾನ ಮಾಡಿ ಅದನ್ನು ಸುಬಾಹುವಿನ ಎದೆಗೆ ಪ್ರಯೋಗಿಸಿದನು. ಅದು ತಗಲುತ್ತಲೇ ಅವನು ಸತ್ತು, ಭೂಮಿಗೆ ಬಿದ್ದನು. ಯಜ್ಞದಲ್ಲಿ ವಿಘ್ನವನ್ನು ಮಾಡುವ ಇತರ ನಿರ್ದಯಿ, ದುರಾಚಾರೀ,ಪಾಪಕರ್ಮ ಹಾಗೂ ರಕ್ತಭೋಜೀ ರಾಕ್ಷಸರನ್ನು ಕೂಡ ಕೊಂದುಹಾಕುವೆನು ಎಂದ ಶ್ರೀರಾಮನು ವಾಯುವ್ಯಾಸ್ತ್ರವನ್ನು ಪ್ರಯೋಗಿಸಿ ಉಳಿದ ನಿಶಾಚರರನ್ನು ಸಂಹರಿಸಿ ಮುನಿಗಳನ್ನು ಸಂತೋಷಪಡಿಸಿದನು.

  ಯಜ್ಞವು ಮುಗಿದಾಗ ಮಹಾಮುನಿ ವಿಶ್ವಾಮಿತ್ರರು ಸಮಸ್ತ ದಿಕ್ಕುಗಳನ್ನು ವಿಘ್ನ – ಬಾಧೆಗಳಿಂದ ರಹಿತವಾಗಿರುವುದನ್ನು ನೋಡಿ  ಶ್ರೀ ರಾಮಚಂದ್ರನನ್ನು ಪ್ರಶಂಶಿಸಿದರು.

ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next