Advertisement

Sandalwood; ‘ಗ್ರಾಮಾಯಣ’ಕ್ಕೆ ಲೂಸ್‌ ಮಾದ ಯೋಗಿ ಎಂಟ್ರಿ

03:40 PM Oct 05, 2023 | Team Udayavani |

ನಟ ವಿನಯ್‌ ರಾಜಕುಮಾರ್‌ ಅಭಿನಯದ “ಗ್ರಾಮಾಯಣ’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೀಗ ಚಿತ್ರತಂಡದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, “ಗ್ರಾಮಾಯಣ’ ಸಿನಿಮಾಕ್ಕೆ ನಟ ಲೂಸ್‌ ಮಾದ ಎಂಟ್ರಿಯಾಗುತ್ತಿದ್ದಾರೆ. ಹೌದು, “ಗ್ರಾಮಾಯಣ’ ಸಿನಿಮಾದಲ್ಲಿ ಬರುವ ಪ್ರಮುಖ ಪಾತ್ರವೊಂದರಲ್ಲಿ ನಟ ಲೂಸ್‌ಮಾದ ಯೋಗಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

“ಗ್ರಾಮಾಯಣ’ ಸಿನಿಮಾದ ಕಥೆಯಲ್ಲಿ ತಿರುವು ನೀಡುವಂಥ ಹೊಸಥರದ ಪಾತ್ರದಲ್ಲಿ ಲೂಸ್‌ಮಾದ ಯೋಗಿ ಅಭಿನಯಿಸುತ್ತಿದ್ದಾರೆ. ಸದ್ಯ ಲೂಸ್‌ಮಾದ ಯೋಗಿ ಅವರ ಪಾತ್ರದ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದ್ದು, ಇದೇ ವಾರಾಂತ್ಯದಲ್ಲಿ ಯೋಗಿ ಅವರ ಚಿತ್ರೀಕರಣ ಶುರುವಾಗಲಿದೆ.

“ಲಹರಿ ಫಿಲಂಸ್‌’ ಹಾಗೂ “ವೀನಸ್‌ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ “ಗ್ರಾಮಾಯಣ’ ಸಿನಿಮಾಕ್ಕೆ ದೇವನೂರು ಚಂದು ನಿರ್ದೇಶನ ಮಾಡುತ್ತಿದ್ದಾರೆ.

ಪಕ್ಕಾ ಹಳ್ಳಿ ಹಿನ್ನೆಲೆಯ ಕಥೆ ಹೊಂದಿದ್ದ ಈ ಸಿನಿಮಾದ ಒಂದಷ್ಟು ಚಿತ್ರೀಕರಣ ಕೋವಿಡ್‌ಗೂ ಮೊದಲೇ ಆರಂಭವಾಗಿತ್ತು. ಆದರೆ, ಕೋವಿಡ್‌ನ‌ಲ್ಲಿ ಚಿತ್ರದ ನಿರ್ಮಾಪಕರು ತೀರಿಕೊಳ್ಳುವ ಮೂಲಕ ಸಿನಿಮಾವೂ ಅರ್ಧಕ್ಕೆ ನಿಂತು ಹೋಯಿತು. ಬಳಿಕ “ಲಹರಿ ಫಿಲಂಸ್‌’ ಹಾಗೂ “ವೀನಸ್‌ ಎಂಟರ್‌ಟೈನರ್’ ಜಂಟಿಯಾಗಿ ಈ ಸಿನಿಮಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು, ಮತ್ತೂಮ್ಮೆ ಮುಹೂರ್ತ ನೆರವೇರಿಸಿ ಹೊಸದಾಗಿ ಚಿತ್ರೀಕರಣ ಆರಂಭವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next