Advertisement

Ayodhya Shri Ram: ಪ್ರಭು ಶ್ರೀರಾಮ ಪ್ರೇರಕ ಶಕ್ತಿ

11:00 AM Jan 08, 2024 | Team Udayavani |

ಶ್ರೀರಾಮನ ಜನ್ಮ ಮತ್ತು ಕರ್ಮಭೂಮಿಯಾದ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮತ್ತು ಶ್ರೀರಾಮಮಂದಿರ ಲೋಕಾರ್ಪಣೆ ಆಗುತ್ತಿರುವುದು ಐತಿಹಾಸಿಕ ಘಟನೆಯಾಗಿದೆ.

Advertisement

ಅಂದು ರಾವಣನ ಸಂಹಾರಕ್ಕಾಗಿ, ದೇವತೆಗಳ  ಶಾಂತಿಗಾಗಿ, ಅಹಲ್ಯೆಯ ಮುಕ್ತಿಗಾಗಿ, ಶಬರಿಯ ಮೋಕ್ಷಕ್ಕಾಗಿ ಮುಂತಾದ ಚಾರಿತ್ರಿಕ ಧರ್ಮ ಸಂಸ್ಥಾಪನೆಯ ಕಾರಣಗಳಿಗಾಗಿ “ಧರ್ಮೋ ಹಿ ಪರಮೋ ಲೋಕೇ…’ ಅಂದರೆ ಧರ್ಮವು ಜಗತ್ತಿನಲ್ಲಿ (ಜೀವನದಲ್ಲಿ) ಶ್ರೇಷ್ಠವಾದುದ್ದು ಎಂದು ನಡೆ-ನುಡಿ­ಯಲ್ಲಿ ಅಕ್ಷರಶಃ ಅನುಷ್ಠಾನ ಮಾಡಿದ ಧರ್ಮಜ್ಞ, ಮಾತಾ-ಪಿತೃವಾಕ್ಯ ಪರಿ ಪಾಲಕ, ಆದರ್ಶ ಗುಣಸಾರ್ವಭೌಮ, ಸಂಪತ್ತು- ಅಧಿಕಾರದ ವ್ಯಾಮೋಹ ಇಲ್ಲದ ನಿರ್ಮೋಹಿ, ಭಕ್ತರನ್ನೇ ಭಗವಂತನ ಸ್ಥಾನಕ್ಕೇರಿಸಿದ ಸಮಾನತೆಯ ಹರಿಕಾರ, ಪವಾಡಕ್ಕಿಂತ ವಾಸ್ತವತೆಯ ಅಪ್ಪಿ ಒಪ್ಪಿಕೊಂಡ ಸೌಜನ್ಯ ಮೂರ್ತಿ, ನಂಬಿದವರ ಅಭಯಂಕರ, ಶರಣಾಗತರ ವತ್ಸಲ, ಮರ್ಯಾದಾ ಪುರುಷೋತ್ತಮ, ಪ್ರಜಾಹಿತ ನಿರತ, ಪರತತ್ತÌ ಸಹಿಷ್ಣು ಶ್ರೀರಾಮನ ಆರ್ವಿಭಾವಕ್ಕಾಗಿ ಕಾಯುತ್ತಿದ್ದರು.

ಇಂದು ಅದೇ ಭಗವಾನ್‌ ಶ್ರೀರಾಮ ಜೀವನದ ಆದರ್ಶ ಮತ್ತು ವ್ಯಕ್ತಿತ್ವ , ಅವನ ಸತ್‌ ಕಾರ್ಯಗಳು ಹಾಗೂ ಅವನ ಧರ್ಮ ತತ್ತÌ ಚಿಂತನೆಗಳ ಅನುಷ್ಠಾನಕ್ಕಾಗಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಶ್ರೀರಾಮ… ಎಂಬ ನಾಮವೇ ಸರ್ವರನ್ನೂ ಪ್ರಭಾವಿಸುವ ಪ್ರೇರಕ ಶಕ್ತಿಯಾಗಿರುವುದರಿಂದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮತ್ತು ಶ್ರೀರಾಮ ಮಂದಿರ ಲೋಕಾರ್ಪಣೆಯ ಕೀರ್ತಿ ಹರಡುವ ಜತೆ ಜತೆಗೆ ಶ್ರೀರಾಮನ ನೀತಿಯು ಸರ್ವ ಭಕ್ತರ ಮನಗಳನು ತಲುಪಲಿ ಎಂದು ಶುಭ ಹಾರೈಸುತ್ತೇವೆ.

 ನಿರಂಜನಾನಂದಪುರಿ ಮಹಾಸ್ವಾಮೀಜಿ

ಕನಕ ಗುರುಪೀಠ, ಕಾಗಿನೆಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next