Advertisement

ದೀರ್ಘಾವಧಿಯಲ್ಲೂ, ಅಲ್ಪಾವಧಿಯಲ್ಲೂ ನಿರ್ಮಲಾ ದಾಖಲೆ

09:16 PM Feb 01, 2022 | Team Udayavani |

ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದು ತಮ್ಮ 4ನೇ ಬಜೆಟ್‌ ಅನ್ನು. ಇದು ಅವರು ಮಂಡಿಸಿರುವ ಅತ್ಯಂತ ಅಲ್ಪಾವಧಿಯ ಮುಂಗಡ ಪತ್ರ!

Advertisement

ಹೌದು. 2019ರಲ್ಲಿ ಬರೋಬ್ಬರಿ ಎರಡು ಗಂಟೆ 17 ನಿಮಿಷಗಳ ದೀರ್ಘಾವಧಿ ಬಜೆಟ್‌ ಮಂಡನೆ ಮಾಡುವ ಮೂಲಕ ಚೊಚ್ಚಲ ಬಜೆಟ್‌ ಭಾಷಧಲ್ಲೇ ದಾಖಲೆ ನಿರ್ಮಿಸಿದ್ದ ನಿರ್ಮಲಾ ಸೀತಾರಾಮನ್‌, 2020ರಲ್ಲಿ ತಮ್ಮದೇ ದಾಖಲೆಯನ್ನು ಸರಿಗಟ್ಟಿ ಸುದೀರ್ಘ‌ ಎರಡು ಗಂಟೆ 42 ನಿಮಿಷಗಳ ಕಾಲ ಬಜೆಟ್‌ ಮಂಡಿಸಿದ್ದರು.

ಅದರಲ್ಲೂ  ಕೊನೆಯ ಎರಡು ಪುಟಗಳನ್ನು ಮೊಟಕುಗೊಳಿಸಿ ಚಿಕ್ಕದಾಗಿ ಮುಗಿಸಿದ್ದರು. ಆದರೆ, ಈ ಬಾರಿ ದೀರ್ಘಾವಧಿಯ ಬದಲು ಅಲ್ಪಾವಧಿ ಸಮಯ ಅಂದರೆ, ಕೇವಲ ಒಂದೂವರೆ ಗಂಟೆಯಲ್ಲಿ ಬಜೆಟ್‌ ಓದಿ ಮುಗಿಸಿದ್ದಾರೆ.

ಪದಗಳ ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ, ಸ್ವಾತಂತ್ರಾéನಂತರ 1977ರಲ್ಲಿ  ಹಿರುಬಾಯ್‌ ಎಂ ಪಟೇಲ್‌ ಅವರು ಅತಿ ಕಡಿಮೆ ಕೇವಲ 800 ಪದಗಳ ಬಜೆಟ್‌ ಮಂಡಿಸಿ ದಾಖಲೆ ನಿರ್ಮಿಸಿದ್ದರು. 1991ರಲ್ಲಿ ಪಿ.ವಿ.ನರಸಿಂಹರಾವ್‌ ಸರ್ಕಾರವಿದ್ದಾಗ ಡಾ.ಮನಮೋಹನ್‌ ಸಿಂಗ್‌ ಅವರು 18,650 ಪದಗಳ ಬಜೆಟ್‌ ಮಂಡಿಸಿ, ದೀರ್ಘಾವಧಿ ಬಜೆಟ್‌ ಭಾಷಣ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next