ಪ್ರಭು ಶ್ರೀರಾಮಚಂದ್ರನ 108 ಅಡಿ ಎತ್ತರದ ಬೃಹತ್ ಪಂಚಲೋಹ ಪ್ರತಿಮೆ ನಿರ್ಮಾಣದ ಶಂಕು ಸ್ಥಾಪನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುವಲ್ ಆಗಿ ಭಾಗವಹಿಸಿ ಶುಭ ಹಾರೈಸಿದ್ದಾರೆ. ಈಗಾಗಲೇ ಮಂತ್ರಾಲಯ ಮಠದಿಂದ 52 ಅಡಿಗಳ ಕಲ್ಲಿನ ಪ್ರತಿಮೆ ಸ್ಥಾಪನೆಯಾಗಿದ್ದು, ಅದರ ಜತೆ ಮಂತ್ರಾಲಯದಿಂದ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿಮತ್ತೊಂದು ಬೃಹತ್ ಪಂಚಲೋಹದ ಪ್ರತಿಮೆ ಅನಾವರಣಗೊಳ್ಳಲಿದೆ. ಜೈ ಶ್ರೀರಾಮ ಫೌಂಡೇಶನ್‌ನಿಂದ ಈ ಪ್ರತಿಮೆ ಯನ್ನು ನಿರ್ಮಿಸಲಾಗುತ್ತಿದೆ.
Advertisement
ಈಗಾಗಲೇ ನಿರ್ಮಿಸಿರುವ 52 ಅಡಿಯ ಅಭಯಾಂಜನೇಯ ಸ್ವಾಮಿ ಮೂರ್ತಿ ಎದುರಿನ ಪ್ರದೇಶದಲ್ಲೇ ಶ್ರೀ ರಾಮನ ಪ್ರತಿಮೆ ನಿರ್ಮಿಸಲಾಗುತ್ತದೆ. ಶ್ರೀಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರತೀರ್ಥರು ಭೂಮಿಪೂಜೆ ನೆರವೇರಿಸಿದರು. ಬಳಿಕ ಜರಗಿದ ಕಾರ್ಯಕ್ರಮದಲ್ಲಿ ಅಮಿತ್ ಶಾ ವರ್ಚುವಲ್ ಆಗಿ ಭಾಗಿಯಾಗಿ ಮಾತನಾಡಿದರು.ಮಂತ್ರಾಲಯದಲ್ಲಿ ಪ್ರಭು ಶ್ರೀರಾಮನ 108 ಎತ್ತರದ ಪಂಚಲೋಹದ ಪ್ರತಿಮೆ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಸನಾತನ ಧರ್ಮವನ್ನು ಪ್ರತಿನಿಧಿ ಸಲಿದೆ. ದೇಶ-ವಿದೇಶಗಳಲ್ಲಿ ವೈಷ್ಣವ ಪರಂಪರೆ ಬೆಳಗಲಿದೆ. ಹಿಂದೂ ಸಂಸ್ಕೃತಿಯಲ್ಲಿ 108 ಸಂಖ್ಯೆ ಅತ್ಯಂತ ಪವಿತ್ರ. ಇಂಥ ಮಹೋನ್ನತ ಕಾರ್ಯಕ್ಕೆ ಮುಂದಾಗಿರುವ ಮಂತ್ರಾಲಯದ ಮಠದ ಶ್ರೀಗಳ ಚಿಂತನೆ ಶ್ಲಾಘನೀಯ. ಇಂಥ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಅಮಿತ್ ಶಾ ಅವರು ಹೇಳಿದರು.
Related Articles
ಸ್ಥಳ: ಮಂತ್ರಾಲಯದಿಂದ ಎಮ್ಮಿಗನೂರಿಗೆ ಹೋಗುವ ಮಾರ್ಗದಲ್ಲಿ
ರಚನೆ: ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಬೃಹತ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ರಾಮಹಾಂಜಿ ಸುತಾರ್‌ಗೆ ಜವಾಬ್ದಾರಿ.
Advertisement