Advertisement

“ಧೋನಿ ಟೀಕಿಸುವವರು ತಮ್ಮ  ಸಾಧನೆಯನ್ನು ನೋಡಿಕೊಳ್ಳಲಿ’

08:04 AM Nov 15, 2017 | |

ಕೋಲ್ಕತಾ: ಭಾರತ ಕ್ರಿಕೆಟ್‌ ತಂಡದ ಕೋಚ್‌ ರವಿಶಾಸ್ತ್ರಿ ಮತ್ತೂಮ್ಮೆ ಮಾಜಿ ನಾಯಕ ಎಂ.ಎಸ್‌. ಧೋನಿ ನೆರವಿಗೆ ಬಂದಿದ್ದಾರೆ. ಧೋನಿಯನ್ನು ಟಿ20 ತಂಡದಿಂದ ಕಿತ್ತೂಗೆಯಬೇಕೆಂದು ಹೇಳುವವರೊಮ್ಮೆ ತಮ್ಮದೇ ವೃತ್ತಿಜೀವನದ ಬಗ್ಗೆ ಹಿಂತಿರುಗಿ ನೋಡಬೇಕೆಂದು ವ್ಯಂಗ್ಯ ವಾಡಿದ್ದಾರೆ. 

Advertisement

ಭಾರತ ಕ್ರಿಕೆಟ್‌ನ ಬ್ಯಾಟಿಂಗ್‌ ದಂತಕತೆ ವಿವಿಎಸ್‌ ಲಕ್ಷ್ಮಣ್‌, ವೇಗದ ಬೌಲರ್‌ ಅಜಿತ್‌ ಅಗರ್ಕರ್‌ ಸೇರಿದಂತೆ ಕೆಲವು ಮಾಜಿಗಳು ಧೋನಿಯನ್ನು ಟಿ20 ತಂಡದಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಧೋನಿಯನ್ನು ಯಾರು ಟೀಕಿಸುತ್ತಾರೋ ಅವರೊಮ್ಮೆ ತಮ್ಮ ವೃತ್ತಿಜೀವನದ ಕುರಿತು ಹಿಂತಿರುಗಿ ನೋಡಬೇಕು. ಭಾರತದ ಮಾಜಿ ನಾಯಕನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್‌ ಉಳಿದಿದೆ. ಅಂತಹ ದಂತಕತೆಯ ಬೆನ್ನಿಗೆ ನಿಲ್ಲುವುದು ಭಾರತ ಕ್ರಿಕೆಟ್‌ ತಂಡದ ಕರ್ತವ್ಯ ವಾಗಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಈ ಹೇಳಿಕೆಯ ಮೂಲಕ ಟೀಕಾ ಾರರ ಕೊಡುಗೆ ಯನ್ನೇ ಶಾಸ್ತ್ರಿ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.

ಕೀಪಿಂಗ್‌ನಲ್ಲಿ ಧೋನಿಗಿಂತ ಉತ್ತಮ ರಾದ ಮತ್ತೂಬ್ಬ ಆಟಗಾರರಿಲ್ಲ. ಬ್ಯಾಟಿಂಗ್‌ ಮತ್ತು ಸಮಯ ಪ್ರಜ್ಞೆಯಲ್ಲೂ ಧೋನಿ ಯನ್ನು ಮೀರಿಸುವವರಿಲ್ಲ ಎಂದು ಹೊಗಳಿದ್ದಾರೆ. ಇದೇ ವೇಳೆ ರವಿಶಾಸ್ತ್ರಿ ಭಾರತ ತಂಡದ ಕ್ಷೇತ್ರರಕ್ಷಣೆ ಸಾಮರ್ಥ್ಯವನ್ನು ಭರಪೂರ ಹೊಗಳಿದರು. ಈ ತಂಡ ವಿಶ್ವದಲ್ಲೇ ಅತ್ಯುತ್ತಮವಾಗಿದೆ. ಜತೆಗೆ ಭಾರತದ ಹಿಂದಿನ ತಂಡಗಳಿಗಿಂತ ಭಿನ್ನವಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next